ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ: ಎಚ್.ಡಿ.ತಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ವ್ಯಂಗ್ಯ

ಚಿಕ್ಕಮಗಳೂರು, ಮೇ 21 : ಶಾಸಕ ಎಚ್.ಡಿ.ತಮಯ್ಯ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆಯೇ, ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯ ಶಾಸಕರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಚಿಕ್ಕದೇವನೂರು ರವಿ ವ್ಯಂಗ್ಯವಾಡಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವನಹಳ್ಳಿ ಕೆರೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಶಾಸಕ ಎಚ್.ಡಿ.ತಮಯ್ಯ ಹೇಳಿದ್ದು, ಏನು ಅವ್ಯವಹಾರ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಕಳಪೆ ಕಾಮಗಾರಿ ಹಾಗೂ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿಕೆ ನೀಡಿದ್ದು ತನಿಖೆ ನಡೆಸಲು ಪಕ್ಷ ಬೆಂಬಲಿಸುತ್ತದೆ. ಕೋಟೆಕೆರೆ ಅಭಿವೃದ್ದಿಯನ್ನು ಏಕೆ ಕೈಬಿಟ್ಟರು ಗೊತ್ತಿಲ್ಲ. ಅದನ್ನು ಸೇರಿಸಿಕೊಂಡು ತನಿಖೆ ನಡೆಸಲು ಮುಂದಾಗಲಿ ಎಂದು ಒತ್ತಾಯಿಸಿದರು.

BJP Spokesperson Chikkadevanur Ravi Lashes Out At H.D thammaiah

ಶಾಸಕ ಎಚ್.ಡಿ.ತಮಯ್ಯ ಜನಪರವಾದ ಕೆಲಸ ಮಾಡುತ್ತಾರೆಂಬ ವಿಶ್ವಾಸವನ್ನು ಪಕ್ಷ ಇರಿಸಿದ್ದು, ಒಂದು ವೇಳೆ ಶಾಸಕರು ತಪ್ಪೆಸಗಿದಾಗ ಟೀಕಿಸುವ ಮತ್ತು ಸರಿದಾರಿಯಲ್ಲಿ ನಡೆಯುವಂತೆ ಬಿಜೆಪಿ ಪಕ್ಷ ಎಚ್ಚರಿಕೆಯನ್ನು ನೀಡುತ್ತದೆ ಎಂದು ಹೇಳಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಕ್ಷಣ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆಯೆ? ಅವರು ನಮ್ಮ ಪಕ್ಷದಲ್ಲಿ ಇರುವಾಗ ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾದಾಗ ಪ್ರಜಾಪ್ರಭುತ್ವ ಇರಲಿಲ್ಲವೇ? ಪಕ್ಷ ಬಿಟ್ಟು ಶಾಸಕರಾದ ಕೂಡಲೇ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆಯೇ? ಅದನ್ನು ಮರು ಸ್ಥಾಪಿಸುತ್ತೇನೆ ಎಂದಿರುವುದು ಶಾಸಕರ ತಿಳು ವಳಿಕೆ ಕೊರತೆ ತೋರಿಸುತ್ತಿದೆ. ಪ್ರಜಾಪ್ರಭುತ್ವ ಕಗ್ಗೊಲೆ ಎಂಬ ಹೇಳಿಕೆ ಬಾಲಿಶವಾಗಿದ್ದು, ಭಾರತದ ಪ್ರಜಾಪ್ರಭುತ್ವ ಯಾವತ್ತೂ ಗಟ್ಟಿಯಾಗಿಯೇ ಇರುತ್ತದೆ. ಅದರ ಪರಿಣಾಮವೇ ನೀವು ಶಾಸಕರಾಗಿ ಆಯ್ಕೆಯಾಗಿದ್ದೀರಿ ಎನ್ನುವುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಮರುಬಳಕೆ ವಸ್ತುಗಳ ಸಂಗ್ರಹ ಮಳಿಗೆಗೆ ಶಾಸಕ ಹೆಚ್.ಡಿ.ತಮ್ಮಯ್ಯ ಚಾಲನೆ

