'ಅಧ್ಯಕ್ಷನಾಗಿದ್ದೇನೆ ಅಂತಾ ತೋರಿಸಲಿಕ್ಕೆ ಮಾತ್ರ ಡಿಕೆಶಿ ಆರೋಪಗಳು'

ಬೆಂಗಳೂರು, ಏಪ್ರಿಲ್ 27: ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಎಂದಿನಕ್ಕಿಂತಲೂ ಸ್ವಲ್ಪ ಜಾಸ್ತಿ ಕೋಪದಲ್ಲಿದ್ದದ್ದು ಸುದ್ದಿಯಾಗಿದೆ.

ಕೊರೊನಾ ವಿಷಯವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೇಲೆ ದೂರುಗಳು, ಆರೋಪಗಳು ಕೇಳಿ ಬಂದಿರುವುದು ಅವರ ಕೋಪಕ್ಕೆ ಕಾರಣವಾಗಿದೆ.

ಡಿ ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿರುವ ಅವರು, ಡಿ ಕೆ ಶಿವಕುಮಾರ್ ಕೆಪಿಸಿಸಿಗೆ ಹೊಸದಾಗಿ ಅಧ್ಯಕ್ಷರಾದ ಬಳಿಕ ತಾವು ಅಧ್ಯಕ್ಷನಾಗಿದ್ದೇನೆ ಎಂದು ತೋರಿಸಿಕೊಳ್ಳುವುದಕ್ಕೆ ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಲೂಟಿ ಹೊಡೆಯುವುದು ಆ ಮನುಷ್ಯನಿಗೆ ಗೊತ್ತಿದೆ. ಅದನ್ನು ನನಗೂ ಸ್ವಲ್ಪ ಹೇಳಿ ಕೊಡಲಿ ಎಂದು ವ್ಯಂಗ್ಯವಾಡಿದ್ದಾರೆ.

Rural Development Minister KS Eshwarappa Attacks On KPCC President DK Shivakumar

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿಕೆಶಿಗೆ ಲೂಟಿ ಹೊಡೆದು ಗೊತ್ತಿದೆ. ಎಲ್ಲೆಲ್ಲಿ ಮಾಡಿದಾರೆ ಹೇಳಲಿ, ಅದನ್ನು ನಾವು ಸರಿ ಮಾಡುತ್ತೇವೆ. ಮೊದಲೇ ಜನ ಕೆಲಸ ಇಲ್ಲ ಎಂದು ಸಾಯುತ್ತಿದ್ದಾರೆ. ಇಂತಹ ವಿಷಯದಲ್ಲಿ ರಾಜಕೀಯ ಮಾಡಲು ಬರಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಅವರು ಕೇಂದ್ರ ಸಚಿವರ ಮೇಲೆಯೂ ಇದೇ ವಿಷವಾಗಿ ಕೋಲಾರದಲ್ಲಿ ಮುನಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+