ಹಿಜಾಬನ್ನೇ ಶಾಲಾ ಕಾಲೇಜುಗಳಲ್ಲಿ ಯೂನಿಫಾರ್ಮ್ ಮಾಡಲಿ: ಸಿ.ಟಿ.ರವಿ
ಚಿಕ್ಕಮಗಳೂರು, ಫೆಬ್ರವರಿ 08: "ಇಷ್ಟು ವರ್ಷ ಇಲ್ಲದ ವಿವಾದ ಈಗೇಕೆ ಬಂತು, ನಾನೇ ಬೇರೆ ಎನ್ನುವ ಮನಸ್ಥಿತಿ ಅಪಾಯಕಾರಿ," ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಶಾಲಾ ಕಾಲೇಜಿನಲ್ಲಿ ಹಿಜಾಬ್ ಅನ್ನು ಯೂನಿಫಾರಂ ಮಾಡಿ, ಶಾಲೆಯಲ್ಲಿ ಇರಬೇಕಾದ್ದು ಯೂನಿಫಾರಂ. ಅದು ಎಲ್ಲರಿಗೂ ಒಂದೇ. ಅಲ್ಲಿಂದಲೇ ನಾನು ಬೇರೆ, ನೀನು ಬೇರೆ ಎಂದರೆ ಶಾಲೆಯಿಂದಲೇ ಪ್ರತ್ಯೇಕತೆ ವಿಷ ಬೀಜ ಹುಟ್ಟಲು ಶುರುವಾಗುತ್ತದೆ," ಎಂದರು.
"ನಾನೇ ಬೇರೆ, ನೀನೆ ಬೇರೆ ಎಂಬುವುದು ಜಾತ್ಯತೀತತೆಯೂ ಅಲ್ಲ, ಸರ್ವಧರ್ಮ ಸಮಭಾವವೂ ಅಲ್ಲ, ದೇಶದ ಹಿತದೃಷ್ಟಿಗೆ ಒಳ್ಳೇ ಸಂಗತಿ ಅಲ್ಲ ಅಪಾಯಕಾರಿ ಎಂದರು. ಈ ಬಗ್ಗೆ ತಿಳಿ ಹೇಳಬೇಕಾದ ರಾಜಕೀಯ ನಾಯಕರು ಹಾಗೂ ಪಕ್ಷಗಳು ವಿವಾದಕ್ಕೆ ಗೊಬ್ಬರ ನೀರು ಹಾಕಿ ಓಟ್ ಪಡೆಯುವ ಸಂಚಿನ ಪರಿಣಾಮ ರಾಜ್ಯದ ಉದ್ದಗಲಕ್ಕೂ ವಿವಾದ ಉದ್ಭವವಾಗಿದೆ ಎಂದರು. ಜಗತ್ತಿನಾದ್ಯಂತ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುವುದು ಕಂಡು ಬರುತ್ತದೆ," ಎಂದು ಅಭಿಪ್ರಾಯಿಸಿದರು.
"ಜಗತ್ತಿನಾದ್ಯಂತ ಅಲ್ಪಸಂಖ್ಯಾತರು ನಮಗೆ ಸಮಾನ ಹಕ್ಕು ಕೊಡಿ ಅಂತಾ ಹೋರಾಟ ಮಾಡುತ್ತಿದ್ದಾರೆ. ಆದರೆ ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ಬಹುಸಂಖ್ಯಾತರು ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಬಹುಸಂಖ್ಯಾತರು ಸಮಾನತೆ ಇರಲಿ ಅಂತಾ ಹೇಳುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರು ನಿಮಗಿಂತ ನಾವು ಬೇರೆ, ನಮ್ಮದೆ ನಡೆಯಬೇಕು ಅಂತಾ ಹೇಳುತ್ತಿದ್ದಾರೆ. ಇದು ಈ ಜಗತ್ತಿನಲ್ಲಿ ಬೇರೆ ಎಲ್ಲೂ ನಡೆಯಲು ಸಾಧ್ಯವಿಲ್ಲ ಇಲ್ಲಿ ಮಾತ್ರ ನಡೆಯುವುದು," ಎಂದು ವ್ಯಂಗ್ಯವಾಡಿದ್ದರು.

ಕಳ್ಳ ಯಾರು ಪೊಲೀಸರು ಯಾರು ಅಂತಾ ಹೇಗೆ ಗೊತ್ತಾಗೋದು?
"ಯೂನಿಫಾರ್ಮ್ ಇಸ್ ಯೂನಿಫಾರ್ಮ್. ಪೊಲೀಸರಿಗೆ ಒಂದು ಯೂನಿಫಾರ್ಮ್ ಇದೆ, ಮುಸ್ಲಿಂ ಲೇಡಿ ಒಬ್ಬರು ಪೊಲೀಸಾಗಿ ಆಯ್ಕೆ ಆಗ್ತಾರೆ, ಅವರು ಧರ್ಮದ ಪ್ರಕಾರ ಹಿಜಾಬ್ ಧರಿಸಬೇಕೆಂದರೆ ಕೊಡೋದಕ್ಕೆ ಆಗುತ್ತಾ, ಅವಾಗ ಕಳ್ಳ ಯಾರು ಪೊಲೀಸರು ಯಾರು ಅಂತಾ ಹೇಗೆ ಗೊತ್ತಾಗೋದು. ಗೊತ್ತಾಗೋದಕ್ಕೆ ಒಂದು ಯೂನಿಫಾರ್ಮ್ ಅಂತಾ ಇರೋದು. ಪೊಲೀಸರಿಗೆ ಒಂದು ಐಡೆಂಟಿಟಿ ಇರೋದಕ್ಕೆ ಅವರು ಪೊಲೀಸರು ಅಂತಾ ಗೊತ್ತಾಗೋದು. ನಾಳೆ ಸೈನ್ಯದಲ್ಲಿ ಸೆಲೆಕ್ಟ್ ಆಗೋರು ನಾವು ಪ್ರತ್ಯೇಕ ಇರಬೇಕಂದ್ರೆ ಆಗ ಏನು ಮಾಡೋದು. ಒಳ್ಳೆಯ ಉದ್ದೇಶಕ್ಕೆ ಆದ್ರೆ ಅದು ಬೇರೆ ವಿಚಾರ, ಆದರೆ ನಾನೇ ಬೇರೆ ಅನ್ನೋ ಮನಸ್ಥಿತಿ ಯೇ ಒಳ್ಳೆಯದಲ್ಲ ಎಂದರು.
"ಜಗತ್ತಿನಲ್ಲಿ ಬಹಳ ಸಂಕಷ್ಟ ಅನುಭವಿಸಿರುವ ರಾಷ್ಟ್ರ ಅಂದರೆ ಅದು ಭಾರತ. ಅದೇ ರೀತಿ ಸಂಕಷ್ಟ ಅನುಭವಿಸಿ ಪ್ರತೀಕಾರ ಮಾಡದಿರುವ ರಾಷ್ಟ್ರಕೂಡ ಭಾರತ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುವ ಘಟನೆಗಳು ಜಗತ್ತಿನೆಲ್ಲೆಡೆ ಕಂಡುಬರುತ್ತದೆ, ಆದರೆ ಜಗತ್ತಿನಾದ್ಯಂತ ಅಲ್ಪಸಂಖ್ಯಾತರು ನಮಗೆ ಸಮಾನಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಾರೆ. ಆದರೆ ದುರ್ದೈವ, ನಮ್ಮ ದೇಶದಲ್ಲಿ ಬಹುಸಂಖ್ಯಾತರು ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ," ಎಂದು ಹೇಳಿದರು.
"ಬಹುಸಂಖ್ಯಾತರು ಸಮಾನತೆ ಇರಲಿ ಎಂದು ಹೇಳುತ್ತಿದ್ದಾರೆ. ಅಲ್ಪಸಂಖ್ಯಾತರು ನಮ್ಮದೇ ಬೇರೆ, ನಮ್ಮದೇ ನಡೀಬೇಕು ಎಂದು ಹೇಳುತ್ತಿದ್ದಾರೆ, ಜಗತ್ತಿನಲ್ಲಿ ಎಲ್ಲೂ ನಡೆಯಲು ಸಾಧ್ಯವಾಗದ್ದು ಭಾರತದಲ್ಲಿ ಮಾತ್ರ ನಡೀತಿದೆ ಎಂದರು. ಅದಕೊಸ್ಕರನೇ ಶಾಲೆಯಲ್ಲಿ ಯೂನಿಫಾರಂ ಇರುವುದು. ಅಲ್ಲಿ ನಾನು ಬೇರೆ ಎಂದರೆ ಅಲ್ಲಿಂದಲೇ ಪ್ರತ್ಯೇಕತೆ ಹುಟ್ಟಿಕೊಳ್ಳುತ್ತದೆ. ನಾನೇ ಬೇರೆ ನೀನೇ ಬೇರೆ ಎನ್ನುವುದು ಜಾತ್ಯಾತೀತತೆ ಅಲ್ಲ," ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.












Click it and Unblock the Notifications