1018 ಪ್ರದೇಶಗಳ ಇಂಗ್ಲೀಷ್ ಸ್ಪೆಲ್ಲಿಂಗ್ ಬದಲಿಸಿದ ಸರ್ಕಾರ
ಚೆನ್ನೈ, ಜೂನ್ 11: ಕೊರೊನಾವೈರಸ್ ಸೋಂಕು, ಲಾಕ್ಡೌನ್ ನಡುವೆ ಕಂದಾಯ ಇಲಾಖೆಗೆ ದೊಡ್ದ ಕೆಲಸ ಸಿಕ್ಕಿದೆ. ಸುಮಾರು 1018 ಪ್ರದೇಶಗಳ ಹೆಸರನ್ನು ಇಂಗ್ಲೀಷ್ ಸ್ಪೆಲ್ಲಿಂಗ್ ನಲ್ಲಿ ಬದಲಾಯಿಸಲಿ ಎಐಎಡಿಎಂಕೆ ಸರ್ಕಾರ ಮುಂದಾಗಿದೆ. ಚೆನ್ನೈ ಸೇರಿದಂತೆ ರಾಜ್ಯದ ಹಲವೆಡೆ ಪ್ರಮುಖ ಸ್ಥಳಗಳಿಗೆ ಸ್ಥಳೀಯರ ಉಚ್ಚಾರಣೆ ರೀತಿಯಲ್ಲಿ ತಮಿಳರಿಗೆ ಅರ್ಥವಾಗುವಂಥ ಸ್ಪೆಲ್ಲಿಂಗ್ ನೀಡಲಾಗಿದೆ.
ಚೆನ್ನೈನ Triplicane ಪ್ರದೇಶವನ್ನು ಇನ್ಮುಂದೆ Thiruvallikeni ಎಂದು ಇಂಗ್ಲೀಷ್ ನಲ್ಲಿ ಬರೆಯಬೇಕಾಗುತ್ತದೆ. ಮೈಲಾಪುರದ ಸ್ಪೆಲ್ಲಿಂಗ್ ಕೂಡಾ ಬದಲಾಗಿದೆ. Mylapore ಬದಲಿಗೆ Mayilaappoor ಎಂದು ಬರೆಯಬೇಕಾಗಿದೆ. ಇದೇ ರೀತಿ Egmore ಸ್ಟೇಟನ್ ಇನ್ಮುಂದೆ ಎಳಂಬೂರ್(Ezhumboor) ಸ್ಟೇಷನ್ ಆಗಲಿದೆ. ಮುಖ್ಯವಾಗಿ ಕೊಯಮತ್ತೂರು ಇಂಗ್ಲೀಷ್ ಸ್ಪೆಲ್ಲಿಂಗ್ ಬದಲಾಯಿಸಲಾಗುತ್ತಿದೆ. Coimbatore ಎನ್ನುವುದರ ಬದಲು Koyampuththoor ಎಂದು ಎಲ್ಲೆಡೆ ಬಳಸಬೇಕಾಗುತ್ತದೆ.

ತಮಿಳುನಾಡಿನ ಎಲ್ಲಾ 37 ಕಂದಾಯ ಜಿಲ್ಲೆಗಳಲ್ಲಿ ಈ ಹೆಸರು ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ತಮಿಳುನಾಡಿನ ಸಂಸ್ಕೃತಿ ಖಾತೆ ಸಚಿವ ಕೆ ಪಾಂಡ್ಯರಾಜನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
1018 ಪ್ರದೇಶಗಳ ಸ್ಪೆಲ್ಲಿಂಗ್ ಬದಲಾಯಿಸುವ ಕಾರ್ಯವನ್ನು ಕಂದಾಯ ಇಲಾಖೆ, ಮುನ್ಸಿಪಾಲ್ ಆಡಳಿತ ಇಲಾಖೆಗೆ ನೀಡಲಾಗಿದೆ. ಎಲ್ಲವನ್ನು ತಮಿಳಿನಲ್ಲಿ ಉಚ್ಚರಿಸುವಂತಾಗಬೇಕು ಎಂದು ಸರ್ಕಾರ ಆದೇಶದಲ್ಲಿ ಹೇಳಿದೆ.
ಇಂಗ್ಲೀಷ್ ಸ್ಪೆಲ್ಲಿಂಗ್ ಬದಲಾವಣೆಯಾಗುತ್ತಿರುವ ಪ್ರದೇಶಗಳ ಪಟ್ಟಿ
ಈಗ ಬಳಕೆಯಲ್ಲಿರುವ ಸ್ಪೆಲ್ಲಿಂಗ್- ಹೊಸ ಸ್ಪೆಲ್ಲಿಂಗ್
- Tondiyarpet - Thandaiyaarpettai
- Purasawalkam - Purasaivaakkam
- Vepery - Vepperi
- Perambur - Peramboor
- VOC Nagar - Va.OO.Si. Nagar
- Kodungaiyur - Kodungaiyoor
- Peravallur - Peravalloor
- Siruvallur - Siruvalloor
- Konnur - Konnoor
- Koyembedu - Koyambedu
- Egmore - Ezhumboor
- Chintadripet - Chintadaripettai
- Triplicane - Thiruvallikkeni
- Mylapore - Mayilaappoor
- Thiruvanmiyur - Thiruvanmiyoor
- Mambalam - Maambalam
- Saidapet - Saithaappettai
- Ekkattuthangal - Eekkattuththaangal
- Guindy Park - Gindi Poongaa
- Thiyagaraya Nagar - Thiyaagaraaya Nagar
- Pallikaranai - Pallikkaranai
- Okkiam Thorappakkam - Okkiyam Thuraipakkam
- Sholinganallur - Solinganalloor
- Uthandi - Uththandi
- Mugalivakkam - Mugalivaakkam
- Manappakkam - Manappaakkam
- Alandur - Aalandhoor
- Meenambakkam - Meenambaakkam
- Porur - Poroor
- Nanganallur - Nangainallur
- Adambakkam - Aadhambaakkam
- Ambattur - Ambaththoor
- Thiruvottriyur - Thiruvotriyoor
- Dharmapuri - Tharumapuri
- Madavaram - Maathavaram
- Dharapuram - Tharaapuram
- Coimbatore - Koyampuththoor
- Gudalur - Koodaloor
- Puducherry - Puthucherry
- Varagur - Varagoor
- Talaivasal - Thalaivasal
- Kandalur - Kaanthaloor
- Thiruverambur - Thiruverumboor
- Tuvagudi - Thuvakkudi
- Manaparai - Manapparai
- Chattrappatti - Chatthirappatti
- Pudur - Puthoor
- Uthamapalayam - Uthamapaalayam
- Vellore - Veeloor
- Pernambut - Peranaampattu
- Vatalagundu - Vaththalakundu
- Thiruvarur - Thiruvaroor
- Muthupet - Muthuppettai
- Tiruthuraipundi - Thirutthurai Poondi
- Kudavasal - Kudavaasal
- Nidamangalam - Needaamangalam
- Orathanadu - Oratthanaadu
- Kattur - Kaattoor












Click it and Unblock the Notifications