ಚಿಕ್ಕಬಳ್ಳಾಪುರದಲ್ಲಿ ಮತಭೇಟೆ ಆರಂಭ: ದೇವಾಂಗ ಮಠದ ದಯಾನಂದಪುರಿ ಸ್ವಾಮೀಜಿ ಭೇಟಿಯಾದ ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ ಮಾರ್ಚ್ 28: ನಾನು ಕಣದಲ್ಲಿರಬೇಕೆಂದು ವರಿಷ್ಠರು ತೀರ್ಮಾನ ಮಾಡಿ ಅಭ್ಯರ್ಥಿ ಮಾಡಿದ್ದಾರೆ. ಆಗಾಗಿ ಎಸ್.ಆರ್. ವಿಶ್ವನಾಥ್ ಒಬ್ಬರು ಹಿರಿಯ ನಾಯಕರಾಗಿ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರಬೇಕೆಂದು ಮನವಿ ಮಾಡುತ್ತೇನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ತಿಳಿಸಿದರು.

ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿಯ ದೇವಾಂಗಮಠದ ಶ್ರೀ ದಯಾನಂದಪುರಿ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತನಾಡಿದ ಅವರು ಇದು ಭಾರತೀಯ ಜನತಾಪಕ್ಷ ಯಾರಿಗಾದರೂ ಬೇಸರವಿದ್ದರೆ ಅದನ್ನು ವ್ಯಕ್ತಪಡಿಸುವ ಸ್ವತಂತ್ರ ಹಾಗೂ ವಿಧಾನವಿರುತ್ತದೆ. 4 ಬಾರಿ ಬಿಜೆಪಿ ಚಿಹ್ನೆ ಮೇಲೆ ನಮ್ಮ ಹಿರಿಯ ನಾಯಕರಾದ ಎಸ್.ಆ‌ರ್. ವಿಶ್ವನಾಥ್ ಶಾಸಕರಾಗಿದ್ದಾರೆ. ನಾನು ಎಸ್.ಆರ್. ವಿಶ್ವನಾಥ್ ಅವರ ಮನೆಗೆ ಹೋಗಿ ಭೇಟಿ ಮಾಡುತ್ತೇನೆ. ನಮ್ಮ ನಾಯಕರಾದ ಯಡಿಯೂರಪ್ಪನವರು ಕೂಡ ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತಿಳಿಸುವ ಭರವಸೆ ನೀಡಿದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಪೂರಕ ವಾತಾವರಣ ಇದೆ. ಅತಿ ಹೆಚ್ಚು ಮತಗಳಿಂದ ನಾನು ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದರು.

BJP candidate K Sudhakar met Dayanandpuri Swamiji of Devanga Math

ಬಿಜೆಪಿ ಯುವ ಮುಖಂಡ ಸಪ್ತಗಿರಿಶಂಕರ್ ನಾಯಕ್ ಮಾತನಾಡಿ, ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಡಾ.ಕೆ. ಸುಧಾಕರ್ ಆಯ್ಕೆ ಗೆಲುವಿಗೆ ಸಹಕಾರಿ ಯಾಗಿದೆ. ಕ್ಷೇತ್ರದಲ್ಲಿ ಅತಿಹೆಚ್ಚು ಮತಗಳನ್ನು ನೀಡಿ ನಮ್ಮ ಅಭ್ಯರ್ಥಿಗೆ ಗೆಲುವು ನೀಡಲು ಶ್ರಮಿಸಲಾಗುತ್ತದೆ. ಇಂದು ದೇವಾಂಗ ಮಠಕ್ಕೆ ಭೇಟಿ ನೀಡಿದ್ದು, ಕಾರ್ಯ ಕರ್ತರು,ಮುಖಂಡರು ಅಭೂತಪೂರ್ವ ಸ್ವಾಗತ ಕೋರಿದ್ದೇವೆ ಎಂದರು.

