ಸಂಕ್ರಾಂತಿ ಪ್ರಯುಕ್ತ ಎತ್ತಿನ ಬಂಡಿಗಳ ಓಟದ ಸ್ಪರ್ಧೆ: ಜನರನ್ನು ನೋಡಿ ಬಂಡಿ ಸಮೇತ ದಿಕ್ಕಾಪಾಲಾಗಿ ಓಡಿದ ಹಳ್ಳಿಕಾರ್ ಎತ್ತುಗಳು!

ಚಿಕ್ಕಬಳ್ಳಾಪುರ ಜನವರಿ 16: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹುದಗೂರು ಗ್ರಾಮದಲ್ಲಿ. ಗ್ರಾಮದ ರೈತಮಿತ್ರ ರೈತ ಬಳಗದಿಂದ ಹಳ್ಳಿಕಾರ್ ಎತ್ತಿನಬಂಡಿ ಓಟದ ಸ್ಪರ್ಧೆ ಆಯೋಜನೆಯಾಗಿತ್ತು. ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಜೊತೆಯ ಎತ್ತುಗಳು ಭಾಗವಹಿಸಿದ್ದವು. ಒಂದಕ್ಕಿಂತ ಇನ್ನೊಂದು ಜೋಡಿ ಕಲರ್ ಫುಲ್, ಪವರ್ ಫುಲ್ ಆಗಿದ್ದವು. ಉಳಿದಂತೆ ಹಳ್ಳಿಕಾರ್ ಎತ್ತುಗಳ ಓಟ ಹಾಗೂ ಬಂಡಿಗಳ ಓಟ ನೋಡುಗರ ಮನಸೊರೆಗೊಂಡಿತು.

ಅದೊಂದು ಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಳ್ಳಿಕಾರ್ ಎತ್ತುಗಳ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಓಟದ ಸ್ಪರ್ಧೆಗೆ ಕಲರ್ ಫುಲ್ ಹಳ್ಳಿಕಾರ್ ಎತ್ತುಗಳು ಆಗಮಿಸಿದ್ವು. ಆದ್ರೆ ನೆರೆದಿದ್ದ ಜನಸ್ತೋಮ ನೋಡಿ ಕೆಲವು ಎತ್ತುಗಳು ಬೆದರಿ ಬಂಡಿ ಸಮೇತ ದಿಕ್ಕು ಪಾಲಾಗಿ ಓಡಿದ ರೋಮಾಚನಕಾರಿ ಘಟನೆಗಳು ನಡೆದವು. ಎತ್ತುಗಳಿಗೆ ಪರದಾಟವಾದ್ರೆ ಜನರಿಗೆ ತಮಾಸೆಯಾಗಿತ್ತು.

Bullock cart race: Bullocks ran in a different direction after seeing people!

ಒತ್ತಾಯ ಪೂರ್ವಕವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎತ್ತುಗಳು? ಹೌದು ಇಂತಹದೊಂದು ಅನುಮಾನ ಬರಲು ಪ್ರಮುಖ ಕಾರಣ ದಿಕ್ಕಾಪಾಲಗಿ ಓಡಿದ ಎತ್ತುಗಳು, ಭಯಗೊಂಡ ರೈತರು, ಇದಕ್ಕೆಲ್ಲ ಕಾರಣ ಎತ್ತುಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಷ್ಟ ಇರಲಿಲ್ಲವೇನೋ, ಆದರೂ ಪಟ್ಟುಬಿಡದ ರೈತರು, ಹರಸಾಹಸ ಪಟ್ಟು ಬಲವಂತವಾಗಿ ಎತ್ತುಗಳನ್ನು ಸ್ಪರ್ಧೆಗೆ ಅಣಿಗೊಳಿಸಿದ್ದು ನೋಡುಗರಿಗೆ ರೋಮಾಂಚನಕಾರಿಯಾದ್ರೆ ಎತ್ತುಗಳ ಕಣ್ಣೀರ ಕೋಡಿಗೆ ಸಾಕ್ಷಿಯಾಯಿತು.

ಹಳ್ಳಿಕಾರ್ ಎತ್ತಿನ ಬಂಡಿಯ ಸ್ಪರ್ಧೆ ನೋಡಿ ಕೇಕೆ ಹಾಕಿ ಸಂಭ್ರಮ ಸಂತಸ ಒಂದೆಡೆಯಾದ್ರೆ ಮತ್ತೊಂದೆಡೆ ಪ್ರಾಣ ಭಯದಲ್ಲಿ ದಿಕ್ಕಾಪಾಲಾಗಿ ಓಡುತ್ತಿರುವ ಎತ್ತುಗಳು, ಇಂಥ ರೋಮಾಂಚನಕಾರಿ/ ಆತಂಕಕಾರಿ ದೃಶ್ಯಗಳು ಕಂಡು ಬಂದಿದ್ದು.

Bullock cart race: Bullocks ran in a different direction after seeing people!

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 30 ಸಾವಿರ ಹಾಗೂ ಟ್ರೋಫಿ, ಎರಡನೆಯ ಬಹುಮಾನವಾಗಿ 20 ಸಾವಿರ ಹಾಗೂ ಟ್ರೋಫಿ, ಮೂರನೆ ಬಹುಮಾನವಾಗಿ 10 ಸಾವಿರ ಹಾಗೂ ಟ್ರೋಫಿ, ನಾಲ್ಕನೆ ಬಹುಮಾನವಾಗಿ ಐದು ಸಾವಿರ ಹಾಗೂ ಟ್ರೋಫಿ ಘೋಷಣೆ ಮಾಡಲಾಯಿತು. ಮುನ್ನೂರು ಮೀಟರ್ ಉದ್ದದ ಟ್ರಾಕ್ ನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆಲ್ಲಲು ರೈತರು ತಮ್ಮ ತಮ್ಮ ಎತ್ತುಗಳನ್ನು ಹೊಡೆದು ಬಡಿದು ರೋಷವನ್ನು ಬಡೆದೆಬ್ಬಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುವ ಮುಕೇನ, ಎತ್ತುಗಳ ಸಂಕಷ್ಟ ರೈತರಿಗೆ ಸಂತಸಕ್ಕೆ ಕಾರಣವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+