'ನನ್ನ ಪಾರ್ಥಿವ ಶರೀರದ ಮೇಲೆ ಹೂಗುಚ್ಛ ಇಡುವಂತೆ ಮೋದಿಗೆ ಹೇಳಿದ್ದೆ'
Recommended Video

ಚಿಕ್ಕಬಳ್ಳಾಪುರ, ಏಪ್ರಿಲ್ 09: ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರ ಪರ ಪ್ರಚಾರ ನಡೆಸಿದ ದೇವೇಗೌಡ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೋದಿ ಮತ್ತು ಅಮಿತ್ ಶಾ ದೇಶದಲ್ಲಿ ಏಕಚಕ್ರಾಧಿಪತ್ಯ ಸ್ಥಾಪಿಸಲು ಹೊರಟಿದ್ದಾರೆ. ನಾಲ್ಕಾರು ಪಕ್ಷಗಳನ್ನು ಸೇರಿಸಿಕೊಂಡು ಆಡಳಿತ ನಡೆಸಲು ಸಾಧ್ಯವಿಲ್ಲವೆಂದು ಮೋದಿ ಹೇಳುತ್ತಿದ್ದಾರೆ, ಆದರೆ ಬಿಜೆಪಿ ಈ ಮುಂಚೆ ಪಕ್ಷಗಳನ್ನು ಸೇರಿಸಿಕೊಂಡೆ ಆಡಳಿತ ನಡೆಸಿದ್ದನ್ನು ಮರೆತಿದ್ದಾರೆ ಎಂದು ಹೇಳಿದರು.
ದೇಶದ ಯುವಕರು ನನ್ನ ಜೊತೆಗೆ ಇದ್ದಾರೆ ಎಂದು ಮೋದಿ ಬಿಂಬಿಸುತ್ತಿದ್ದಾರೆ, ಆರ್‌ಎಸ್‌ಎಸ್ ನವರು, ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಜನರನ್ನು ಇಟ್ಟಿದ್ದಾರೆ, ಮಾಧ್ಯಮಗಳು ಸಹ ಮೋದಿ ಬಿಟ್ಟರೆ ಬೇರೆ ನಾಯಕರು ಇಲ್ಲ ಎಂದು ಬಿಂಬಿಸುತ್ತಿವೆ ಎಂದು ಅವರು ಹೇಳಿದರು.

'ರಾಹುಲ್ ಗಾಂಧಿ ಮೋದಿಯನ್ನು ಎದುರಿಸಲು ಶಕ್ತರಾಗಿದ್ದಾರೆ'
ಕಳೆದ ನಾಲ್ಕು ವರ್ಷದಲ್ಲಿ ರಾಹುಲ್ ಗಾಂಧಿ ಅವರನ್ನು ಮೋದಿಯನ್ನು ಎದುರಿಸುವ ಸಾಕಷ್ಟು ಶಕ್ತಿ ಬೆಳೆಸಿಕೊಂಡಿದ್ದಾರೆ. ಆದರೆ ಮಾದ್ಯಮಗಳು ಇದನ್ನು ಯಾರಿಗೂ ಹೇಳುತ್ತಿಲ್ಲ. ಮೊದಿಯನ್ನು ಮಾತ್ರ ಬಿಂಬಿಸುತ್ತಿವೆ ಎಂದು ದೇವೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷ ಘಟನೆಯೊಂದನ್ನು ನೆಪಿಸಿಕೊಂಡ ದೇವೇಗೌಡರು
ಕಾವೇರಿ ವಿಚಾರವಾಗಿ ಮೋದಿ-ದೇವೇಗೌಡ ಅವರ ನಡುವೆ ನಡೆದ ಘಟನೆಯೊಂದನ್ನು ನೆನಪಿಸಿಕೊಂಡ ದೇವೇಗೌಡ ಅವರು, 'ಕಾವೇರಿ ಬೋರ್ಡ್ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಉಪವಾಸ ಕೂರುವ ನಿರ್ಧಾರ ಮಾಡಿದ್ದೆ, ಆಗ ಮೋದಿ ಅವರ ಆಪ್ತ ಕಾರ್ಯದರ್ಶಿ ಕರೆ ಮಾಡಿದ್ದರು, ಆಗ ಅವರಿಗೆ ಹೇಳಿದ್ದೆ, ಕೇಂದ್ರವು ತನ್ನ ನಿರ್ಧಾರ ವಾಪಸ್ ತೆಗೆದುಕೊಳ್ಳದಿದ್ದರೆ, ಮೋದಿ ಅವರು ನನ್ನ ಪಾರ್ಥಿವ ಶರೀರದ ಮೇಲೆ ಹೂಗುಚ್ಛ ಇಡಲಿ ಎಂದಿದ್ದೆ' ಎಂದು ಹಳೆಯ ಘಟನೆಯನ್ನು ದೇವೇಗೌಡ ಅವರು ನೆನಪಿಸಿಕೊಂಡರು.

ದೇಶದ ಐಕ್ಯತೆಗೆ ಒಟ್ಟಾಗಿ ಕೆಲಸ ಮಾಡಿ
ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇರೋದು ಸಹಜ. ದೇಶದ ಐಕ್ಯತೆ ಸಲುವಾಗಿ ನಾವೀಗ ಎಲ್ಲ ವೈಮನಸ್ಸು ಬಿಟ್ಟು ಒಂದಾಗಿ ಕೆಲಸ ಮಾಡಬೇಕಿದೆ. ಒಟ್ಟಾಗಿ ಕೆಲಸ ಮಾಡಿ ಚುನಾವಣೆ ಎದುರಿಸಿ. ಲೋಕಸಭೆ ಚುನಾವಣೆ ಆದಮೇಲೆ ನಿಮ್ಮಷ್ಟದಂತೆ ರಾಜಕೀಯ ಮಾಡಿಕೊಳ್ಳಿ ಎಂದು ಹೇಳಿದರು.

ದೇವೇಗೌಡ-ಸಿದ್ದರಾಮಯ್ಯ ಜಂಟಿ ಪ್ರಚಾರ
ದೇವೇಗೌಡ ಅವರು ಇಂದು ವೀರಪ್ಪ ಮೊಯ್ಲಿ ಅವರ ಪರವಾಗಿ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ನಗರಗಳಲ್ಲಿ ಪ್ರಚಾರ ನಡೆಸಿದರು. ಸಿದ್ದರಾಮಯ್ಯ ಅವರು ಸಹ ಜೊತೆಗಿದ್ದರು. ಇದೇ ದಿನ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಪರವಾಗಿ ಯಡಿಯೂರಪ್ಪ ಅವರು ದೊಡ್ಡಬಳ್ಳಾಪುರದಲ್ಲಿ ಪ್ರಚಾರ ಮಾಡಿದರು.












Click it and Unblock the Notifications