Chickpet Elections: ಚಿಕ್ಕಪೇಟೆ: ಶ್ರಮಿಕ ವರ್ಗವನ್ನು ಓಲೈಸುತ್ತಾ ಕಾಂಗ್ರೆಸ್-ಬಿಜೆಪಿ?
2023ರ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಚಿಕ್ಕಪೇಟೆ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಉದಯ್ ಗರುಡಾಚಾರ್ ಜಯ ಗಳಿಸಿದ್ದರು. ಕಾಂಗ್ರೆಸಸ್‌ನ ಆರ್ ವಿ ದೇವರಾಜ್ 7934 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಚಿಕ್ಕಪೇಟೆ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡ ಕ್ಷೇತ್ರಗಳಲ್ಲಿ ಚಿಕ್ಕಪೇಟೆ ಕೂಡ ಒಂದು. ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ 2013ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಆರ್.ವಿ.ದೇವರಾಜ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಾದ್ಯಂತ ತಾವು ಮಾಡಿರುವ ಕೆಲಸ ಮುಂದಿಟ್ಟುಕೊಂಡು ವೋಟ್ ಕೇಳ್ತೀನಿ ಅಂತಿದ್ದಾರೆ ಶಾಸಕ ದೇವರಾಜ್.

ಕಲಾಸಿಪಾಳ್ಯ, ಧರ್ಮರಾಯಸ್ವಾಮಿ ದೇವಸ್ಥಾನ, ಜಯನಗರ, ಸುಧಾಮನಗರದಂತಹ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿವೆ. ಇದೇ ಕ್ಷೇತ್ರದಲ್ಲಿ ಬರೋಬ್ಬರಿ 60ಕ್ಕೂ ಹೆಚ್ಚು ಸ್ಲಂ ಇದ್ದು, ಇಲ್ಲಿ ಸೂಕ್ತ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ ಅಂತ ನಾಗರೀಕರು ದೂರ್ತಿದ್ದಾರೆ. ಆದರೆ ಕ್ಷೇತ್ರಾದ್ಯಂತ ಹಲವು ಕಡೆ ಹಳೆಯ ನೀರಿನ ಮತ್ತು ಒಳಚರಂಡಿ ಪೈಪ್ ಬದಲಾಯಿಸಲಾಗಿದೆ. ಆದ್ರೂ ಅವಶ್ಯಕತೆ ಇರದ ಕಡೆ ವೈಟ್ ಟಾಪಿಂಗ್ ಮಾಡಲಾಗಿದೆ ಎಂಬ ಆರೋಪವಿದೆ.
ಚಿಕ್ಕಪೇಟೆ ಕ್ಷೇತ್ರದಲ್ಲಿ ಸುಧಾಮನಗರ, ಹೊಂಬೇಗೌಡ ನಗರ, ಜಯನಗರ, ಧರ್ಮರಾಯಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿಶ್ವೇಶ್ವರಪುರ, ಸಿದ್ದಾಪುರ ಒಟ್ಟು ಏಳು ಬಿಬಿಎಂಪಿ ವಾರ್ಡ್ಗಳಿವೆ. ಕ್ಷೇತ್ರದಲ್ಲಿ ಈ ಬಾರಿ ಕೋಟ್ಯಧಿಪತಿಗಳು, ಹೊಸ ಮುಖಗಳು ಅಖಾಡಕ್ಕಿಳಿಯಲು ಸಜ್ಜಾಗಿರುವುದು ಕಣ ರಂಗೇರುವಂತೆ ಮಾಡಲಿದೆ. ಕೆಲ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಈಗಾಗಲೇ ಉಡುಗೊರೆ ವಿತರಿಸಲಾರಂಭಿಸಿರುವುದು ಆಗಾಗ್ಗೆ ದೊಡ್ಡ ಸುದ್ದಿಯಾಗುತ್ತಿದೆ.
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಉದಯ್ ಗರುಡಾಚಾರ್(ಬಿಜೆಪಿ) | 57,312 | ಆರ್ ವಿ ದೇವರಾಜ್(ಕಾಂಗ್ರೆಸ್ | 49,378 |
| 2013 | ಆರ್.ವಿ. ದೇವರಾಜ್ (ಕಾಂಗ್ರೆಸ್) | 44,714 | ಉದಯ್ ಬಿ. ಗರುಡಾಚಾರ್(ಬಿಜೆಪಿ) | 31,655 |
| 2008 | ಡಾ. ಹೇಮಚಂದ್ರ ಸಾಗರ್(ಬಿಜೆಪಿ) | 40,252 | ಆರ್.ವಿ. ದೇವರಾಜ್(ಕಾಂಗ್ರೆಸ್) | 32,971 |
ಟಿಕೆಟ್‌ಗೆ ಪೈಪೋಟಿ
ಕಾಂಗ್ರೆಸ್‌ನಿಂದ ಆರ್‌ವಿ ದೇವರಾಜ್ ಇಲ್ಲವೇ ಪುತ್ರ ಯುವರಾಜ್ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಪಿಆರ್ ರಮೇಶ್, ಗಂಗಾಬಿಕೆ ಮಲ್ಲಿಕಾರ್ಜುನ್ ಮತ್ತಿತರರೂ ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರೇ ಇದ್ದರೂ ಹಲವು ಆಕಾಂಕ್ಷಿಗಳು ಪಕ್ಷ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಬಾಬು ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಜೆಡಿಎಸ್‌ನತ್ತ ಮುಖ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಚಿಕ್ಕಪೇಟೆಯಲ್ಲಿ ಆಪ್ ಅಭ್ಯರ್ಥಿ ಬ್ರಿಜೇಶ್ ಕಾಳಪ್ಪ ಈ ಬಾರಿ ಸ್ಪರ್ಧಿಸಲಿದ್ದಾರೆ.

ಜಾತಿ ಲೆಕ್ಕಾಚಾರ
ಎಸ್ಸಿ- ಎಸ್ಟಿ, ಮುಸ್ಲೀಮರು, ಒಕ್ಕಲಿಗರೇ ಚಿಕ್ಕಪೇಟೆಯಲ್ಲಿ ನಿರ್ಣಾಯಕರಾಗಿದ್ದಾರೆ.
| ಜಾತಿ ಲೆಕ್ಕಾಚಾರ |
| ಎಸ್ಸಿ/ಎಸ್ಟಿ - 49,000 |
| ಮುಸ್ಲೀಂ - 38,000 |
| ಒಕ್ಕಲಿಗ - 27, 000 |
| ನೇಕಾರರು - 14,000 |
| ಬ್ರಾಹ್ಮಣರು - 11,000 |
| ತೆಲಗು ಚಿಟ್ಟಿಯಾರ್, ತಿಗಳರು ಇತ್ಯಾದಿ - 29,000 |

ಇಲ್ಲಿ ಎಸ್ ಸಿ/ ಎಸ್ ಟಿ ಸಮುದಾಯದವರು 49,000, ಮುಸ್ಲೀಂ- 38,000, ಒಕ್ಕಲಿಗ - 27,000, ನೇಕಾರರು - 14,000, ಬ್ರಾಹ್ಮಣರು - 11,000 ಹಾಗೂ ತೆಲಗು ಚೆಟ್ಟಿಯಾರ್, ತಿಗಳರು ಇತ್ಯಾದಿ 29,000 ಸಾವಿರ ಸಂಖ್ಯೆಯಲ್ಲಿದ್ದಾರೆ.
ಕ್ಷೇತ್ರದಾದ್ಯಂತ 38ಕ್ಕೂ ಹೆಚ್ಚು ಕೊಳೆಗೇರಿಗಳಿದ್ದು, ಶ್ರಮಿಕ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಎಲ್ಲಅಭ್ಯರ್ಥಿಗಳು ಕೊಳೆಗೇರಿ ಮತದಾರರ ವಿಶ್ವಾಸ ಪಡೆದರೆ ಗೆಲುವಿನ ಹಾದಿ ಸುಗಮ ಎಂಬ ಲೆಕ್ಕಾಚಾರದಲ್ಲಿಓಲೈಕೆಗೆ ಮುಂದಾಗುವುದು ಹಿಂದಿನಿಂದಲೂ ಕಾಣುತ್ತಾ ಬಂದಿದೆ. 2018ರಲ್ಲಿ ಬಿಜೆಪಿಯಿಂದ ಉದಯ್ ಗರುಡಾಚಾರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಇತ್ತೀಚೆಗೆ ಅಮಾನತುಗೊಂಡಿರುವ ಕೆಜಿಎಫ್ ಬಾಬು ಪ್ರಬಲ ಆಕಾಂಕ್ಷಿ. ಈಗಾಗಲೇ ಅವರು ಕ್ಷೇತ್ರದ ಬಡವರಿಗೆ ಆರ್ಥಿಕ ನೆರವು, ಉಡುಗೊರೆ ನೀಡುವ ವಿಚಾರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ ಎಂಬ ಮಾತುಗಳಿವೆ.












Click it and Unblock the Notifications