ಶಶಿಕಲಾ v/s ಪನ್ನೀರ್: ಬುಧವಾರದ ಹತ್ತು ಪ್ರಮುಖ ಬೆಳವಣಿಗೆ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 8: ತಮಿಳುನಾಡು ಮುಖ್ಯಮಂತ್ರಿ ಪಟ್ಟಕ್ಕೆ ಏರುವ ಸಮಯದಲ್ಲೇ ಎಐಡಿಎಂಕೆ ಮಹಾ ಕಾರ್ಯದರ್ಶಿ ಶಶಿಕಲಾ ಅವರಿಗೆ ಒಂದರ ಹಿಂದೊಂದರಂತೆ ವಿಘ್ನಗಳು ಕಾಡಲಾರಂಭಿಸಿವೆ. ಏತನ್ಮಧ್ಯೆ, ತಮ್ಮ ಪರವಾಗಿ ನಿಂತಿರುವ ಪಕ್ಷದ 126 ಎಂಎಲ್ ಎಗಳೊಂದಿಗೆ ಬುಧವಾರ ರಾತ್ರಿ ದೆಹಲಿಗೆ ತೆರಳಲಿರುವ ಶಶಿಕಲಾ, ರಾಷ್ಟ್ರಪತಿ ಭವನದ ಮುಂದೆ ಪರೇಡ್ ನಡೆಸಿ ತಮ್ಮ ಬಲ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಮೊದಲಿಗೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯೇ ಎಂಬುದರ ಬಗ್ಗೆ ಚರ್ಚೆಯಾಗಿ, ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಮುಂತಾದ ಆರೋಪಗಳ ಬಗ್ಗೆ ಪ್ರಸ್ತಾವವಾಯಿತು.[ತಿರುಗಿ ಬಿದ್ದ ಪನ್ನೀರ್, ತ.ನಾಡು ರಾಜಕೀಯದ 8 ಸಾಧ್ಯತೆ]

ಈ ಹಿನ್ನೆಲೆಯಲ್ಲಿ, ಸಿಎಂ ಪದವಿ ಸ್ವೀಕಾರದ ವೇಳೆ ಸಂಪ್ರದಾಯದಂತೆ ಪ್ರತಿಜ್ಞಾ ವಿಧಿ ಬೋಧಿಸಬೇಕಿದ್ದ ಅಲ್ಲಿನ ರಾಜ್ಯಪಾಲರು ಚೆನ್ನೈಗೆ ಮರಳಲೇ ಇಲ್ಲ.

ಇದರ ಬೆನ್ನಲ್ಲೇ ಮಂಗಳವಾರ (ಫೆಬ್ರವರಿ 7) ರಾತ್ರಿಯಿಂದಲೇ ಜಯಲಲಿತಾ ಅವರ ಆಪ್ತ ಹಾಗೂ ಮೂರ್ನಾಲ್ಕು ದಿನಗಳ ಹಿಂದಷ್ಟೇ ಪದವಿ ತೊರೆದಿದ್ದ ಪನೀರ್ ಸೆಲ್ವಂ ಬಂಡಾಯವೆದ್ದಿದ್ದಾರೆ.['ಚಿನ್ನಮ್ಮ' ಶಶಿಕಲಾ ಕನಸು ಭಗ್ನ, ಕಳಚಲಿದೆ ಅಧಿನಾಯಕಿ ಪಟ್ಟ]

ಇದು, ಶಶಿಕಲಾ ಅವರಿಗೆ ನುಂಗಲಾರದ ತುತ್ತಾಗಿದೆಯಲ್ಲದೆ, ಪಕ್ಷವೇ ಇಬ್ಭಾಗವಾಗುವ ಸಂದರ್ಭ ಬಂದೊದಗಿದೆ. ಪನ್ನೀರ್ ಸೆಲ್ವಂ ಅವರು, ಜಯಲಲಿತಾ ಅವರ ಸಾವಿನ ನ್ಯಾಯಾಂಗ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.[ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?]

ಈ ನಿಟ್ಟಿನಲ್ಲಿ ದಿನದ 10 ಪ್ರಮುಖ ಬೆಳವಣಿಗೆಗಳು ಹೀಗಿವೆ.

ಬಹುಮತದತ್ತ ಒಲವು

ಬಹುಮತದತ್ತ ಒಲವು

ವಿಧಾನಸಭೆಯಲ್ಲಿ ನಾನು ಬಹುಮತ ಸಾಬೀತುಪಡಿಸುವೆ. ಎಐಡಿಎಂಕೆ ಪಕ್ಷದಲ್ಲಿ ಅಮ್ಮ (ಜಯಲಲಿತಾ) ಅವರಿಗೆ ನಿಷ್ಠರಾಗಿದ್ದವರೆಲ್ಲಾ ನನಗೆ ಬೆಂಬಲ ನೀಡುತ್ತಾರೆ. ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ವಿಧೇಯನಾಗಿದ್ದೇನೆ. ಕೊನೆಯವರೆಗೂ ಪಕ್ಷದ ಉಳಿವಿಗಾಗಿ ಹೋರಾಡುತ್ತೇನೆ. ಪಕ್ಷಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದ ಪನ್ನೀರ್.

