ಮೋದಿ ಸಂದರ್ಶಕ ಅಕ್ಷಯ್ ಪೌರತ್ವದ ಬಗ್ಗೆ ಸಿದ್ದಾರ್ಥ್ ಕುಹಕ
ಚೆನ್ನೈ, ಮೇ 05: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬೆಂಬಲಿಗರ ವಿರುದ್ಧ ನಿರಂತರವಾಗಿ ಟ್ವೀಟ್ ಮಾಡುತ್ತಾ ಬಂದಿರುವ ನಟ ಸಿದ್ದಾರ್ಥ್ ಅವರು ಮತ್ತೊಮ್ಮೆ ಮೋದಿ ಸಂದರ್ಶಕ ಅಕ್ಷಯ್ ಪೌರತ್ವದ ಬಗ್ಗೆ ಸಿದ್ದಾರ್ಥ್ ಕುಹಕವಾಡಿದ್ದಾರೆ.
ಪ್ರಧಾನಿ ಮೋದಿ ಅವರು ನಟ ಅಕ್ಷಯ್ ಕುಮಾರ್ ಅವರ ಜತೆ ರಾಜಕೀಯೇತರ ಮಾತುಕತೆ ನಡೆಸಿದ್ದರ ಬಗ್ಗೆ ನಟ ಸಿದ್ದಾರ್ಥ್ ಅವರು ಈ ಹಿಂದೆ ಕೂಡಾ ಟ್ವೀಟ್ ಮಾಡಿದ್ದರು. ಸಂದರ್ಶಕ ಅಕ್ಷಯ್ ಅವರ ಬಗ್ಗೆ ಪ್ರತಿಕ್ರಿಯಿಸಿ ಅಕ್ಷಯ್ ಕುಮಾರ್ ಅವರು ಓರ್ವ ಖಳನಾಯಕರಂತಾಗಿ ತುಂಬಾ ಕೆಳಮಟ್ಟದಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈಗ ಅಕ್ಷಯ್ ಅವರು ಭಾರತದ ಪೌರತ್ವ ಹೊಂದಿರದೆ ಕೆನಡಾದ ಪೌರತ್ವ ಪಡೆದಿರುವ ಅಕ್ಷಯ್, ಪ್ರಧಾನಿ ಮೋದಿ ಅವರನ್ನು ಸಂದರ್ಶಿಸಿದ್ದರ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದಾರೆ. ಅಕ್ಷಯ್ ಹೆಸರನ್ನು ಪ್ರಸ್ತಾಪಿಸದೆ ಟ್ವೀಟ್ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಳಸಿಕೊಂಡು, ಅವರ ಅಧಿಕೃತ ಖಾತೆಗೂ ಟ್ಯಾಗ್ ಮಾಡಿ ಸಿದ್ದಾರ್ಥ್ ಅವರು ಮಾಡಿರುವ ಟ್ವೀಟ್ ಗೆ ಭಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಸಿದ್ಧಾರ್ಥ್ ಅವರ ಟ್ವೀಟ್ಗೆ ಮೋದಿ ಹಾಗೂ ಅಕ್ಷಯ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.
ಅಕ್ಷಯ್ ಅವರು ಪೌರತ್ವ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಕೆನಡಾ ಪೌರತ್ವ ಹೊಂದಿರುವುದನ್ನು ಒಪ್ಪಿಕೊಂಡಿದ್ದರು. ಆದರೆ, ಭಾರತದಲ್ಲೆ ಹೆಚ್ಚು ತೆರಿಗೆ ಪಾವತಿದಾರನಾಗಿದ್ದೇನೆ ಎಂದಿದ್ದರು.
|
ಸಿದ್ದಾರ್ಥ್ ಟ್ವೀಟ್ ನಲ್ಲಿ ಏನಿದೆ?
