Get Updates
Get notified of breaking news, exclusive insights, and must-see stories!

ಸಿ.ಟಿ.ರವಿ ನನ್ನನ್ನು ಬಿಜೆಪಿಯಿಂದ ಹೊರದೂಡಿದ್ರು, ಆದ್ರೆ ಕ್ಷೇತ್ರದ ಜನ ಅವರನ್ನೇ ಹೊರಗಟ್ಟಿದ್ದಾರೆ: ಎಂ.ಪಿ.ಕುಮಾರಸ್ವಾಮಿ

ಚಿಕ್ಕಮಗಳೂರು, ಮೇ, 15: ಸಿ.ಟಿ.ರವಿ ನನ್ನನ್ನು ಬಿಜೆಪಿಯಿಂದ ಕಳುಹಿಸಿದರು. ಆದರೆ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯಿತು ಎಂದು ಸಿ.ಟಿ.ರವಿ ಸೋಲನ್ನು ಸಂಭ್ರಮಿಸುವ ರೀತಿಯಲ್ಲಿ ಎಂ.ಪಿ. ಕುಮಾರಸ್ವಾಮಿ ಅವರು ಮೂಡಿಗೆರಲ್ಲಿ ವ್ಯಂಗ್ಯವಾಡಿದ್ದಾರೆ.

ಮೂಡಿಗೆರೆ ಪಟ್ಟಣದ ತಮ್ಮ ನಿವಾಸದಲ್ಲಿ ಮಾತಾನಾಡಿದ ಅವರು, ಚಿಕ್ಕಮಗಳೂರು ಕ್ಷೇತ್ರ ಇನ್ಮುಂದೆ ವೀರಶೈವ ಲಿಂಗಾಯುತರ ಕ್ಷೇತ್ರ. ಸಿ.ಟಿ.ರವಿ ದತ್ತಮಾಲೆ, ಅಹಿತಕರ ಘಟನೆ ಇಟ್ಟುಕೊಂಡು ಹೋದರೂ ಇನ್ಮುಂದೆ ಏನು ಆಗುವುದಿಲ್ಲ. ಮೊನ್ನೆಯಿಂದ ಅದು ವೀರಶೈವ ಲಿಂಗಾಯುತರ ಕ್ಷೇತ್ರ ಎಂದು ಲೇವಡಿ ಮಾಡಿದರು.

Chikkamagaluru constituency People ignored for CT Ravi: M.P.Kumaraswamy

ಚಿಕ್ಕಮಗಳೂರಲ್ಲಿ ಒಕ್ಕಲಿಗರು ಇರುವುದು ಆರೇ ಸಾವಿರ ಮತದಾರರು ಅಷ್ಟೆ, ಯಡಿಯೂರಪ್ಪ ಸ್ವಿಚ್ ಆಫ್ ಮಾಡಲಿಲ್ಲ. ಮಾಡಿದರೆ ಬಿಜೆಪಿಗೆ 50 ಸೀಟ್ ಅಷ್ಟೇ ಬರುತ್ತಿತ್ತು. ಸಿ.ಟಿ.ರವಿ ಅವರನ್ನು ಬಿಜೆಪಿಯಿಂದ ಖಾಲಿ ಮಾಡಿಸಿದರು. ಅಲ್ಲದೆ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯಿತು. ನನ್ನನ್ನ ಬಿಟ್ಟಿದ್ದಕ್ಕೆ ಐದು ಕ್ಷೇತ್ರ ಹೋಗುತ್ತದೆ ಅಂತಾ ಸಾಮಾನ್ಯ ಜನ ಹೇಳುತ್ತಾ ಇದ್ದಾರೆ ಎಂದರು.

ಇನ್ನು ತಮ್ಮ ಸೋಲಿನ ಬಗ್ಗೆ ಮಾತಾನಾಡಿದ ಅವರು, ಜೆಡಿಎಸ್‌ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತಿದ್ದೇನೆ. ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡುವುದು ಆಗುತ್ತಿರಲಿಲ್ಲ, ಕಷ್ಟವಾಗಿತ್ತು. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಎಲೆಕ್ಷನ್ ಮಾಡುತ್ತೇನೆ. ಹಾಗೆಯೆ ಮೂಡಿಗೆರೆ ಬಿಜೆಪಿಗೆ ಜೀವ ತುಂಬಿದವನೇ ನಾನು ಎಂದರು.

ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ

ಹಾಗೆಯೆ ನಾನು ಹಿಂದೆ ಯಡಿಯೂರಪ್ಪನ ಕಣ್ಣೀರನಲ್ಲಿ ಬಿಜೆಪಿ ಸರ್ಕಾರಕೊಚ್ಚಿ ಹೋಗುತ್ತದೆ ಎಂದಿದ್ದೆ‌. ಇವತ್ತು ಆ ಪಕ್ಷದ ನಾಯಕರಿಗೆ ಅರಿವಾಗಿದೆ. ಅಲ್ಲದೆ ಅಧಿಕಾರ ಬಂದ ಸಂದರ್ಭದಲ್ಲಿ ಆ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ತಿನ್ನಬಾರದ ಪೆಟ್ಟು ತಿನ್ನುತ್ತಾರೆ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ಹೇಳಿದರು.

