ಚೆನ್ನೈ: ವೀರಪ್ಪನ್ ಸಂಧಾನಕಾರ ನಕ್ಕೀರನ್ ಗೋಪಾಲ್ ಬಂಧನ
ಚೆನ್ನೈ, ಅಕ್ಟೋಬರ್ 09: ಖ್ಯಾತ ತಮಿಳುಪತ್ರಕರ್ತ ಮತ್ತು ಕಾಡುಗಳ್ಳ ವೀರಪ್ಪನ್ ನ ಸಂಧಾನಕಾರನಾಗಿದ್ದ ನಕ್ಕೀರನ್ ಗೋಪಾಲ್ ಅನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
'ನಕ್ಕೀರನ್' ಸಾಪ್ತಾಹಿಕ ಪತ್ರಿಕೆಯ ಸಂಪಾದಕರಾಗಿರುವ ಆರ್.ಗೋಪಾಲ್ ಅವರನ್ನು ಇಂದು ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಚೆನ್ನೈ ನಗರದ ಖಾಸಗಿ ಕಾಲೇಜಿನ ಸಹಾಯಕ ಪ್ರೊಫೆಸರ್ ನಿರ್ಮಲಾ ದೇವಿ ಎಂಬುವರು ಕಾಲೇಜಿನ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗೋಪಾಲ್ ಸಂಪಾದತ್ವದ ನಕ್ಕೀರನ್ ಸಾಪ್ತಾಹಿಕದಲ್ಲಿ ವರದಿ ಪ್ರಕಟವಾಗಿತ್ತು. ಹಾಗಾಗಿ ಇದರ ವಿರದ್ಧ ದೂರು ದಾಖಲಾಗಿತ್ತು.

ನಿರ್ಮಲಾ ದೇವಿ ಅವರು ವಿವಿಯ ಉನ್ನತ ಅಧಿಕಾರಿಗಳೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ತಮ್ಮ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದ್ದರು ಎಂದು ನಕ್ಕೀರನ್ ಗೋಪಾಲ್ ಅವರ ಸಂಪಾದಕತ್ವದ ನಕ್ಕೀರನ್ ಸಾಪ್ತಾಹಿಕದಲ್ಲಿ ವರದಿ ಆಗಿತ್ತು.
ಅಷ್ಟೆ ಅಲ್ಲದೆ ನಕ್ಕೀರನ್ ಸಾಪ್ತಾಹಿಕದಲ್ಲಿ ತಮಿಳುನಾಡು ರಾಜ್ಯಪಾಲರ ಬಗ್ಗೆಯೂ ಕೀಳಾಗಿ ಬರೆಯಲಾಗಿದೆ ಎಂದು ಸಹ ದೂರು ನೀಡಲಾಗಿತ್ತು. ಹಾಗಾಗಿ ಅವರನ್ನು ಇಂದು ಚೆನ್ನೈನ ಆಡ್ಯಾರ್ ಪೊಲೀಸರು ಬಂಧಿಸಿದ್ದಾರೆ.
ಕಾಡುಗಳ್ಳ ವೀರಪ್ಪನ್ ಯಾರನ್ನಾದರೂ ಅಪಹರಿಸಿದಾಗ ಸಂಧಾನಕ್ಕೆ ಹೋಗಿ ಬಿಡಿಸಿಕೊಂಡು ಬರುವ ಕೆಲಸವನ್ನು ನಕ್ಕೀರನ್ ಗೋಪಾಲ್ ಮಾಡುತ್ತಿದ್ದರು. ಡಾ.ರಾಜ್‌ಕುಮಾರ್ ಅಪಹರಣವಾದಾಗಲೂ ಸಹ ಅವರ ಬಿಡುಗಡೆಯಲ್ಲಿ ನಕ್ಕೀರನ್ ಗೋಪಾಲ್ ಪ್ರಮುಖ ಪಾತ್ರ ವಹಿಸಿದ್ದರು.












Click it and Unblock the Notifications