Bhadra Dam: ಜೂನ್ 5 ಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ?
Bhadra Dam: ರಾಜ್ಯಕ್ಕೆ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾಗೆಯೇ ಕೆಲವೆಡೆ ಕೆರೆ-ಕಟ್ಟೆಗಳು ತುಂಬಿ ಹರಿದಿವೆ. ಕೆಲ ಜಲಾಶಯಗಳಿಗೂ ಸಹ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಹಾಗಾದರೆ ಇಂದು (ಜೂನ್ 5) ಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜೂನ್ ಆರಂಭವಾಗುವ ಮುನ್ನ ಮುಂಗಾರು ಎಂಟ್ರಿ ಕೊಟ್ಟ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ಇದೀಗ ಮತ್ತೆ ಅದೇ ಆಡಿದ್ದೇ ಆಟವೆಂಬಂತೆ ಬಿಸಿಲಿನ ವಾತಾವರಣ ಮುಂದುವರೆದಿದೆ. ಕೆಲವೆಡೆ ಮಾತ್ರ ಮಳೆ ಬಿಳುತ್ತಿದೆ.

ಅದರಲ್ಲೂ ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಮಳೆ ಪ್ರಮಾಣ ತಗ್ಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತಗ್ಗಿದೆ. ಪರಿಣಾಮ ಭದ್ರಾ ಜಲಾಶಯದ ಒಳ ಹರಿವು ತೀವ್ರ ಪ್ರಮಾಣದಲ್ಲಿ ಕುಸಿದಿದ್ದು, ಇಂದು (ಜೂನ್ 5) ಒಳ ಹರಿವಿನ ಪ್ರಮಾಣ 1,012 ಕ್ಯೂಸೆಕ್‌ನಷ್ಟಿದೆ. ಮೇ ತಿಂಗಳ ಕೊನೆ ವಾರ ಸತತವಾಗಿ ಸುರಿದ ಭಾರೀ ಮಳೆಯಿಂದ ಒಳಹರಿವು 8,000 ಕ್ಯೂಸೆಕ್ ಗೆರೆ ದಾಟಿತ್ತು. ಆದರೆ, ಜೂನ್ ಆರಂಭದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಇದರಿಂದ ಜಲಾಶಯದ ಒಳಹರಿವು ಸಹ ತಗ್ಗಿದೆ.
ಇದೀಗ ಪ್ರಸ್ತುತ ಭದ್ರಾ ಜಲಾಶಯಶದ ನೀರಿನ ಮಟ್ಟ 142.9 ಅಡಿ ಇದ್ದು, ಒಳ ಹರಿವು 3,055 ಕ್ಯೂಸೆಕ್ ಇದೆ. ಕಳೆದ ವರ್ಷ ಇದೆ ದಿನ 117.3 ಅಡಿ ಇತ್ತು. ಕಳೆದ ಎರಡ್ಮೂರು ದಿನ ಬಿಡುವು ಕೊಟ್ಟಿದೆ. ಮುಂದಿ ದಿನಗಳಲ್ಲಿ ಮತ್ತೆ ಆರ್ಭಟಿಸಲಿದೆ ಎನ್ನುವ ಮುನ್ಸೂಚನೆ ಇದೆ. ಒಂದು ವೇಳೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮಳೆಯಾದ್ರೆ ಒಳಹರಿವು ಮತ್ತೆ ಏರಿಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ
ಈಗಾಗಲೇ ಕಳೆದ ಬಾರಿ ಅಂದರೆ 2024ರಲ್ಲಿ ಮುಂಗಾರು ಮಳೆ ಆರ್ಭಟದಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ನಾಲ್ಕು ಗೇಟ್‌ಗಳನ್ನು ಸಹ ಓಪನ್ ಮಾಡಲಾಗಿತ್ತು. ಈ ವೇಳೆ ಜಲಾಶಯದ ಅಕ್ಕಪಕ್ಕದ ಜನರಿಗೆ ಜಾಗ್ರತೆಯಿಂದ ಇರುವಂತೆ ಸೂಚನೆ ನೀಡಲಾಗಿತ್ತು. ಇನ್ನೂ ಈ ಬಾರಿ 2025ರ ಜೂನ್ ಆರಂಭಕ್ಕೂ ಮುನ್ನೇ ಮುಂಗಾರು ಮಳೆ ಎಂಟ್ರಿ ಕೊಟ್ಟು ಮೇ ತಿಂಗಳ ಕೊನೆಯಿಂದ ಆರ್ಭಟ ಶುರು ಮಾಡಿದ ಹಿನ್ನೆಲೆ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿತ್ತು. ಆದರೆ ಇದೀಗ ಮಳೆ ಪ್ರಮಾಣ ತಗ್ಗಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಇಂದಿನಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ ಮುಂದುವರೆಯಲಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಭಾಗಗಳಲ್ಲಿ ಮಳೆ ಪ್ರಮಾಣ ತಗ್ಗಿದೆ. ಇದೀಗ ಮತ್ತೆ ರಣಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications