ದೂರದ ಸಂಬಂಧಗಳನ್ನು ಒಂದೆಡೆ ಸೇರಿಸುವ ಹೊಸದ್ಯಾವರ ಹಬ್ಬ- ಚಿಕ್ಕಬಳ್ಳಾಪುರದೆಲ್ಲೆಡೆ ಸಂಭ್ರಮ
ಚಿಕ್ಕಬಳ್ಳಾಪುರ ನವೆಂಬರ್ 3: ಸುಮಾರು ಏಳು ನೂರು ವರ್ಷಗಳಿಗೂ ಹಿಂದಿನಿಂದ ಆಚರಿಸಿಕೊಂಡು ಬರುತ್ತಿರುವ ಹೊಸದ್ಯಾವರ ಹಬ್ಬ ಚಿಕ್ಕಬಳ್ಳಾಪುರದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದೆ. ರಾಜ್ಯದ ಹಲವು ಜಿಲ್ಲೆಗಳು ಸೇರಿದಂತೆ ತಾಲೂಕಿನ ಮೊರಸು ಒಕ್ಕಲಿಗರು ತಮ್ಮ ಕುಲದೇವತೆಯಾದ ಕೆಂಪಾಂಬೆ(ದೊಡ್ಡಾಂಬೆ)ಯನ್ನು ವರ್ಷಕ್ಕೊಮ್ಮೆ ಆರಾಧಿಸುವ ಆಚರಣೆಯೇ ಹೊಸದ್ಯಾವರ. ಇದನ್ನು ದೊಡ್ಡಮ್ಮ(ಪೆದ್ದಮ್ಮ) ಆರಾಧನೆ ಅಥವಾ ಕೊತ್ತದ್ಯಾವರ ಎಂದು ಕೂಡ ಕರೆಯುವರು.
ದೀಪಗಳ ಹಬ್ಬ ದೀಪಾವಳಿ ಮುಗಿದ ನಂತರ ಜಿಲ್ಲೆಯ ಎಲ್ಲೆಡೆ ಸಂಭ್ರಮ ಸಡಗರದಿಂದ ಹೆಣ್ಣು ಮಕ್ಕಳೆಲ್ಲ ಒಂದೆಡೆ ಸೇರಿ ಹೊಸದ್ಯಾವರ ಹಬ್ಬದ ಆಚರಣೆ ಮಾಡುತ್ತಾರೆ. ಈ ಮೂಲಕ ಬಾಂಧವ್ಯದ ಬೆಸುಗೆ ಮೂಡಿಸಲಾಗುತ್ತದೆ. ದೀಪಾವಳಿ ಮುಗಿದ ಮೊದಲ ಅಥವಾ ಎರಡನೇ ಭಾನುವಾರದಲ್ಲಿ ಹೊಸದ್ಯಾವರ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಪಾಲ್ಗೊಳ್ಳಲೆಂದೇ ಮಹಿಳೆಯರು ಒಂದು ದಿನದ ಮುಂಚೆಯೇ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಈ ಎಲ್ಲ ವಿಶಿಷ್ಟ ಆಚರಣೆ ಹಿಂದೆ ಒಂದು ಆಸಕ್ತಿಯ ಕತೆಯೂ ಇದೆ.