ವೈಯಕ್ತಿಕ ಬೇಸರ : ಪಕ್ಷದಲ್ಲಿ ಹಲವಾರು

ಆಕಾಂಕ್ಷಿಗಳಿರುತ್ತಾರೆ ಆದರೆ, ಅಭ್ಯರ್ಥಿ ಆಗುವುದು ಒಬ್ಬರೆ ಅದು ನಾನಾಗಿದ್ದೇನೆ. ಇಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಿದ್ದಾಂತದ ಆಧಾರದ ಮೇಲೆ ಅವರು ಕೆಲಸ ಮಾಡುತ್ತಾರೆ. ನಾನು ಅಭ್ಯರ್ಥಿ ಆಗಿದ್ದರು ಸಹ ಮೋದಿ ಅಭ್ಯರ್ಥಿ ಅಂತ ಕೆಲಸ ಮಾಡಬೇಕು. ಮೋದಿ ಅವರ ಕೈ ಬಲಪಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ವಿಶ್ವನಾಯಕರು ಸಿಕ್ಕಿದ್ದಾರೆ ಇಂಥ ಕಾಲಘಟ್ಟದಲ್ಲಿ ಯಾವುದೇ ವೈಯಕ್ತಿಕ ವಿಚಾರ ಬದಿಗಿಟ್ಟು ನಾವೆಲ್ಲರೂ ದೇಶಕ್ಕಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಆಕ್ರೋಶ:

ನೆಲಮಂಗಲ ದೇವಾಂಗ ಮಠಕ್ಕೆ ಭೇಟಿ ನೀಡಿದ್ದ ಡಾ.ಕೆ. ಸುಧಾಕರ್ ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡುವುದಾಗಿ ತಿಳಿಸಿ ವಾಪಸ್ ಹೋಗಿದ್ದು, ಮಠದ ಬಳಿ ಸೇರಿದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರಮುಖ ಮಠಕ್ಕೆ ಆಗಮಿಸಿದೇ ನಿರ್ಲಕ್ಷ್ಯ ಮಾಡಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

BJP candidate K Sudhakar met Dayanandpuri Swamiji of Devanga Math

ಸಂದರ್ಭದಲ್ಲಿ ಮಾಜಿ ಶಾಸಕ ಎಂ.ವಿನಾಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ ಚೌಧರಿ, ನಗರಸಭೆ ಸದಸ್ಯ ಮುನಿರಾಜು, ಎನ್‌ಪಿಎ ಮಾಜಿ ಅಧ್ಯಕ್ಷ ಮಲ್ಲಯ್ಯ, ಮಹಿಳಾ ಮೊರ್ಚಾ ಅಧ್ಯಕ್ಷೆ ಮಂಜುಳಾ ಸುರೇಶ್, ಶಕ್ತಿಕೇಂದ್ರದ ಅಧ್ಯಕ್ಷ ಕೇಶವಮೂರ್ತಿ, ಹರೀಶ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರಮೇಶ್ ಬಾಬು, ಸತೀಶ್, ಮುಖಂಡರಾದ ಎಂ.ಎನ್ ರಾಮು, ಕೃಪಾನಂದ್, ರವಿ, ಬೃಂಗೇಶ್, ಉಮೇಶ್, ಪ್ರಕಾಶ್, ರಮೇಶ್, ಆಂಜಿನಪ್ಪ, ರಾಜಮ್ಮ, ವೇದಾವತಿ ಮತ್ತಿತರರಿದ್ದರು.

ರಹಸ್ಯ ಮಾತುಕತೆ:-

ನೆಲಮಂಗಲ ಹಂಪಿ ಹೇಮಕೂಟದ ದೇವಾಂಗ ಮಠದ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಅವರನ್ನು ಭೇಟಿಯಾದ ಡಾ.ಕೆ. ಸುಧಾಕರ್ ಸ್ವಾಮೀಜಿಗೆ ಅಭಿನಂದನೆ ಸಲ್ಲಿಸಿ ಅರ್ಧಗಂಟೆ ರಹಸ್ಯವಾಗಿ ಮಾತುಕತೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+