ಡಿಎಂಕೆ ಜತೆ ಸೇರಿ ಕುತಂತ್ರ ಎಂದ ಶಶಿಕಲಾ

ಡಿಎಂಕೆ ಜತೆ ಸೇರಿ ಕುತಂತ್ರ ಎಂದ ಶಶಿಕಲಾ

ತಮ್ಮ ವಿರುದ್ಧದ ಬಂಡಾಯ ಎದುರಾಳಿ ಪಕ್ಷವಾದ ಡಿಎಂಕೆಯ ಕುತಂತ್ರ ಎಂದ ಶಶಿಕಲಾ. ಪನ್ನೀರ್ ಸೆಲ್ವಂ ಅವರು ಡಿಎಂಕೆ ಪಕ್ಷದೊಂದಿಗೆ ಕೈ ಜೋಡಿಸಿ ತಮ್ಮ ವಿರುದ್ಧ ಬಂಡಾಯವೆದ್ದಿದ್ದಾರೆ. ನಾನು ಜಯಲಲಿತಾ ಅವರನ್ನು ಎಷ್ಟು ಅಕ್ಕರೆಯಿಂದ ನೋಡಿಕೊಂಡಿದ್ದೇನೆಂಬುದು ಪೋಯಸ್ ಗಾರ್ಡನ್ ನಲ್ಲಿರುವ ನಿವಾಸದ ಸಿಬ್ಬಂದಿಗೆ ಗೊತ್ತಿದೆ.

ಸಿಎಂ ಆಗಿ ಮುಂದುವರಿಯಲು ಯತ್ನ

ಸಿಎಂ ಆಗಿ ಮುಂದುವರಿಯಲು ಯತ್ನ

ಅಮ್ಮ ಹದಿನಾರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದರು. ನಾನು ಎರಡು ಸಂದರ್ಭಗಳಲ್ಲಿ ಮುಖ್ಯಮಂತ್ರಿಯಾಗಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದು ಅಮ್ಮನ ದಯೆಯಿಂದ. ಹಾಗಾಗಿ, ಅಮ್ಮನಿಗೆ ನಾನು ಋಣಿ. ಶೀಘ್ರವೇ ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿಯಾಗಿ ನನ್ನನ್ನು ಮುಂದುವರಿಸಲು ಕೋರುವೆ ಎಂದ ಪನ್ನೀರ್ ಸೆಲ್ವಂ.

ಬಣದ ಒಲುಮೆ

ಬಣದ ಒಲುಮೆ

ಡಿಸೆಂಬರ್ 5ರಂದು ಅಮ್ಮ ತೀರಿಕೊಂಡಾಗ ನಾವೆಲ್ಲರೂ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದೆವು. ಜಲ್ಲಿಕಟ್ಟು ಬಗ್ಗೆ ಸುಗ್ರೀವಾಜ್ಞೆ ತಂದು ಅದನ್ನು ಕಾನೂನುಬದ್ಧ ಮಾಡಿದ ಪನ್ನೀರ್ ಗೆ ನಮ್ಮ ಬೆಂಬಲವಿದೆ ಎಂಬ ಪನ್ನೀರ್ ಸೆಲ್ವಂ ಬಣ. (ಸಂಗ್ರಹ ಚಿತ್ರ)

ಮುಂಬೈನಲ್ಲೇ ಇರುವ ವಿದ್ಯಾಸಾಗರ್

ಮುಂಬೈನಲ್ಲೇ ಇರುವ ವಿದ್ಯಾಸಾಗರ್

ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಂಬೈನಲ್ಲೇ ಉಳಿದಿರುವ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್. ಚೆನ್ನೈನಲ್ಲಿರುವ ರಾಜಭವನದ ಮೂಲಗಳ ಪ್ರಕಾರ, ರಾವ್ ಅವರು, ಗುರುವಾರ ಚೆನ್ನೈಗೆ ಆಗಮಿಸುವ ನಿರೀಕ್ಷೆಯಿದೆ.

ಎಲ್ಲಾ ಕಾರ್ಯಕರ್ತರ ಆಗ್ರಹ ಎಂದ ಚಿನ್ನಮ್ಮ

ಎಲ್ಲಾ ಕಾರ್ಯಕರ್ತರ ಆಗ್ರಹ ಎಂದ ಚಿನ್ನಮ್ಮ

ಮಧ್ಯಾಹ್ನ ಸುಮಾರು 1 ಗಂಟೆಗೆ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸಿದ ಶಶಿಕಲಾ. ಪಕ್ಷದ ಕಾರ್ಯಕರ್ತರಿಂದ ಬಹುಪರಾಕ್. ಕಾರ್ಯಕರ್ತರ ಆಗ್ರಹದ ಮೇರೆಗೆ ಪಕ್ಷದ ಮಹಾ ಕಾರ್ಯದರ್ಶಿಯಾಗಿ ನೇಮಕಗೊಂಡೆ ಹಾಗೂ ಇದೀಗ ಮುಖ್ಯಮಂತ್ರಿಯಾಗಲು ಹೊರಟಿದ್ದೇನೆ ಎಂದ ಶಶಿಕಲಾ.