ವಿಶೇಷವಾಗಿ ಜಿಲ್ಲೆಯ ಮೊರಸು ಒಕ್ಕಲಿಗ ಮಹಿಳೆಯರು ಆಚರಿಸುವ ಹೊಸದ್ಯಾವರ ಹಬ್ಬದಲ್ಲಿ ಭಾಗವಹಿಸುವ ಮಹಿಳೆಯರೆಲ್ಲ ಬಿಳಿಯ ಬಣ್ಣದ ಸೀರೆ ತೊಡುತ್ತಾರೆ. ಕೆಲವೆಡೆ, ವಿವಿಧ ಬಣ್ಣದ ಹೊಸ ಸೀರೆಯನ್ನು ತೊಟ್ಟು ಬೆರಳಿಗೆ ಬೆಳ್ಳಿಯ ಉಂಗುರ ಹಾಕಿಕೊಳ್ಳುತ್ತಾರೆ. ತಲೆಯ ಮೇಲೆ ಮಡಿಕೆ ಮತ್ತು ತಂಬಿಟ್ಟಿನ ದೀಪ ಹೊರುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಕುಟುಂಬದ ಹಿರಿಯ ಅಜ್ಜಿಯಿಂದ ಮೊದಲುಗೊಂಡು, ನವ ವಿವಾಹಿತೆವರೆಗೆ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬವನ್ನು ಪೂರ್ವಜರ ಕಾಲದಿಂದಲೂ ಮೊರಸು ಒಕ್ಕಲಿಗರು ಮನೆತನದ ಕುಟುಂಬ ಸದಸ್ಯರೆಲ್ಲ ಒಂದೆಡೆ ಸೇರಿ ಆಚರಿಸುತ್ತಾರೆ. ಹಬ್ಬದ ನಿಯಮಗಳನ್ನು ತಪ್ಪದೇ ಪಾಲಿಸುವುದುಂಟು, ಸ್ವಲ್ಪ ಎಡವಟ್ಟು ನಡೆದರು ಅಪಶಕುನವೆಂದೇ ಭಾವಿಸಲಾಗುತ್ತದೆ. ಹೀಗಾಗಿ ಹಿರಿಯರಿಂದ ತರಬೇತಿ ಪಡೆದ ಬಳಿಕವಷ್ಟೇ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಹೊಸದ್ಯಾವರ ಹಬ್ಬ ಆಚರಿಸುವ ಹಿನ್ನೆಲೆ..
ಈ ಸಂಪ್ರದಾಯ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಹೊಸ ದ್ಯಾವರ ಹಬ್ಬ ಮನೆಯ ಹೆಣ್ಣು ಮಕ್ಕಳಲ್ಲಿ ಬಾಂಧವ್ಯದ ಬೇಸುಗೆಯನ್ನು ಮೂಡಿಸುತ್ತದೆ. ಹರಿದು ಹಂಚಿ ಹೋಗಿರುವ ದೂರದ ಸಂಬಂಧಗಳನ್ನು ಒಂದು ಕಡೆಗೆ ಸೇರಿಸುವುದು, ಮದುವೆಯಾದ ಹೆಣ್ಣು ಮಕ್ಕಳು ಕುಟುಂಬಸ್ಥರ ಸಮೇತ ತವರು ಮನೆಗೆ ಬಂದು ಪ್ರಕೃತಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಹಿರಿಯರನ್ನು ನೆನೆಯುವುದು ಹೊಸ ದ್ಯಾವರ ಹಬ್ಬ ಆಚರಣೆಯ ಮುಖ್ಯ ಉದ್ದೇಶ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.
ಸೂರ್ಯ ನಮಸ್ಕಾರ:
ಈ ವೇಳೆ ಹೆಣ್ಣು ಮಕ್ಕಳು ತಲೆಯೆ ಮೇಲೆ ದೀಪ ಹೊತ್ತುಕೊಂಡು ಅವುಗಳು ಆರದಂತೆ ನಾಲ್ಕು ದಿಕ್ಕುಗಳಿಗೆ ನೀರನ್ನು ಚೆಲ್ಲುತ್ತಾ ಪೂಜೆ ಸಲ್ಲಿಸಿ ಸೂರ್ಯನಿಗೆ ನಮಸ್ಕರಿಸಿ ಹಬ್ಬ ಆಚರಿಸುತ್ತಾರೆ.
ಪೂಜೆಗೆ ವಿಶೇಷ ಕುಂಬಳಕಾಯಿ, ಕಬ್ಬು:
ಮೂರು ದಿನಗಳ ಕಾಲ ಉಪವಾಸವಿದ್ದು ಶ್ರದ್ದೆಯಿಂದ ಹಬ್ಬ ಆಚರಿಸುವ ಮಹಿಳೆಯರು, ಹಬ್ಬದಂದು ಹೊಸ ಬಟ್ಟೆಗಳು, ಮಡಿಕೆಗಳು, ಸೇರಿದಂತೆ ಎಲ್ಲಾ ವಸ್ತುಗಳನ್ನು ಹೊಸದಾಗಿಯೇ ಖರೀದಿಸಿರುತ್ತಾರೆ. ಹೆಣ್ಣು ಮಕ್ಕಳು ಪೂಜೆಗೆ ಕುಂಬಳಕಾಯಿ, ರಾಗಿ ತೆನೆ, ನವಣೆ, ಸಜ್ಜೆ, ನುಗ್ಗೆ ಸೊಪ್ಪು, ಗೀರಿಕಾಯಿ, ಕಾಸಿ, ಕಬ್ಬು, ಸೇವಂತಿಗೆ ಹೂವು ಹಾಗೂ ಬಾಳೆ ಎಲೆಯನ್ನು ಪೂಜೆಗೆ ಇಡುತ್ತಾರೆ.
