ಚಿಕ್ಕಮಗಳೂರಿಗೆ ಕೊನೆಗೂ ಮೆಡಿಕಲ್ ಕಾಲೇಜು ಅಸ್ತು ಎಂದ ಕೇಂದ್ರ
ಚಿಕ್ಕಮಗಳೂರು, ಮಾರ್ಚ್ 20: ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಕೇಂದ್ರ ಸರ್ಕಾರ ಕೊನೆಗೂ ಸಮ್ಮತಿ ನೀಡಿದೆ. ಇದಕ್ಕಾಗಿ ಸರ್ಕಾರದ ಜೊತೆಗೆ ಕೆಲ ಖಾಸಗಿ ಸಂಸ್ಥೆಗಳು ಪ್ರಯತ್ನ ನಡೆಸಿದ್ದರೂ ಅದು ಫಲ ನೀಡಿರಲಿಲ್ಲ.
ಸರ್ಕಾರಿ ಆಸ್ಪತ್ರೆ ಉನ್ನತೀಕರಣ ಹಾಗೂ ವೈದ್ಯಕೀಯ ಕಾಲೇಜು ತೆರೆಯುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೂ ನಡೆದಿತ್ತು. ಈ ಹಿಂದೆ ಸಿ.ಟಿ ರವಿ ಸಚಿವರಾಗಿದ್ದ ದಿನಗಳಲ್ಲಿ ಹಾಗೂ ಇತ್ತೀಚೆಗೆ ಈ ಕುರಿತು ಮತ್ತಷ್ಟು ಪ್ರಯತ್ನ ತೀವ್ರಗೊಂಡಿತ್ತು.
ರಾಜ್ಯ ಸರ್ಕಾರ ಒಂದಿಷ್ಟು ಹಣವನ್ನು ಮಂಜೂರು ಮಾಡಿದ್ದೇ ಅಲ್ಲದೆ ಚಿಕ್ಕಮಗಳೂರು ಸಮೀಪದ ಕದ್ರಿ ಮಿದ್ರಿ ಗ್ರಾಮದ ಸಮೀಪ ಜಮೀನನ್ನು ಗುರುತಿಸಲಾಗಿತ್ತು. ಆದರೆ ಜಮೀನಿಗೆ ಈಗ ಡಿಮ್ ಫಾರೆಸ್ಟ್ ಅಡ್ಡಿ ಎದುರಾಗಿದೆ.

ಇದೀಗ ಕೇಂದ್ರ ಆರೋಗ್ಯ ಸಚಿವರು ವೈದ್ಯಕೀಯ ಕಾಲೇಜಿಗೆ ಮಂಜೂರಾತಿಯನ್ನು ನೀಡಿ ಪತ್ರವನ್ನು ಇಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಹಸ್ತಾಂತರಿಸಿದರು.












Click it and Unblock the Notifications