ತಮಿಳುನಾಡಿನ 'ಅಮ್ಮ' ಜೆ ಜಯಲಲಿತಾ ವಿಧಿವಶ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 05: ತಮಿಳುನಾಡಿನ ಮುಖ್ಯಮಂತ್ರಿ, ಅಭಿಮಾನಿಗಳ ಪಾಲಿನ 'ಅಮ್ಮ', ಪುರಚ್ಚಿ ತಲೈವಿ ಎನಿಸಿಕೊಂಡಿದ್ದ ಜೆ ಜಯಲಲಿತಾ ಅವರು ಸೋಮವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. [ಜಯಲಲಿತಾ ಅಪರೂಪದ ಚಿತ್ರಗಳು]

ಸೋಮವಾರ ರಾತ್ರಿ 11.30 ರ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಪ್ರಕಟಿಸಿದೆ.

ತಮಿಳುನಾಡಿನ ಸುದ್ದಿವಾಹಿನಿಗಳಿಂದ ಸುದ್ದಿ ಹೊರಬಂದಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಭಾನುವಾರ (ಡಿಸೆಂಬರ್ 04) ಸಂಜೆ ಹೃದಯಾಘಾತಕ್ಕೊಳಗಾದ ಬಳಿಕ ಮತ್ತೆ ಚೇತರಿಕೆ ಕಾಣಲಿಲ್ಲ. [ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ]

ಅಪೋಲೋ ಆಸ್ಪತ್ರೆ ವೈದ್ಯರು, ಏಮ್ಸ್ ತಜ್ಞರು, ಲಂಡನ್ನಿನ ಡಾ. ರಿಚರ್ಡ್ ಕೂಡಾ ಏನು ಮಾಡಲಾಗಲಿಲ್ಲ. ECMO ಸೇರಿದಂತೆ ಯಾವುದೇ ಜೀವ ರಕ್ಷಕ ಸಾಧನಗಳು ಪ್ರಯೋಜನಕ್ಕೆ ಬರಲಿಲ್ಲ. ಕೋಟ್ಯಂತರ ತಮಿಳರ ಪಾಲಿನ 'ಅಮ್ಮ' ಚಿರನಿದ್ರೆಗೆ ಜಾರಿ ಬಿಟ್ಟರು.

ಜಯಲಲಿತಾ ಅವರ ಪಾರ್ಥೀವ ಶರೀರವನ್ನು ರಾಜಾಜಿ ಹಾಲ್ ನಲ್ಲಿ ಇರಿಸಲಾಗುತ್ತಿದ್ದು, ಸಾರ್ವಜನಿಕರು ಅಂತಿಮ ದರ್ಶನ ಪಡೆದುಕೊಳ್ಳಬಹುದಾಗಿದೆ. ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ವೇಳೆಗೆ ಮರೀನಾ ಬೀಚ್ ನಲ್ಲಿ ನೆರವೇರಿಸಲಾಗುವುದು, ಎಂಜಿಆರ್ ಅವರ ಸಮಾಧಿ ಪಕ್ಕದಲ್ಲೇ ಜಯಲಲಿತಾ ಅವರ ಸಮಾಧಿ ಸ್ಥಾಪಿಸಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.

ಮೇಲುಕೋಟೆಯಲ್ಲಿ ಜನಿಸಿದ ಜಯಲಲಿತಾ

ಮೇಲುಕೋಟೆಯಲ್ಲಿ ಜನಿಸಿದ ಜಯಲಲಿತಾ

ಕರ್ನಾಟಕದ ಮಂಡ್ಯದ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಜನಿಸಿದ ಜಯಲಲಿತಾ ಅವರು ನಟಿ, ನೃತ್ಯಗಾರ್ತಿ, ರಾಜಕಾರಣಿಯಾಗಿ ಬೆಳೆದವರು. ಮೈಸೂರು ರಾಜಮನೆತನದ ಜತೆಗೆ ಜಯರಾಮ್ ಅವರ ಕುಟುಂಬ ನಿಕಟ ಸಂಪರ್ಕ ಹೊಂದಿತ್ತು. ಆದರೆ, ಬಾಲ್ಯದಲ್ಲೇ ಅಪ್ಪನನ್ನು ಕಳೆದುಕೊಂಡು ಅಮ್ಮ ನಟಿ ಸಂಧ್ಯಾ ಅವರಂತೆ ಬಣ್ಣದ ಬದುಕಿಗೆ ಕಾಲಿರಿಸಿದರು. ಬಾಲನಟಿಯಾಗಿ ಕನ್ನಡ, ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಜಯಲಲಿತಾ ಅವರು 15 ವರ್ಷ ವಯಸ್ಸಿಗೆ ನಾಯಕಿಯಾದರು.

