ಮಾಯಮಂತ್ರ ಮಾಡಿ ತೈಲ ಬೆಲೆ ಕಡಿಮೆ ಮಾಡುವುದಕ್ಕೆ ಆಗಲ್ಲ: ಬಿವೈಆರ್
ಚಿಕ್ಕಮಗಳೂರು, ಸೆಪ್ಟೆಂಬರ್.09: ದೇಶದ ಪ್ರಧಾನಿಗಳು ಒಂದೇ ಸರಿ ಮಾಯ ಮಂತ್ರ ಮಾಡಿ ತೈಲ ಬೆಲೆ ಕಡಿಮೆ ಮಾಡಲು ಆಗೋದಿಲ್ಲ ಎಂದು ಬಿ.ಎಸ್.ವೈ ಪುತ್ರ ರಾಘವೇಂದ್ರ ತಿಳಿಸಿದರು.
ಬಾಳೆಹೊನ್ನೂರಿನಲ್ಲಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದು, ಸೋಮವಾರ (ಸೆಪ್ಟೆಂಬರ್.10) ಭಾರತ್ ಬಂದ್ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿದ್ದು, ಡಾಲರ್ಸ್ ಮುಂದೆ ಭಾರತದ ಕರೆನ್ಸಿ ಹೆಚ್ಚಾಗಿದೆ.ಇದು ಭಾರತ ದೇಶದ ಮೇಲೆ ಹೊಡೆತ ಬಿದ್ದಿದೆ ಎಂದರು.
ಈ ಕುರಿತು ದೆಹಲಿಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಿದೆ. ಆದಷ್ಟು ಬೇಗ ತೈಲ ಬೆಲೆ ಇಳಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿ ಆಗುತ್ತದೆ. ಇದೆಲ್ಲಾ ತಿಳಿದಿದ್ದರೂ ಕಾಂಗ್ರೆಸ್ ನವರು ಭಾರತ್ ಬಂದ್ ಗೆ ಕರೆ ನೀಡಿದ್ದಾರೆ ಎಂದು ಆರೋಪಿಸಿದರು.

ಸಚಿವ ಡಿ.ಕೆ ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ ಪತ್ರದಲ್ಲಿರುವ ಸಹಿ ನನ್ನದಲ್ಲ ಎಂದು ಯಡಿಯೂರಪ್ಪನವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಿಟ್ ಆಂಡ್ ರನ್ ಮಾಡಬಾರದು.
ಅವರು ಕಾನೂನು ಚೌಕಟ್ಟಿನಲ್ಲಿಯೇ ಎದುರಿಸಬೇಕು. ಅದು ಬಿಟ್ಟು ಸಾರ್ವಜನಿಕವಾಗಿ ಈ ರೀತಿ ಅಪಪ್ರಚಾರ ಮಾಡಬಾರದು ಎಂದು ಹೇಳಿದರು.












Click it and Unblock the Notifications