ಕುದುರೆಮುಖ ಗೇಟ್ ಬಳಿ ರಾತ್ರೋರಾತ್ರಿ ಪ್ರತ್ಯಕ್ಷವಾಯ್ತು ಆನೆ
ಚಿಕ್ಕಮಗಳೂರು, ಜುಲೈ 17: ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಜನವಸತಿ ಪ್ರದೇಶಗಳಲ್ಲೇ ಆನೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಕಾಫಿ ತೋಟಗಳಿಗೆ, ಹೊಲ ಗದ್ದೆಗಳಿಗೆ ದಾಂಗುಡಿ ಇಡುವ ಆನೆಗಳು ಮನುಷ್ಯರ ಮೇಲೂ ದಾಳಿ ನಡೆಸಿದ ಸಾಕಷ್ಟು ಉದಾಹರಣೆಗಳು ಈಚಿನವರೆಗೂ ಸಿಕ್ಕಿವೆ. ಬೆಳ್ಳಂಬೆಳಿಗ್ಗೆ ಇಲ್ಲವೇ ಕತ್ತಲಾದರೆ ಸಾಕು, ಹೊರಗೆ ಕಾಲಿಡಲೂ ಹೆದರಬೇಕಾದ ಪರಿಸ್ಥಿತಿ ಇಲ್ಲಿದೆ.
ನಿನ್ನೆಯೂ ಅಷ್ಟೆ. ಕುದುರೆಮುಖದ ಸಮೀಪ ಆನೆಯೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಭಾರೀ ಭಯ ಉಂಟು ಮಾಡಿತ್ತು. ರಾತ್ರೋರಾತ್ರಿ ಹಠಾತ್ತನೇ ದಾರಿಯಲ್ಲಿ ಪ್ರತ್ಯಕ್ಷವಾದ ಆನೆ ಕಂಡು ಜನರು ಭಯಭೀತರಾಗಿದ್ದರು.
ಮೂಡಿಗೆರೆ ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ರಸ್ತೆಯ ಗೇಟ್ ಬಳಿ ಪ್ರತ್ಯಕ್ಷವಾದ ಆನೆ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ಠಿಕಾಣಿ ಹೂಡಿತ್ತು. ಎಲ್ಲಿಗೂ ಹೋಗದೇ ಅಲ್ಲೇ ನಿಂತಿತ್ತು.

ಆನೆ ಕಂಡು ಬೆದರಿದ ಸ್ಥಳೀಯರೂ ಕದಲದೇ ನಿಂತಲ್ಲೇ ನಿಂತಿದ್ದರು. ಕಾಡಾನೆ ಮರಳಿದ ನಂತರ ಗ್ರಾಮಕ್ಕೆ ವಾಪಸ್ಸಾದರು.












Click it and Unblock the Notifications