Leopard in Doddaballapur: ಮತ್ತೆ ಬಂತು ಚೀತಾ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಚಿರತೆ ಪ್ರತ್ಯಕ್ಷ!
ದೊಡ್ಡಬಳ್ಳಾಪುರ ಡಿಸೆಂಬರ್ 22: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಬಳಿಯ ವೀರಾಪುರ ಗ್ರಾಮದಲ್ಲಿ ಚಿರತೆಯ ಓಡಾಡಿರುವು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೈಗಾರಿಕಾ ಪ್ರದೇಶದಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ವೀರಾಪುರ ಗ್ರಾಮ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಂಟಿಕೊಂಡಿದೆ, ಗ್ರಾಮದ ರಾಮಮೂರ್ತಿ ಮನೆಯಂಗಳದಲ್ಲಿ ಚಿರತೆ ಒಡಾಡಿತ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ, ಮಧ್ಯರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಮನೆ ಮುಂದಿನ ಅಡಿಕೆ ತೋಟದಲ್ಲಿ ಚಿರತೆ ದೃಶ್ಯ ಸೆರೆಯಾಗಿದೆ.

ರಾಮಮೂರ್ತಿಯವರ ಕೊಳಿಯನ್ನು ಚಿರತೆ ತಿಂದು ಹೋಗಿದ್ದು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ, ಸಾವಿರಾರು ಕಾರ್ಮಿಕರು ವಾಸವಾಗಿದ್ದು, ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಮನವಿ ಮಾಡಿದ್ದಾರೆ.












Click it and Unblock the Notifications