"ಹಾಯ್ ಡೊನಾಲ್ಡ್ ಟ್ರಂಪ್, ನೀವು ಮತ್ತೊಂದು ಚುನಾವಣೆಗೆ ಸಿದ್ಧರಾಗುತ್ತಿದ್ದೀರಿ. ಚುನಾವಣೆ ಸಂದರ್ಭದಲ್ಲಿ ನಾನು ನಿಮ್ಮನ್ನು ಸಂದರ್ಶಿಸಿದರೆ ಹೇಗೆ? ನೀವು ಹೇಗೆ ಹಣ್ಣು ತಿನ್ನುತ್ತೀರಿ, ನಿಮ್ಮ ನಿದ್ರೆ-ಕೆಲಸದ ಸಮಯ, ವ್ಯಕ್ತಿತ್ವ ಇತ್ಯಾದಿ ಬಗ್ಗೆ ತಿಳಿಯುವ ಕುತೂಹಲ ಇದೆ. ಅಂದಹಾಗೆ ನಾನು ಭಾರತೀಯ ಪಾಸ್ ಪೋರ್ಟ್ ಹೊಂದಿದ್ದೇನೆ, ಏನಂತ ನೀವು ನನಗೆ ಡೈರೆಕ್ಟ್ ಮೆಸೇಜ್ ಮಾಡಿ....." ಎಂದು ಕೇಳಿಕೊಂಡಿದ್ದಾರೆ.
|
ನಿಮ್ಗೆ ಈಗ ಮಾಡಲು ಬೇರೆ ಕೆಲ್ಸ ಇಲ್ಲ ಅನ್ಸುತ್ತೆ
ನಿಮ್ಗೆ ಈಗ ಮಾಡಲು ಬೇರೆ ಕೆಲ್ಸ ಇಲ್ಲ ಅನ್ಸುತ್ತೆ, ನೀವು ಈ ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಿದ್ದೀರಿ. ಸಮಯವನ್ನು ಹೇಗೆ ವ್ಯರ್ಥ ಮಾಡುತ್ತೀರಿ, ಕಡಿಮೆ ಕೆಲ್ಸ ಮಾಡುವುದು ಹೇಗೆ ಎಂಬುದರ ಬಗ್ಗೆ ನಿಮ್ಮನ್ನು ಸಂದರ್ಶಿಸಬೇಕಿದೆ. ನನ್ನ ಬಳಿ ರೇಷನ್ ಕಾರ್ಡ್ ಇದೆ ಎಂದು ಸಾರ್ವಜನಿಕರೊಬ್ಬರು ಟ್ವೀಟ್ ಮಾಡಿದ್ದಾರೆ.
|
ಟ್ರಂಪ್ ಸಂದರ್ಶನ ಮಾಡಲು ಸಾಧ್ಯ
ಯುಎಸ್ ನಾಗರಿಕರಿಗಾಗಿ ಒಳ್ಳೆ ಕಾರ್ಯ ಮಾಡಿರಬೇಕು, ಯುಎಸ್ ಆರ್ಮಿಗೆ ಸೇವೆ ಸಲ್ಲಿಸಿರಬೇಕು, ನೈಸರ್ಗಿಕ ವಿಕೋಪಕ್ಕೆ ಯಥೇಚ್ಛವಾಗಿ ದಾನ ಮಾಡಿರಬೇಕು. ಹೆಚ್ಚು ತೆರಿಗೆ ಕಟ್ಟಿರಬೇಕು ಆಗ ನೀವು ಕೂಡಾ ಸಂದರ್ಶಕರಾಗಬಹುದು.
|
ಅವರಿಗೆ ಹಾವಾಡಿಸಲು ಬರುವುದಿಲ್ಲ
ಆದರೆ, ಅವರಿಗೆ ಹಾವಾಡಿಸಲು ಬರುವುದಿಲ್ಲ, ಚುನಾವಣಾ ಭಾಷಣ ಮಾಡುವುದಿಲ್ಲ, ವಿಶ್ವಕಪ್ ಫುಟ್ಬಾಲ್ ನಲ್ಲಿ ಇಟಲಿ ಆಡುವುದನ್ನು ನೋಡುತ್ತಾರೆ, ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ ಎಂದು ಟ್ರಂಪ್ ಬಗ್ಗೆ ಬರೆಯಲಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications