ಜಯಲಲಿತಾ 100 ಕೋಟಿ ದಂಡವನ್ನು ಕೊರ್ಟ್ ಹೀಗೆ ವಸೂಲಿ ಮಾಡುತ್ತೆ!

By: ವಿಕಾಸ್ ನಂಜಪ್ಪ
Subscribe to Oneindia Kannada
ಬೆಂಗಳೂರು, ಫೆಬ್ರವರಿ 15: ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನೆ ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದೆ. ವಿಚಾರಣಾ ನ್ಯಾಯಾಲಯ ಜಯಲಲಿತಾಗೆ 100 ಕೋಟಿ ಹಾಗೂ ಶಶಿಕಲಾ ಮತ್ತು ಇತರರಿಗೆ ತಲಾ 10 ಕೋಟಿ ಸೇರಿ ಒಟ್ಟು 130 ಕೋಟಿ ದಂಡ ವಿಧಿಸಿತ್ತು.

ವಿಚಾರಣಾ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದಿರುವುದರಿಂದ ಇದೀಗ ತಮಿಳುನಾಡು ಸರಕಾರ 130 ಕೋಟಿ ಹಣ ವಸೂಲಿಗೆ ಸಿದ್ಧವಾಗಬೇಕಿದೆ. ಸದ್ಯ ಜಯಲಲಿತಾ ಬದುಕಿಲ್ಲದೇ ಇರುವುದರಿಂದ ಆಕೆಯ ಪಾಲಿನ ದಂಡವನ್ನು ಆಕೆಗೆ ಸೇರಿದ ಮನೆ, ಆಸ್ತಿಗಳಿಂದ ವಸೂಲಿ ಮಾಡಬೇಕಿದೆ.

ಆಕೆಯ ಚಪ್ಪಲಿ, ಸೀರೆ ಸೇರಿದಂತೆ ಹಲವು ವಸ್ತುಗಳು ಈಗಾಗಲೇ ಸರಕಾರದ ವಶದಲ್ಲಿವೆ. ಆದರೆ ಅವುಗಳಿಂದ ದಂಡ ಪ್ರಮಾಣದ 100 ಕೋಟಿ ರೂಪಾಯಿ ಹಣಂ ಹೊಂದಿಸುವುದು ಕಷ್ಟ. ಹೀಗಾಗಿ ಸರಕಾರ ಆಕೆಗೆ ಸೇರಿದ ಆಸ್ತಿಗಳ ಬುಡಕ್ಕೆ ಕೈ ಹಾಕಬೇಕಾಗಿದೆ.

To recover Rs 100 crores here are Jaya's assets that will come under the hammer

ತಮಿಳುನಾಡು ಸರಕಾರದ ಅಧೀನದಲ್ಲಿರುವ ಆಸ್ತಿಗಳು ಮತ್ತು ಅವುಗಳ ಮೌಲ್ಯವನ್ನು ನೋಡುವುದಾದರೆ,

750 ಜತೆ ಚಪ್ಪಲಿಗಳು - ಮೌಲ್ಯ ಗೊತ್ತಿಲ್ಲ

10,500 ಸೀರೆಗಳು - ಮೌಲ್ಯ ಗೊತ್ತಿಲ್ಲ

ಚಿನ್ನಾಭರಣಗಳು - ಮೌಲ್ಯ ರೂ. 3.5 ಕೋಟಿ

500 ವೈನ್ ಬಾಟಲಿಗಳು - ಮೌಲ್ಯ ಗೊತ್ತಿಲ್ಲ

ವಜ್ರಾಭರಣ -ಮೌಲ್ಯ ರೂ. 1 ಕೋಟಿ

ಪೊಯೆಸ್ ಗಾರ್ಡನ್ ನಿವಾಸ - ರಾಜ್ಯ ಸರಕಾರ ಮೌಲ್ಯ ನಿರ್ಧರಿಸಬೇಕಾಗಿದೆ.

ಕೊಡನಾಡ್ ಟೀ ಎಸ್ಟೇಟ್, ನೀಲಗಿರಿ - ಮೌಲ್ಯ ಇನ್ನೂ ನಿರ್ಧಾರವಾಗಿಲ್ಲ

ಸಿರುತ್ವೂರ್ ಬಂಗಲೆ, ಮಹಾಬಲಿಪುರಂ - ಮೌಲ್ಯ ರೂ. 55 ಕೋಟಿ

ಪಯನೂರ್ ಬಂಗಲೆ - ಖರೀದಿ ಬೆಲೆ ರೂ. 13 ಲಕ್ಷ, ಮೌಲ್ಯ ನಿಗದಿಯಾಗಿಲ್ಲ

ಇವಿಷ್ಟು ಆಸ್ತಿಗಳು ಸರಕಾರದ ಒಡೆತನದಲ್ಲಿದ್ದು, ಇವುಗಳನ್ನು ಹರಾಜು ಹಾಕಿ ಇದೀಗ ದಂಡ ಮೊತ್ತದ ಹಣ ಹೊಂದಿಸಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court on Tuesday upheld the trial court's order which had convicted Jayalalithaa and also ordered her to pay a fine of Rs 100 crore. The court had fined Sasikala Natarajan, Ilavarasi and Sudhakaran Rs 10 crore each, thus making the total fine Rs 130 crore
Please Wait while comments are loading...