ಬಡವನದಿಣ್ಣೆಯಲ್ಲಿ ನುಂಗಿದ ನಾಲ್ಕು ಮೊಟ್ಟೆಯನ್ನು ಕಕ್ಕಿದ ಮರಿ ನಾಗರ!
ಚಿಕ್ಕಮಗಳೂರು, ಡಿಸೆಂಬರ್ 05: ಕೆಲವು ತಿಂಗಳುಗಳ ಹಿಂದೆ ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ ಮನೆಯೊಂದಕ್ಕೆ ನುಗ್ಗಿದ್ದ ನಾಗರಹಾವು ಮನೆಯ ಹೆಂಟೆಯನ್ನು ಕೊಂದು 7 ಮೊಟ್ಟೆಗಳನ್ನು ತಿಂದಿದ್ದ ಘಟನೆ ನೆನಪಿರಬೇಕಲ್ಲ?. ಅಂದು ನಾಗರಹಾವು ಹಸಿವಿನ ಕಾರಣಕ್ಕೆ ಮೊಟ್ಟೆಗಳನ್ನು ತಿಂದಿತ್ತು.
ಕೊನೆಗೆ ಅದನ್ನು ಉರಗತಜ್ಞರು ಸಂರಕ್ಷಿಸಿ ಆಹಾರ ನೀಡಿ, ಕಾಡಿಗೆ ಬಿಟ್ಟಿದ್ದರು. ಈ ಘಟನೆಯನ್ನೆಲ್ಲಾ ನೆನಪಿಸಿಕೊಂಡು ಮತ್ತೇಕೆ ಹೇಳುತ್ತಿದ್ದೇವೆ ಎಂದರೆ ಇಂತಹುದೆ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ.
ವ್ಯತ್ಯಾಸವೆಂದರೆ ಇದು ಗೋಧಿ ನಾಗರಹಾವಿನ ಮರಿಯಾಗಿದೆ. ಮೊಟ್ಟೆ ನುಂಗಿದ್ದಕ್ಕೆ ಕಾರಣ ಗೊತ್ತಿಲ್ಲವಾದರೂ ಚಿಕ್ಕಮರಿಯಾದರೂ ನಾಲ್ಕು ಮೊಟ್ಟೆಯನ್ನು ಸಲೀಸಾಗಿ ನುಂಗಿದೆ. ಆದರೆ ನುಂಗಿದ ಮೇಲೆ ಕೂಡಲೇ ಅದು ಅಸ್ವಸ್ಥಗೊಂಡಿದೆ.

ಅಸ್ವಸ್ಥಗೊಂಡಿದ್ದ ಹಾವಿನ ಮರಿಯನ್ನು ಗಮನಿಸಿದ ಸ್ಥಳೀಯರು ಉರಗತಜ್ಞ ಆರೀಫ್ ಅವರನ್ನು ಕರೆಸಿದ್ದಾರೆ. ಅವರು ಬಂದು ಚಿಕಿತ್ಸೆ ನೀಡಿದ ಬಳಿಕ ನಾಲ್ಕು ಮೊಟ್ಟೆಗಳನ್ನು ನಾಗರಹಾವಿನ ಮರಿ ಕಕ್ಕಿದೆ. ಆ ನಂತರ ಹಾವನ್ನು ಸಂರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.












Click it and Unblock the Notifications