ನಿಮ್ಮ ಜೊತೆ ನಾವಿದ್ದೇವೆ : ಸಿಎಂಗೆ ವೀರಪ್ಪ ಮೊಯಿಲಿ ಅಭಯ
ಬೆಂಗಳೂರು, ಜೂನ್ 16: ನಿಮ್ಮ ಜೊತೆಗೆ ನಾವಿದ್ದೇವೆ ಧೈರ್ಯವಾಗಿರಿ, 5 ವರ್ಷಗಳ ಪೂರ್ಣ ಅವಧಿವರೆಗೂ ನೀವೇ ಮುಖ್ಯಮಂತ್ರಿಗಳಾಗಿರಿ ಅಂತ ಹೇಳಿದವರೆ ನಾವು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ಸಂಸದ ಎಂ. ವೀರಪ್ಪ ಮೊಯಿಲಿ ಅಭಯ ನೀಡಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತಣಾಡಿದ ಅವರು, ವರ್ಷದವರೆಗೆ ನಾನೇ ಸಿಎಂ ಎಂದು ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು, ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯವಾಗಿರಿ, ಮುಂದಿನ ಒಂದು ವರ್ಷವಲ್ಲ ಮುಂದಿನ ಐದು ವರ್ಷಕ್ಕೂ ನೀವೇ ಮುಖ್ಯಮಂತ್ರಿಯಾಗಿರುತ್ತೀರ ಯಾವುದೇ ಭಯವಿಲ್ಲದೆ ಕೆಲಸ ನಿರ್ವಹಿಸಿಕೊಂಡು ಹೋಗಿ ಎಂದರು.
ನೀವು ಐದು ವರ್ಷಗಳಿಗೆ ಮುಖ್ಯಮಂತ್ರಿಗಿರಿ ಎಂದು ನಾವೇ ಹೇಳಿದ ಮೇಲೆ ನಿಮಗೆ ಅನುಮಾನ, ಭಯ, ಶಂಕೆ ಯಾಕೆ , ಮುಖ್ಯಮಂತ್ರಿ ಅವಧಿಯನ್ನು ಒಂದು ವರ್ಷಕ್ಕೆ ಯಾಕೆ ಇಳಿಸುತ್ತೀರಾ, ನಿಮ್ಮ ಜೊತೆಗೆ ನಾವಿದ್ದೇವೆ ಧೈರ್ಯವಾಗಿ ಆಡಳಿತ ನಡೆಸಿ ಎಂದು ಹೇಳಿದರು.

ಒಂದು ವರ್ಷದವರೆಗೆ ನನ್ನನ್ನೂ ಯಾರೂ ಟಚ್ ಮಾಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆವರೆಗೆ ನಾನೇ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದರು. ಪ್ರಕೃತಿಯು ನನ್ನ ಪರವಾಗಿದೆ.
ರಾಜ್ಯದಲ್ಲಿ ಒಳ್ಳೆ ಮಳೆಯಾಗುತ್ತಿದೆ. ನಾನು ಕೆಲಸ ಮಾಡಬೇಕಾದರೆ ಬಹಳಷ್ಟು ಜನ ಕಾಲೆಳೆಯಲು ಇರುತ್ತಾರೆ ಎಂದು ಪರೋಕ್ಷವಾಗಿ ಪ್ರತಿಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದರು ಈ ವಿಚಾರ ಕುರಿತು ವೀರಪ್ಪ ಮೊಯಿಲಿ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications