ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ್ ಪತ್ನಿ ಸೇರಿ 8 ಜನರ ವಿರುದ್ಧ ಬಂಧನದ ವಾರೆಂಟ್
ಚಿಕ್ಕಮಗಳೂರು, ನವೆಂಬರ್ 04: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಅವರ ಪತ್ನಿಗೆ ಈಗ ಬಂಧನದ ಭೀತಿ ಎದುರಾಗಿದೆ.
ಮಾಳವಿಕಾ ಸಿದ್ಧಾರ್ಥ್ ಸೇರಿದಂತೆ ಎಂಟು ಜನರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಅನ್ನು ಹೊರಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಜೆಎಂಎಫ್ ಸಿ ಕೋರ್ಟ್ ನಿಂದ ಬುಧವಾರ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ.

ಸಿದ್ಧಾರ್ಥ್ ಒಡೆತನದ ಎಬಿಸಿ ಸಂಸ್ಥೆಗೆ ಕಾಫಿ ಬೆಳೆಯನ್ನು ನೀಡಿದ್ದ ಸುಮಾರು 300ಕ್ಕೂ ಹೆಚ್ಚು ಬೆಳೆಗಾರರಿಗೆ ಸಂಸ್ಥೆಯು ಹಣವನ್ನು ಪಾವತಿಸಿರಲಿಲ್ಲ. 100 ಕೋಟಿಗೂ ಅಧಿಕ ಹಣವನ್ನು ಬೆಳಗೆಗಾರರಿಗೆ ನೀಡದೇ ಬಾಕಿ ಉಳಿಸಿಕೊಳ್ಳಲಾಗಿತ್ತು. ಹೀಗಾಗಿ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ನಂದೀಶ್ ಕೆ ಎಂಬುವವರು ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳವಿಕಾ ಸಿದ್ಧಾರ್ಥ್ ಒಳಗೊಂಡು ಎಂಟು ಮಂದಿಗೆ ವಾರೆಂಟ್ ನೀಡಲಾಗಿದೆ.
Recommended Video
Hindu ಭಾವನೆಗಳನ್ನು ಘಾಸಿಗೊಳಿಸಿದ್ರಾ Amithabh bachan | KBC | Oneindia Kannada












Click it and Unblock the Notifications