ಅವಿಭಕ್ತ ಕುಟುಂಬಗಳೆ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಹೊಸದ್ಯಾವರ ಆಚರಣೆ ವೇಳೆ ಕುಟುಂಬದ ಎಲ್ಲರೂ ಒಂದೆಡೆ ಸೇರುವುದೆ ವಿಶೇಷ. ಆ ಕ್ಷಣ ಪೂರ್ವಿಕರ ಕಾಲದಲ್ಲಿದ್ದ ಅವಿಭಕ್ತ ಕುಟುಂಬ ಕಣ್ಮುಂದೆ ಬರಲಿದೆ. ಕುಟುಂಬದ ಸದಸ್ಯರು ಒಂದೆಡೆ ಸೇರಿ ಊಟವನ್ನು ತಯಾರಿಸಲಾಗುತ್ತದೆ. ಇದು ವೈಯಕ್ತಿಕವಾಗಿ ಸಮುದಾಯದ ಆಯಾ ಕುಟುಂಬಗಳು ಆಚರಿಸುವುದಾದರೂ, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿಸುತ್ತದೆ.
ಹೊಸದ್ಯಾವರ ಹಬ್ಬ ಎಂಬುದು ಇತ್ತೀಚಿನ ವರ್ಷದ್ದಲ್ಲ, ಪೂರ್ವಜರ ಕಾಲದಿಂದಲೂ ಆಚರಣೆಯಲ್ಲಿರುವ ಪದ್ಧತಿ. ಇದರ ಆಚರಣೆಗೆಂದೇ ಹೊಚ್ಚಹೊಸ ಮಡಕೆ ತಂದು ಅದರೊಳಗೆ ತುಪ್ಪದ ದೀಪ ಇಟ್ಟು ಅದು ಆರದಂತೆ ಎಚ್ಚರವಹಿಸಿ ಪೂಜೆ ಮಾಡುತ್ತಾರೆ. ಒಂದು ಕುಟುಂಬದ ಮಹಿಳೆಯರು ಹೊರ ಆವರಣದಲ್ಲಿನ ಬಂಡೆಯ ಮೇಲೆ ಹಬ್ಬವನ್ನು ಆಚರಿಸುವುದು ರೂಡಿ, ಒಬ್ಬೊಬ್ಬರಾಗಿ ತಲೆಯ ಮೇಲೆ ಮಡಕೆ ಹೊತ್ತುಕೊಂಡು, ಕೈಯಲ್ಲಿ ವೀಳ್ಯದ ಎಲೆ ಹಿಡಿದು ಅದರ ಮೇಲೆ ಸ್ವಲ್ಪ ಸ್ವಲ್ಪ ನೀರು ಸುರಿದು ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸುತ್ತಾರೆ.
ಒಕ್ಕಲಿಗ ಸಮುದಾದಯ ಕುಟುಂಬಗಳಲ್ಲೇ ವಿವಾಹ
ಒಕ್ಕಲಿಗ ಸಮುದಾದಯ ಕುಟುಂಬಗಳಲ್ಲಿ ಹೆಣ್ಣು ಮತ್ತು ಗಂಡಿನ ಮದುವೆಯ ಸಂದರ್ಭದಲ್ಲಿ ಹೊಸದ್ಯಾವರ, ಬಂಡಿದ್ಯಾವರ ಆಚರಣೆಯನ್ನು ಪರಿಗಣಿಸಲಾಗುತ್ತದೆ. ಹೊಸದ್ಯಾವರ, ಬಂಡಿದ್ಯಾವರ ಆಚರಣೆ ಇರುವ ಕುಟುಂಬದವರಿಗೆ ಮಾತ್ರ ತಮ್ಮ ಮಕ್ಕಳನ್ನು ಕೊಟ್ಟು ವಿವಾಹ ಮಾಡಲಾಗುತ್ತದೆ. ಇಲ್ಲವಾದರೆ ನಿರಾಕರಿಸಲಾಗುತ್ತದೆ. ಸಂಪ್ರದಾಯ ನೋಡಿ ವಿವಾಹ ಮಾಡುವುದು ಇಂದಿಗೂ ರೂಡಿಯಲ್ಲಿರುವುದನ್ನು ಕಾಣಬಹುದಾಗಿದೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications