ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ ಜನವರಿ 4: ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ ಮುಖಂಡನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಹಂತಕರು ಕೊಲೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ತಮ್ಮನಾಯಕನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹತ್ಯೆಗೊಳಗಾದ ವ್ಯಕ್ತಿಯನ್ನು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿ ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಟೇಶ್ (50) ಎಂದು ಗುರುತಿಸಲಾಗಿದೆ.

ಈ ಘಟನೆ ತಮ್ಮನಾಯಕನಹಳ್ಳಿ ಗೇಟ್‌ನಲ್ಲಿರುವ ಮೆಡಿಕಲ್ ಸ್ಟೋರ್‌ನಿಂದ ಮನೆಗೆ ಸ್ಕೂಟಿಯಲ್ಲಿ ತೆರಳುತ್ತಿರುವಾಗ ನಡೆದಿದೆ. ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ವೆಂಕಟೇಶ್ ಅವರ ಹತ್ಯೆ ಮಾಡಲಾಗಿದೆ. ಮನೆಗೆ ತೆರಳುತ್ತಿದ್ದ ವೆಂಕಟೇಶರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಕೈ ಕಟ್ ಮಾಡಿ ಅವರನ್ನು ಕೆಳಗೆ ಬೀಳಿಸಿ ಮನಸೋ ಇಚ್ಚೆ ಕೊಚ್ಚಿದ್ದಾರೆ. ಇದರಿಂದಾಗಿ ಸ್ಥಳದಲ್ಲೇ ವೆಂಕಟೇಶ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.

JDS leader brutally murdered in Chikkaballapur

ಲಾಂಗ್‌ನಿಂದ ಬೀಸಿದ್ದರಿಂದ ಅವರ ಎಡಗೈ ತೋಳಿನ ಭಾಗ ಕಟ್ ಆಗಿ, ಗಾಡಿ ಸಮೇತ ವೆಂಕಟೇಶ್ ನೆಲಕ್ಕೆ ಬಿದ್ದಿದ್ದಾರೆ. ಹತ್ಯೆಗೂ ಮುನ್ನ ವೆಂಕಟೇಶ್ ಮನೆಗೆ ಕರೆ ಮಾಡಿದ್ದರಂತೆ. ಮುದ್ದೆ ತಯಾರಿಸಿ ಎಂದು ಹೇಳಿದ್ದರಂತೆ. ಮಗನಿಗೆ ಕರೆ ಮಾಡಿ ಮನೆ ಬರುತ್ತಿದ್ದು ಮುದ್ದೆ ಮಾಡುವಂತೆ ತಿಳಿಸಿದ್ದರಂತೆ. ಆದರೆ ದಾರಿ ಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳು ವೆಂಕಟೇಶ್ ಅವರನ್ನು ಹತ್ಯೆ ಮಾಡಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದ ವೆಂಕಟೇಶ್ ಅವರನ್ನು ಕಂಡು ದಾರಿಹೋಗುವವರು ಮಗನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ವಿಚಾರ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ದೂರು ನೀಡಿದ ಮಗ, ಕೆಲವರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮೂರಿನ ರಸ್ತೆಯಲ್ಲಿರುವ ಬಾರ್‌ ಬಳಿ ಕೆಲವು ಅಕ್ಕ ಪಕ್ಕದ ಗ್ರಾಮದ ಯುವಕರು ಕುಡಿದು ಗಲಾಟೆ ಮಾಡುತ್ತಿದ್ದರಿಂದ ಅವರಿಗೆ ತಮ್ಮ ತಂದೆ ಬುದ್ದಿ ಹೇಳಿದ್ದರು. ಹೀಗಾಗಿ ಆ ಹುಡುಗರು ಕೊಲೆ ಮಾಡಿದ್ದಾರೆ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+