ಮಾ.12ರಂದು ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ಚಿಕ್ಕಬಳ್ಳಾಪುರ, ಮಾರ್ಚ್ 11: ಪಂಚ ರಾಜ್ಯಗಳ ಫಲಿತಾಂಶ ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೊಸ ಹುರುಪು ತಂದಿದೆ. ಮುಂದಿನ ವರ್ಷ ಚುನಾವಣೆ ಎದುರಿಸಬೇಕಿರುವ ರಾಜ್ಯ ಸರ್ಕಾರ ಜನರ ಮನ ಗೆಲ್ಲುವುದಕ್ಕೆ ಮನೆ ಬಾಗಿಲಿಗೆ ಸರ್ಕಾರಿ ಕಾರ್ಯಕ್ರಮ ತೆಗೆದುಕೊಂಡು ಹೋಗುತ್ತಿದೆ. ಆ ಹೊಸ ಕಾರ್ಯಕ್ರಮ ಏನು ಎಂಬುದರ ಕುರಿತ ಕಂಪ್ಲೀಟ್ ರಿಪೋರ್ಟ್​ ಇಲ್ಲಿದೆ.

ಕಂದಾಯ ದಾಖಲೆ ಮನೆ ಬಾಗಿಲಿಗೆ ಅನ್ನುವ ಈ ಹೊಸ ಕಾರ್ಯಕ್ರಮ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಮಾರ್ಚ್ 12ರಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಸಿಎಂ ಆಗಮನಕ್ಕಾಗಿ ಚಿಕ್ಕಬಳ್ಳಾಪುರ ತಾಲೂಕಿನ ಗುಂಗರ‍್ಲಹಳ್ಳಿ ಗ್ರಾಮ ಸಿದ್ಧಗೊಂಡಿದೆ.

ಗುಂಗರ‍್ಲಹಳ್ಳಿ ಗ್ರಾಮದಲ್ಲಿ ಈ ಹೊಸ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದು, ಗ್ರಾಮದ ಮನೆ ಮನೆಗೆ ಹೋಗಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿಯವರೇ ಗ್ರಾಮದ ಕುಟುಂಬಗಳಿಗೆ ಜಮೀನಿನ ಪಹಣಿ ಪತ್ರ, ಆಟ್ಲಾಸ್, ಜಾತಿ ಹಾಗೂ ಆದಾಯ ಪ್ರಮಾಣಪತ್ರದ ದಾಖಗಳನ್ನು ವಿತರಿಸಿಲಿದ್ದಾರೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

CM to Launch Doorstep Delivery of Revenue Documents Scheme at Chikkaballapur on March 12


ಮಾ.12ರಂದು ರಾಜ್ಯದಲ್ಲಿ ಹೊಸ ಕಾರ್ಯಕ್ರಮಕ್ಕೆ ಸಿಎಂ ಚಾಲನೆ
ಮಾರ್ಚ್ 12ರಂದು 11 ಗಂಟೆಗೆ ಸಿಎಂ ಗುಂಗರ‍್ಲಹಳ್ಳಿ ಗ್ರಾಮಕ್ಕೆ ಅಗಮಿಸಿಲಿದ್ದು, ಗ್ರಾಮದ ಕೆಲ ಕುಟುಂಬಗಳಿಗೆ ದಾಖಲೆ ಪತ್ರಗಳ ವಿತರಣೆ ನಂತರ ಅರಳಿಕಟ್ಟೆ ಮೇಲೆ ಕೂತು ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿಲಿದ್ದಾರೆ. ತದನಂತರ ವೇದಿಕೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ರಾಜ್ಯದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಲಿದ್ದು, ಅಂದೇ ಇಡೀ ರಾಜ್ಯದಲ್ಲಿ ಈ ಯೋಜನೆಗೆ ಆಯಾ ವಿಧಾನಸಭಾ ಕ್ಷೇತ್ರವಾರು ಆಯಾ ಕ್ಷೇತ್ರದ ಶಾಸಕರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಉಚಿತವಾಗಿ ಕಂದಾಯ ಇಲಾಖೆ ದಾಖಲೆಗಳನ್ನು ಜನರಿಗೆ ವಿತರಿಸಿಲಿದ್ದಾರೆ.

CM to Launch Doorstep Delivery of Revenue Documents Scheme at Chikkaballapur on March 12

ಅನಗತ್ಯವಾಗಿ ಕಂದಾಯ ದಾಖಲೆಗಳಿಗಾಗಿ ಜನಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಈ ಹೊಸ ಯೋಜನೆ ಜಾರಿಗೆ ಮುಂದಾಗಿದ್ದು, ಯಾವ ರೀತಿ ಅನುಷ್ಠಾನ ಆಗುತ್ತದೋ ಎಂಬ ಸಾಧಕ ಭಾದಕಗಳನ್ನು ಕಾದು ನೋಡಬೇಕಿದೆ.

ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಚಾಲನೆ
ರಾಜ್ಯ ಬಿಜೆಪಿ ಸರಕಾರ ಹೊಸದಾಗಿ ಜಾರಿಗೆ ತರುತ್ತಿರುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ ತವರು ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆರಂಭಿಸಲಾಗುತ್ತಿದೆ. "ರಾಜ್ಯ ರಾಜಧಾನಿ ಪಕ್ಕದಲ್ಲಿಯೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿರುವುದಾಗಿ," ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್​​. ಲತಾ ತಿಳಿಸಿದ್ದಾರೆ.

Recommended Video

      ಕ್ರಿಕೆಟ್ನಲ್ಲಿ ಬದಲಾದ 3 ನಿಯಮ:ಆಟಕ್ಕೆ ಇದು ಪ್ಲಸ್ or ಮೈನಸ್?? | Oneindia Kannada

      ಏನಿದು ಯೋಜನೆ?
      ಕಂದಾಯ ಇಲಾಖೆಯಲ್ಲಿನ ಸಾಕಷ್ಟು ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ಹಾಗೂ ರೈತರು ಸಾಕಷ್ಟು ತೊಂದರೆಗೊಳಗಾಗುತ್ತಿದ್ದರು. ಆದರೆ ಈ ಕಾರ್ಯಕ್ರಮದ ಮುಖಾಂತರ ಕಂದಾಯ ಇಲಾಖೆಯ ಕೆಲ ದಾಖಲೆಗಳು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಲಿವೆ. ಇದರಿಂದ ರೈತರು ಕಚೇರಿಗಳತ್ತ ಅಲೆಯುವುದು ತಪ್ಪುತ್ತದೆ.

      ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀನಿವಾಸ್​​, "ಈ ಕಾರ್ಯಕ್ರಮದ ಮುಖಾಂತರ ಕಂದಾಯ ಇಲಾಖೆಯ ದಾಖಲೆಗಳು ರೈತರ ಮನೆ ಬಾಗಿಲಿಗೆ ತಲುಪಲಿವೆ. ಪಹಣಿ, ಮ್ಯುಟೇಷನ್​ ಸೇರಿದಂತೆ ಇತರೆ ದಾಖಲೆಗಳಿಗೆ ದುಡ್ಡು ನೀಡಬೇಕಾಗಿತ್ತು. ಆದರೆ ಈ ಕಾರ್ಯಕ್ರಮದ ಮುಖಾಂತರ ಉಚಿತವಾಗಿ ಅವರ ಮನೆ ಬಾಗಿಲಿಗೆ ತಲುಪಲಿವೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ," ಎಂದು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+