ಚುನಾವಣಾ ಆಯೋಗದ ಆಕ್ಷೇಪ

ಚುನಾವಣಾ ಆಯೋಗದ ಆಕ್ಷೇಪ

ಎಐಡಿಎಂಕೆ ಪಕ್ಷಕ್ಕೆ ಮಹಾ ಕಾರ್ಯದರ್ಶಿಯಾದ ಶಶಿಕಲಾ ಅವರ ಆಯ್ಕೆಯು ಕಾನೂನು ಬಾಹಿರ ಎಂದ ಚುನಾವಣಾ ಆಯೋಗ. ಇದರಿಂದ ಮುಖ್ಯಮಂತ್ರಿ ಗದ್ದುಗೆಗೆ ಏರಲು ಹೊರಟಿರುವ 'ಚಿನ್ನಮ್ಮ'ಗೆ ಮತ್ತೊಂದು ಹಿನ್ನಡೆ.

ಸ್ಟಾಲಿನ್ ಮುಗುಳ್ನಗೆಯ ಉತ್ತರ

ಸ್ಟಾಲಿನ್ ಮುಗುಳ್ನಗೆಯ ಉತ್ತರ

ಡಿಎಂಕೆ ಪಕ್ಷದೊಂದಿಗೆ ಕೈ ಜೋಡಿಸುವ ಮೂಲಕ ಪನ್ನೀರ್ ಸೆಲ್ವಂ ಅವರು, ತಮ್ಮ ವಿರುದ್ಧ ಬಂಡೆದ್ದಿದ್ದಾರೆಂದು ಶಶಿಕಲಾ ಮಾಡಿದ ಆರೋಪಕ್ಕೆ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಅವರಿಂದ ನಿರಾಕರಣೆ. ಇಂಥ ಹಲವಾರು ಟೀಕೆಗಳು ಈ ಹಿಂದೆಯೂ ಬಂದಿವೆ ಎಂದ ಸ್ಟಾಲಿನ್.

ಪನ್ನೀರ್ ಗೆ ಕಮಲ್ ಬೆಂಬಲ

ಪನ್ನೀರ್ ಗೆ ಕಮಲ್ ಬೆಂಬಲ

ಪನ್ನೀರ್ ಸೆಲ್ವಂ ಅವರ ಬೆಂಬಲಕ್ಕೆ ಬಂದ ನಟ ಕಮಲ ಹಾಸನ್. ಪನ್ನೀರ್ ಸೆಲ್ವಂ ಅವರಿಗೆ ರಾಜಕೀಯ ಹಾಗೂ ಆಡಳಿತದ ಅನುಭವ ಇರುವುದರಿಂದ ಅವರೇ ಮುಖ್ಯಮಂತ್ರಿಯಾಗಲಿ ಎಂದು ಟ್ವೀಟ್ ಮಾಡಿದ ನಟ.

ಸುಬ್ರಮಣ್ಯಂ ಸ್ವಾಮಿ ಹೇಳಿಕೆ

ಸುಬ್ರಮಣ್ಯಂ ಸ್ವಾಮಿ ಹೇಳಿಕೆ

ತಮಿಳುನಾಡು ರಾಜ್ಯಪಾಲರು ಎಲ್ಲಿದ್ದಾರೊ ಗೊತ್ತಿಲ್ಲ. ಆದರೆ, ಶಶಿಕಲಾ ಬಣ ಮಾತ್ರ ಫೆಬ್ರವರಿ 9ರಂದು ನವದಹೆಲಿಗೆ ಆಗಮಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದ ಬಿಜೆಪಿಯ ನಾಯಕ ಸುಬ್ರಮಣ್ಯನ್ ಸ್ವಾಮಿ.
- ಪನ್ನೀರ್ ಸೆಲ್ವಂ ಬಣ ಸೇರಿಕೊಂಡ ಶ್ರೀವೈಕುಂಠಮ್ ಕ್ಷೇತ್ರದ ಎಂಎಲ್ಎ ಷಣ್ಮುಗನಾಥನ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Faced with a revolt from O Panneerselvam, AIADMK general secretary VK Sasikala on Wednesday said she had got wind of his moves a few days ago itself and asserted that the party remains united and will not be cowed down by such threats.Sasikala is flying in with all MLAs later tonight to Delhi to parade them before President.
Please Wait while comments are loading...