ಹುಬ್ಬಳ್ಳಿ ತಾಲೂಕಿನ ನೂಲ್ವಿ ಹೊರವಲಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಅವತ್ತು ಒಬ್ಬ ವ್ಯಕ್ತಿ ಉದ್ದೇಶಿಸಿ ಮಾತಾಡಿರಲಿಲ್ಲ. ಯಡಿಯೂರಪ್ಪ ಎಲ್ಲರಿಗೂ ಬೇಕಾದ ನಾಯಕರು. ಅವತ್ತು ಎಲ್ಲ ಸಮಾಜದ ನಾಯಕರು ಯಡಿಯೂರಪ್ಪರನ್ನು ಮಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂದಿದ್ದರು. ಆದರೆ ಯಾವುದೋ ಕೆಟ್ಟ ಉದ್ದೇಶ, ಅಥವಾ ಸ್ವಾರ್ಥಕ್ಕೆ ತೆಗೆದುಕೊಂಡ ನಿರ್ಣಯ ಇಂದಿನ ಹೀನಾಯ ಪರಿಸ್ಥಿತಿಗೆ ಕಾರಣವಾಗಿದೆ ಎಂದರು.

ಹಿಂದೆ ಪರ್ಸೆಂಟೇಜ್ ಬಗ್ಗೆ ದುರಹಂಕಾರಿಯಾಗಿ ಮಾತನಾಡಿದ್ದರು. ಗುಂಡಾ ವೃತ್ತಿಯಲ್ಲಿ ದಾಳಿ ಮಾಡಿದ್ದರು. ಅದರ ಪರಿಣಾಮವೇ ಇಂದು ಕಾಡುತ್ತಿದೆ ಎಂದು ಸ್ವಾಮೀಜಿ ಹೇಳಿದರು. ಅಲ್ಲದೆ ಸ್ವಾಮೀಜಿ ಗಂಭಿರ ಹೇಳಿಕೆ ಮಾಡಿದಾಗ, ಚಿಂತನ‌ ಮಂಥನ ಮಾಡಬೇಕು. ಕೇಸರಿ ಪಡೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಖಾವಿಧಾರಿಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾವಿ ದಾರಿಗಳು ಪಾಠ ಮಾಡಿದ್ದರು, ಆದರೆ ಅವರು ಪಾಠವನ್ನು ಕಲಿಯಲಿಲ್ಲ. ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೆ ಬಿಜೆಪಿ‌ ಇಂದಿನ ಸ್ಥಿತಿಗೆ ಕಾರಣವಾಗಿದೆ. ಯಡಿಯೂರಪ್ಪ, ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್, ಕೆ.ಎಸ್‌.ಈಶ್ವರಪ್ಪ ಅವರನ್ನು ಕಡೆಗಣಸಿರೋದೆ ಇದಕ್ಕೆಲ್ಲ ‌ಕಾರಣ. ಪಕ್ಷ ಕಟ್ಟದ ವ್ಯಕ್ತಿ ಮಾತು ಕೇಳಬೇಕು ಅಂದರೆ ಏನು.? ಎಂದ ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಬಿ.ಎಲ್.ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವಾಗ ಹೇಗೆ ನಡೆಸಿಕೊಂಡರು ಎನ್ನುವ ವಿಚಾರ ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಚುನಾವಣೆ ‌ಒಂದೇ ಅಂತಾ ತಿಳಿದುಕೊಂಡಿದ್ದರು. ಜಗದೀಶ್ ಶೆಟ್ಟರ್, ಸವದಿಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು ಎಂದರು. ಹಾಗೆಯೆ ಬ್ರಾಹ್ಮಣ ವಿಚಾರವಾಗಿ ನಾನು ಆರು ತಿಂಗಳ ನಂತರ ಸುದ್ದಿಗೋಷ್ಠಿ ಮಾಡುತ್ತೇನೆ. ರಾಜ್ಯದಲ್ಲಿ ಏನಾಗಿದೆ ಅನ್ನುವ ದಾಖಲೆ ಇದೆ ಎಂದರು.

ಬ್ರಾಹ್ಮಣರ ಬಗ್ಗೆ ಮಾತನಾಡುವುದಕ್ಕೆ ನನಗೆ ಭಯ ಇಲ್ಲ. ನನಗೆ ಯಾರ ಅಂಕುಶವೂ ಇಲ್ಲ ಎಂದು ಸ್ವಾಮೀಜಿ ಗುಡುಗಿದರು.
ರಾಜ್ಯದ ನಾಯಕರನ್ನು ಬಹಳ‌ ಕೆಟ್ಟ ರೀತಿಯಲ್ಲಿ ‌ನೋಡಿಕೊಂಡರು. ಹಾಗೆಯೆ ದಕ್ಷಿಣ ಭಾರತದ ಕುದುರೆಗಳನ್ನು ಕತ್ತೆ ಅಂದುಕೊಂಡಿದ್ದೇ ಇದಕ್ಕೆಲ್ಲ ಕಾರಣ ಎಂದರು.

ಕರ್ನಾಟಕದ ನಾಯಕರನ್ನು ಬಿಟ್ಟು ಏನಾದರೂ ಮಾಡುತ್ತೇನೆ ಅಂದುಕೊಂಡರು. ರಾಜ್ಯದ ಮತದಾರರು ಬುದ್ಧಿಗೇಡಿಗಳಾ? ರಾಷ್ಟ್ರ ನಾಯಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಅಲ್ಲದೆ ರಾಜ್ಯವನ್ನು ಸರಿಯಾದ ರೀತಿ ನಡೆಸುವ ವ್ಯಕ್ತಿ ಸಿಎಂ ಆಗಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಇನ್ನು ಸಮರ್ಥ, ಯೋಗ್ಯ ವ್ಯಕ್ತಿ ಸಿಎಂ ಆಗಬೇಕು. ಕರ್ನಾಟಕ‌ವನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವವರು ಸಿಎಂ ಆಗಬೇಕು. ಲಿಂಗಾಯತ ನಾಯಕನಿಗೆ ಉಪಮುಖ್ಯಮಂತ್ರಿ ಸ್ಥಾನ ‌ನೀಡಬೇಕು. ಅದರಲ್ಲೂ ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಇದು ನಮ್ಮ ಅಭಿಪ್ರಾಯ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+