ಚಿಕ್ಕಬಳ್ಳಾಪುರ; ಪಾರ್ಟಿ ಮಾಡಲು ಕರೆಸಿಕೊಂಡು ಕೊಲೆ ಮಾಡಿದ್ದವರ ಬಂಧನ

ಚಿಕ್ಕಬಳ್ಳಾಪುರ, ಜನವರಿ 24: ಪಾರ್ಟಿ ಮಾಡೋಣ ಎಂದು ವ್ಯಕ್ತಿಯೊಬ್ಬನನ್ನು ಕರೆಸಿಕೊಂಡು ಕೊಲೆ ಮಾಡಿದ್ದ ಆರೋಪಿಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಜನವರಿ 12ರಂದು ಚನ್ನಾಪುರ ಬಳಿ ಚಂದ್ರಗಿರಿ ಬೆಟ್ಟಕ್ಕೆ ಹೋಗುವ ರಸ್ತೆ ಬದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಆತ ವಿನು ಪ್ರಸಾದ್ (35) ಎಂದು ತಿಳಿದುಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮೆಲ್ವಿನ್, ರವಿ, ನಿಖಿಲ್ ಕುಮಾರ್, ಕುಶಾಲ್, ಮೋಹನ್, ವಿಘ್ನೇಶ್ ಎಂಬುವರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

6 Arrested For Murder In Chikkaballapur

ಮೆಲ್ವಿನ್ ವಿನು ಪ್ರಸಾದ್ ಬಳಿ ಸಾಲ ಪಡೆದುಕೊಂಡಿದ್ದನು. ಸಾಲದ ಹಣ ವಾಪಸ್ ಕೊಡುವಂತೆ ಮೆಲ್ವಿನ್ ಗೆ ಕೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಹೀಗಾಗಿ ಪ್ಲಾನ್ ಮಾಡಿ ಪಾರ್ಟಿ ಮಾಡೋಣ ಬಾ ಎಂದು ವಿನು ಪ್ರಸಾದ್ ನನ್ನು ಸ್ನೇಹಿತರ ಜೊತೆಗೆ ಚಂದ್ರಗಿರಿ ಬೆಟ್ಟದ ಕಡೆಗೆ ಕರೆದುಕೊಂಡು ಬಂದಿದ್ದನು. ಮೆಲ್ವಿನ್ ಕುಡಿದ ಅಮಲಿನಲ್ಲಿ ಮತ್ತೆ ಜಗಳ ಮಾಡಿದ್ದಾನೆ. ಈ ವೇಳೆ ಎಲ್ಲರೂ ಸೇರಿಕೊಂಡು ವಿನು ಪ್ರಸಾದ್ ನನ್ನು ಕೊಲೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+