1965ರ ವೇಳೆಗೆ ಸ್ಟಾರ್ ನಟ ಎಂಜಿಆರ್ ಪರಿಚಯ

1965ರ ವೇಳೆಗೆ ಸ್ಟಾರ್ ನಟ ಎಂಜಿಆರ್ ಪರಿಚಯ

1965ರ ವೇಳೆಗೆ ಸ್ಟಾರ್ ನಟ ಎಂಜಿಆರ್ ಪರಿಚಯವಾಗಿ ಅವರ ಚಿತ್ರಗಳ ನಾಯಕಿ ಎರಡು ದಶಕಗಳ ಕಾಲ ಮೆರೆದರು. ಮುಂದೆ ಎಂಜಿಆರ್ ಮೃತರಾದ ಬಳಿಕ ಅವರ ಉತ್ತರಾಧಿಕಾರಿಯಾಗಿ ತಮಿಳುನಾಡಿನ ಎಐಎಡಿಎಂಕೆ ಪಕ್ಷವನ್ನು ಕಟ್ಟಿ ಬೆಳೆಸಿದರು. ರಾಜ್ಯ ಸಭಾ ಸದಸ್ಯೆಯಾಗಿ, ಮುಖ್ಯಮಂತ್ರಿಯಾಗಿ ತಮಿಳರ ಪಾಲಿನ ದೇವತೆಯಾದರು.

ಕಷ್ಟ ನಷ್ಟಗಳ ಜತೆ ಜೀವನ

ಕಷ್ಟ ನಷ್ಟಗಳ ಜತೆ ಜೀವನ

ಅನೇಕ ವಿವಾದಗಳು, ಭ್ರಷ್ಟಾಚಾರಗಳ ಜತೆಗೆ ಬೆಳೆದ ಜಯಲಲಿತಾ ಅವರು ಜೈಲುವಾಸವನ್ನು ಅನುಭವಿಸಿದ್ದರು. ಗೆಳತಿ ಶಶಿಕಲಾ ಜತೆ ಅನೇಕ ಆರೋಪಗಳನ್ನು ಎದುರಿಸಿದರು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಕಂಡಿದ್ದರು. ಆದರೆ, ಅಧಿಕಾರ ಸಿಕ್ಕಾಗಲೆಲ್ಲಾ ಜನಪ್ರಿಯ ಯೋಜನೆಗಳನ್ನು ಘೋಷಿಸಿ ಜನಮನ ಗೆದ್ದರು. ಅಮ್ಮಾ ಬ್ರಾಂಡ್ ಜನಪ್ರಿಯತೆಯೇ ಇದಕ್ಕೆ ಸಾಕ್ಷಿ

ಆರೋಗ್ಯ ಸಮಸ್ಯೆ

ಆರೋಗ್ಯ ಸಮಸ್ಯೆ

ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್ ಹಾಗೂ ವೇದವಲ್ಲಿ ದಂಪತಿಯ ಪುತ್ರಿಯಾಗಿ ಜನಿಸಿದ ಕೋಮಲವಲ್ಲಿ ಮುಂದೆ ತಮಿಳುನಾಡಿನ ಜಯಲಲಿತಾ ಆಗಿ ಬೆಳೆದಿದ್ದು ದೊಡ್ಡ ಸಾಧನೆ. ಜಯಲಲಿತಾ ಅವರ ಸ್ಥೂಲ ಕಾಯ ಅವರಿಗೆ ಪರಂಪರಾಗತವಾಗಿ ಬಂದ ಬಳುವಳಿ. ಒಂದು ಕಾಲದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್ ನೃತ್ಯ ಶೈಲಿಯಲ್ಲಿ ನರ್ತಿಸುತ್ತಿದ್ದ ಜಯಲಲಿತಾ ಅವರು ಎಂಜಿ ರಾಮಚಂದ್ರನ್ ಅವರ ನಂತರ ಸಿಎಂ ಪಟ್ಟಕ್ಕೇರಿದ ಮೇಲೆ ಆರೋಗ್ಯ ಮೇಲೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ.

ಜಯಲಲಿತಾ ಅವರಿಗೆ ಏನೇನು ಕಾಯಿಲೆ

ಜಯಲಲಿತಾ ಅವರಿಗೆ ಏನೇನು ಕಾಯಿಲೆ

ಜಯಲಲಿತಾ ಅವರಿಗೆ ಏನೇನು ಕಾಯಿಲೆ ಇದೆ ಎಂಬುದರ ಬಗ್ಗೆ ಊಹಾಪೋಹ ಸುದ್ದಿಗಳು ಹಬ್ಬುತ್ತಲೇ ಇತ್ತು. ಅದೇ ರೀತಿ ಸಾವಿನ ವಿಷಯದಲ್ಲೂ ಊಹಾಪೋಹ ಸುದ್ದಿ ಹಬ್ಬಿತ್ತು. ಇಲ್ಲಿ ತನಕ ಎಐಎಡಿಎಂಕೆ ಕೂಡಾ ಕಾಯಿಲೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಿಡ್ನಿ ವೈಫಲ್ಯ, ಹೃದಯಾಘಾತ, ಕೋಮಾಕ್ಕೆ ಜಾರಿದರು, ಕೊನೆಯುಸಿರೆಳೆದರು ಎಂದು ಅಧಿಕೃತ ಪ್ರಕಟಣೆ ಸಿಗಬಹುದು ಅಷ್ಟೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tamil Nadu Chief Minister passed away at the Apollo hospital. She was 68. She had suffered a cardiac arrest on Sunday following which her condition remained extremely critical. She was in hospital for the over 70 days.
Please Wait while comments are loading...