ಚಿಕ್ಕಬಳ್ಳಾಪುರ: ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ, ಬಿತ್ತನೆ ಬೀಜ ಖರೀದಿಗೆ ರೈತರಿಗೆ ಕ್ಯೂಆರ್ ಕೋಡ್
ಚಿಕ್ಕಬಳ್ಳಾಪುರ, ಜೂನ್ 1: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆ ಮಳೆಯಾಗುತ್ತಿರುವ ಕಾರಣದಿಂದ, ಜೂನ್ ಆರಂಭಕ್ಕೂ ಮುನ್ನವೇ ಕೆಲವೆಡೆ ಮುಂಗಾರು ಮಳೆಯಾಗಿದ್ದು, ಈಗಾಗಲೇ ಕೆಲವರು ಭೂಮಿ ಉಳುಮೆ ಶುರು ಮಾಡಿದ್ದಾರೆ. ಕೃಷಿ ಇಲಾಖೆಯೂ ಬಿತ್ತನೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ವಿವಿಧ ಸಿದ್ಧತೆಯನ್ನು ಮಾಡಿಕೊಂಡಿದ್ದು ಮುಂಗಾರು ಆರಂಭದ ನಂತರ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಗಾರಿಗಿಂತ ಹಿಂಗಾರು ಮಳೆಗಳು ಚೆನ್ನಾಗಿ ಆಗುತ್ತಿರುವುದರಿಂದ ರೈತರು ಅಳೆದು ತೂಗಿ ಬಿತ್ತನೆ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ನಡೆದುಕೊಂಡು ಬಂದಿದೆ. ಈ ಬಾರಿ ಸಾಮಾನ್ಯ ಮಳೆ ಬಗ್ಗೆ ಹವಾಮಾನ ಮುನ್ಸೂಚನೆ ಇರುವುದರಿಂದ ಬಿತ್ತನೆ ಹೀಗೆ ಆಗುತ್ತದೆ ಎಂದು ಹೇಳುವುದು ಕಷ್ಟಕರವಾಗಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದು, ಇನ್ನೊಂದೆರೆಡು ದಿನದಲ್ಲಿ ಮತ್ತೆ ಮಳೆಯಾದರೆ ಉಳುಮೆ ಕಾರ್ಯ ನಡೆಯಲಿದೆ.

ಜೂನ್ ತಿಂಗಳ ಮೊದಲೆರಡು ವಾರಗಳಲ್ಲಿ ತೊಗರಿ, ನೆಲಗಡಲೆ, ಮುಸುಕಿನ ಜೋಳದ ಬಿತ್ತನೆ ನಡೆಯಲಿದೆ. ಮಳೆ ತಡವಾದರೆ ಅಥವಾ ಬಿತ್ತನೆ ಕಾರ್ಯಕ್ಕೆ ಹವಾಮಾನ ಸಹಕರಿಸದಿದ್ದರೆ ಜುಲೈ ತಿಂಗಳ ಅಂತ್ಯದವರೆಗೂ ಬಿತ್ತನೆಗೆ ಅವಕಾಶ ಇರಲಿದೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,48,592 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಹೊಂದಲಾಗಿದೆ. 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಗೆ ಗುರಿ ಹೊಂದಲಾ ಗಿದೆ. 50450 ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಮುಸುಕಿನ ಜೋಳ ಬಿತ್ತನೆಯ ಗುರಿ ಇದೆ. 11400 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಿದ್ದು, 27142 ಹೆಕ್ಟೇರ್ ಪ್ರದೇಶ ದಲ್ಲಿನೆಲಗಡಲೆ ಬಿತ್ತನೆ ಗುರಿ ಹೊಂದಲಾಗಿದೆ. 2000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಗುರಿ ಹೊಂದಲಾಗಿದೆ.
ಚಿಂತಾಮಣಿ ತಾಲೂಕಿನಲ್ಲಿ 34,167 ಹೆಕ್ಟೇರ್, ಶಿಡ್ಲಘಟ್ಟ ತಾಲೂಕಿನಲ್ಲಿ 17,670 ಹೆಕ್ಟೇರ್, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 17,663 ಹೆಕ್ಟೇರ್, ಗೌರಿಬಿದನೂರು ತಾಲೂಕಿನಲ್ಲಿ 35,532 ಹಾಗೂ ಗುಡಿಬಂಡೆ ತಾಲೂಕಿನಲ್ಲಿ 11,501 ಹೆಕ್ಟೇರ್, ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಬಿತ್ತನೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಕೃಷಿ ಇಲಾಖೆ ಮಾಡಿಕೊಂಡಿದೆ.