ಚಿಕ್ಕಮಗಳೂರು: ಮನುಷ್ಯ ತನ್ನ ದೇಹವನ್ನು ಎಷ್ಟರ ಮಟ್ಟಿಗೆ ಶುಚಿತ್ವ ಹೊಂದುವನು ಅದೇ ರೀತಿಯಲ್ಲಿ ನಗರವನ್ನು ಶುಚಿತ್ವದಿಂದ ಕೂಡಿರುವ ದೃಷ್ಟಿಯಿಂದ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ಒಂದೆಡೆ ಶೇಖರಿಸಿ ಪುನಃ ಅವುಗಳನ್ನು ಮರುಬಳಕೆ ಮಾಡಲು ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

BJP Spokesperson Chikkadevanur Ravi Lashes Out At H.D thammaiah

ನಗರದ ಎಂ.ಜಿ.ರಸ್ತೆಯ ನಗರಸಭಾ ಕಟ್ಟಡದಲ್ಲಿ ಪೌರಾಡಳಿತ ನಿರ್ದೇಶಲಯ ಬೆಂಗಳೂರು ಇವರ ನಿರ್ದೇಶದಂತೆ ನಗರದಲ್ಲಿ 'ನನ್ನ ಲೈಫ್, ನನ್ನ ಸ್ವಚ್ಚ ನಗರ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮರುಬಳಕೆ ವಸ್ತುಗಳ ಸಂಗ್ರಹಣೆಯ ನೂತನ ಮಳಿಗೆಯನ್ನು ಭಾನುವಾರ ಚಾಲನೆ ನೀಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡ ನಂತರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಗರ ಸ್ವಚ್ಚತೆ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನಗರಸಭಾಗೂ ತಮಗೂ ಹಿಂದಿನಿಂದಲೂ ಅನೇಕ ವರ್ಷಗಳ ಅವಿಭಾವ ಸಂಬಂಧವಿದೆ. ನಗರ ಸ್ವಚ್ಚತೆ ಕುರಿತು ಕಳೆದ ಕೆಳ ತಿಂಗಳಿನಿಂದ ಕೆಲಸ ಪ್ರಾರಂಭವಾಗಿದ್ದು ಇದೀಗ ಅಧಿಕೃತವಾಗಿ ಪ್ರಾರಂಭಿಸಿ ಜನಸೇವೆಗೆ ನೀಡಲಾಗಿದೆ ಎಂದರು.

ನಗರದಲ್ಲಿ ಮರುಬಳಕೆಗೆ ವಸ್ತುಗಳನ್ನು ಶೇಖರಿಸಲು ಕೆಲವು ನಿಯಮಗಳನ್ನು ಅನುಸರಿಸುವ ನಿಟ್ಟಿನಲ್ಲಿ ಆಟಿಕೆ ವಸ್ತುಗಳು, ಬಟ್ಟೆ, ಹಳೆಯ ಜೀನ್ಸ್, ಸಮವಸ್ತ್ರ, ಸೀರೆಗಳು, ದಿನಪತ್ರಿಕೆ, ಹಳೆಯ ಪುಸ್ತಕಗಳು, ಪೆನ್, ಪ್ಲಾಸ್ಟಿಕ್ ಚೀಲ, ಬ್ಯಾಗ್‍ಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಾರ್ವಜನಿಕರು ನೇರವಾಗಿ ಮಳಿಗೆಗಳಿಗೆ ನೀಡಿದರೆ ಗೌರವಯುತವಾಗಿ ಸಣ್ಣಮಟ್ಟಿನ ಬಹುಮಾನಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಹೇಳಿದರು.

ಚಿಕ್ಕಮಗಳೂರು ತಾಲೂಕು ಪ್ರವಾಸಿಗರ ತಾಣವಾಗಿರುವ ಹಿನ್ನೆಲೆಯಲ್ಲಿ ಅತಿಹೆಚ್ಚು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರದ ಐದು ಕಡೆಗಳಲ್ಲಿ ತ್ಯಾಜ್ಯ ಸಂಗ್ರಹಣೆ ಶೇಖರಿಸುವ ಮಳಿಗೆಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲಾಗಿದೆ. ಸಾರ್ವಜನಿಕರು ಯಾವುದೇ ಉಪಯೋಗಕ್ಕೆ ಬಾರದ ವಸ್ತುಗಳನ್ನು ಮಳಿಗೆಗಳಿಗೆ ನೀಡಿದರೆ ಉಪಯೋಗಕ್ಕೆ ಬರುವ ವಸ್ತುಗಳನ್ನು ಮರುಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+