ಚಿಕ್ಕಮಗಳೂರು: ಕಣ್ಣೀರಿಟ್ಟ ನೂತನ ಸಚಿವ ಸಿಟಿ ರವಿ

Recommended Video

      ಚಿಕ್ಕಮಗಳೂರು: ಕಣ್ಣೀರಿಟ್ಟ ನೂತನ ಸಚಿವ ಸಿಟಿ ರವಿ | Oneindia Kannada

      ಚಿಕ್ಕಮಗಳೂರು, ಆಗಸ್ಟ್ 21: ಸಿಎಂ ಯಡಿಯೂರಪ್ಪ ಅವರ ಸೂಚನೆಯಂತೆ ನೆರೆ ವೀಕ್ಷಣೆಗೆ ತೆರಳಿರುವ ಸಚಿವ ಸಿಟಿ ರವಿ ಸಂತ್ರಸ್ತರ ಅಳಲು ಕೇಳಿ ಕಣ್ಣೀರು ಸುರಿಸಿದ್ದಾರೆ.

      ಸಚಿವ ಸಿಟಿ.ರವಿ ಮತ್ತು ಮಾಧುಸ್ವಾಮಿ ಅವರು ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆಯಿಂದಾದ ಹಾನಿಯ ಬಗ್ಗೆ ಪರಿಶೀಲನೆ ಮಾಡಲು ತೆರಳಿದ್ದರು. ಈ ಸಮಯ ಮೂಡಿಗೆರೆ ಬಳಿಯ ಮಲೆಮನೆ ಗ್ರಾಮವೊಂದಕ್ಕೆ ತೆರಳಿದ ಸಂದರ್ಭ ಮನೆ ಕಳೆದುಕೊಂಡವರ ಅಳಲು ಕೇಳಿ ಸಿಟಿ ರವಿ ಅವರೂ ಸಹ ಕಣ್ಣೀರು ಸುರಿಸಿದ್ದಾರೆ.

      CT Ravi Get Emotional While Talking To Flood Victims

      ಮನೆ ಕಳೆದುಕೊಂಡವರು, ಸಿಟಿ ರವಿ ಅವರನ್ನು ಭೇಟಿಯಾಗಿ ತಮ್ಮ ಕಷ್ಟ ವಿವರಿಸಿದರು. ಇದ್ದ ಒಂದೇ ಮನೆ ಪೂರ್ಣ ಬಿದ್ದುಹೋಗಿದೆ. ಇದ್ದ ತುಂಡು ಭೂಮಿ ನೆರೆಗೆ ಸಿಕ್ಕಿ ಓತಪ್ರೋತವಾಗಿದೆ. ಅದನ್ನು ಹದ ಮಾಡಲು ಆಗದ ಪರಿಸ್ಥಿತಿಗೆ ಬಂದಿದೆ. ನಮಗೆ ಜೀವನವೇ ಇಲ್ಲದಾಗಿದೆ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ ಅವರ ನೋವು ಕೇಳಿ ಸಿಟಿ ರವಿ ಸಹ ಕಣ್ಣೀರಿಟ್ಟಿದ್ದಾರೆ.

      ಸಂತ್ರಸ್ತರಿಗೆ ಶೀಘ್ರ ನೆರವಿನ ಭರವಸೆಯನ್ನು ಸಿಟಿ ರವಿ ಅವರು ನೀಡಿದ್ದಾರೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ಎಲ್ಲ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ವೀಕ್ಷಣೆ ಮಾಡುವಂತೆ ಹೇಳಿದ್ದರು.

      CT Ravi Get Emotional While Talking To Flood Victims

      ಇತ್ತ ಸಚಿವ ಸುರೇಶ್ ಕುಮಾರ್, ಕೊಡಗಿಗೆ ತೆರಳಿದ್ದು ಕುಶಾಲ್ ನಗರದ ಆಸುಪಾಸಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆ. ಸಂತ್ರಸ್ತರಿಗೆ ಶೀಘ್ರ ಅನುದಾನದ ಭರವಸೆಯನ್ನೂ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+