ರಸಗೊಬ್ಬರ ದಾಸ್ತಾನಿಗೆ ಆದ್ಯತೆ
ಸದ್ಯ 18020 ರಷ್ಟು ಮೆಟ್ರಿಕ್ ಟನ್ ದಾಸ್ತಾನಿದೆ. 5930 ಮೆಟ್ರಿಕ್ ಟನ್ ಯೂರಿಯಾ, 2711 ಮೆಟ್ರಿಕ್ ಟನ್ ಡಿಎಪಿ, 146 ಮೆಟ್ರಿಕ್ ಟನ್ ಎಂಒಪಿ, 8905 ಮೆಟ್ರಿಕ್ ಟನ್ ಎನ್ ಪಿಕೆಎಸ್, 312 ಎಸ್‌ಎಸ್‌ಪಿ ಮೆಟ್ರಿಕ್ ಟನ್ ಮತ್ತು 15 ಮೆಟ್ರಿಕ್ ಟನ್‌ನಷ್ಟು ದಾಸ್ತಾನಿದೆ. ಇದಿಷ್ಟೇ ಅಲ್ಲ, ಬಿತ್ತನೆ ಶುರುವಾಗುತ್ತಿದ್ದಂತೆ ಅಗತ್ಯಕ್ಕೆತಕ್ಕಂತೆ ರಸಗೊಬ್ಬರ ದಾಸ್ತಾನು ಪೂರೈಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸದ್ಯದಲ್ಲೇ ಬಿತ್ತನೆ ಬೀಜ ವಿತರಣೆ
ಮತ್ತೊಂದೆಡೆ ಜಿಲ್ಲೆಯಲ್ಲಿ ಒಟ್ಟು 1030 ಕ್ವಿಂಟಾಲ್ ರಾಗಿ, 1176 ಕ್ವಿಂಟಾಲ್ ಮುಸುಕಿನ ಜೋಳ, 45 ಕ್ವಿಂಟಾಲ್, ಅಲಸಂದೆ, 1309 ಕ್ವಿಂಟಾಲ್, ನೆಲಗಡಲೆ, 7.5 ಕ್ವಿಂಟಾಲ್ ಸೂರ್ಯಕಾಂತಿ, 19.9 ಕ್ವಿಂಟಾಲ್ ತೃಣ ಧಾನ್ಯದ ಬೇಡಿಕೆ ಇದ್ದು, ಈಗಾಗಲೇ ಪೂರೈಕೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬಿತ್ತನೆ ಬೀಜ ಪೂರೈಕೆಯಾಗಲಿದ್ದು, ಶೀಘ್ರವೇ ರೈತರಿಗೆ ವಿತರಿಸುವ ಕಾರ್ಯ ನಡೆಯಲಿದೆ.

ಬಿತ್ತನೆ ಬೀಜಕ್ಕೆ ಕ್ಯೂ ಆರ್ ಕೋಡ್
ರೈತರು ಪ್ರತಿ ವರ್ಷ ಬಿತ್ತನೆ ಬೀಜ ಖರೀದಿಗೆ ಹೋದಾಗ ರಸೀದಿ ನೀಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಕ್ಯೂ ಆರ್ ಕೋಡ್ಕೋಡ್ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಬೆಳೆಯ ಬಗ್ಗೆ ಪಕ್ಕಾ ನಿಗಾ ಇಡಲು ಸಾಧ್ಯವಾಗ ಲಿದೆ. ಬಿತ್ತನೆ ಬೀಜದ ಸಂಪೂರ್ಣ ವಿವರ ಈ ಕ್ಯೂರ್ ಕೋಡ್ ನಲ್ಲಿ ಇರಲಿದ್ದು ಬೆಲೆ ಖರೀದಿಸಿ ದವರು ಮತ್ತು ಬಿತ್ತನೆ ಬೀಜದ ಸಂಪೂರ್ಣ ಮಾಹಿತಿ ಇದರಲ್ಲಿ ಲಭ್ಯವಾಗಲಿದೆ. ಇದರಿಂದ ಯಾವುದೇ ತಪ್ಪಾಗದಂತೆ ಅಥವಾ ಮುಂದೆ ಏನಾದರೂ ಸಮಸ್ಯೆಯಾದರೆ ಪತ್ತೆ ಹಚ್ಚಲು ಈ ಕ್ಯೂ ಆರ್ ಕೋಡ್ ವ್ಯವಸ್ಥೆಯಿಂದ ರೈತರಿಗೆ ಬಹಳ ಅನುಕೂಲವಾಗಲಿದೆ.
ಕಳೆದ ಎರಡು ಮೂರು ವರ್ಷ ಗಳಕಾಲ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದ ಪರಿಣಾಮ ಕೆರೆ, ಕುಂಟೆಗಳು ತುಂಬಿ ಅಂತರ್ಜಲ ಮಟ್ಟ ಹೆಚ್ಚಳಗೊಂಡು ನೀರಾವರಿ ಪ್ರದೇಶವು ಹೆಚ್ಚಳಗೊಂಡಿತ್ತು. ಆದರೆ ಈಗಾಗಲೇ ಕೆರೆಗಳಲ್ಲಿ ನೀರು ಅರ್ಧದಷ್ಟು ಖಾಲಿ ಯಾಗಿದ್ದು ಮತ್ತೆ ಮಳೆಗಾಗಿ ಎದುರು ನೋಡುತ್ತಿ ದ್ದಾರೆ. ಹವಾಮಾನ ಮುನ್ಸೂಚನೆ ಪ್ರಕಾರ ಈ ಬಾರಿ ಸಾಮಾನ್ಯ ಮಳೆಯನ್ನೇ ನಿರೀಕ್ಷಿಸಬಹುದು ಎಂದು ಹೇಳಲಾಗಿದೆ. ಹೀಗಾಗಿ ಈ ಬಾರಿ ಯಾವ ರೀತಿ ಮಳೆ ಬೀಳಲಿದೆ ಎಂಬುದನ್ನು ಆಧರಿಸಿ ಜಿಲ್ಲೆಯ ಕೃಷಿ ಚಟುಕವಟಿಕೆಗಳು ನಿರ್ಧಾರಗೊಳ್ಳ ಅವೆ, ಸದ್ಯಕ್ಕೆ ಈಗಷ್ಟೇ ಮಳೆ ಶುರುವಾಗಿದ್ದು, ಮುಂದೆ ಯಾವ ರೀತಿ ಮಳೆ ಮಾರುತುಗಳು ಬದಲಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications