ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: 9 ಕಿರಾತಕರ ಬಂಧನ

ಚೆನ್ನೈ, ಜುಲೈ 07: ತಮಿಳುನಾಡಿನ ಕೊಯಂಬತ್ತೂರಿನ ಸಮೀಪ ಪೊಲ್ಲಾಚಿಯಲ್ಲಿ ಮತ್ತೆ ಅಪ್ರಾಪ್ತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದೆ.

ನೆರೆಯ ಮನೆಯ 16 ಹುಡುಗಿಯನ್ನು ಅಪಹರಿಸಿ ಸೆರೆಯಲ್ಲಿಟ್ಟು ಅಮ್ಮಾನುಲ್ಲಾ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಮಾನುಲ್ಲಾನ ಗೆಳೆಯರೂ ಸಹ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಬಾಲಕಿಯು ಅಮ್ಮಾನುಲ್ಲಾನ ಸೆರೆಯಿಂದ ತಪ್ಪಿಸಿಕೊಂಡು ಹೋಗಿ ಆಕೆಯ ಮಾಹಿತಿ ನೀಡಿದಾಗ ಘಟನೆ ಬಹಿರಂಗಗೊಂಡಿದೆ.

 Sexual harassment on minor girl: 9 arrested in Coimbatore

ಆ ಬಾಲಕಿಯು ಅಮಾನುಲ್ಲಾನಿಂದ ಕಳೆದ ಈ ಹಿಂದೆಯೂ ಹಲವು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಮೊಹಮ್ಮದ್ ಆಸಿಫ್, ಮೊಹಮ್ಮದ್ ರಫೀಕ್, ಸಯ್ಯದ್ ಇಬ್ರಾಹಿಂ, ಮೊಹಮ್ಮದ್ ಅಲಿ, ಅರುಣ್ ನೆಹರು, ಡೇವಿಡ್ ಅಲಿಯಾಸ್ ಸೆಂತಿ ಕುಮಾರ್, ಇರ್ಷಾದ್ ಬಾಷಾ, ಮೊಹಮ್ಮದ್ ಖಾನ್ ಮತ್ತು ಪ್ರಭು ಎಂಬುದವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಹತ್ತನೇ ತರಗತಿ ಅನುತ್ತೀರ್ಣವಾಗಿ, ತನ್ನ ಅಜ್ಜಿಯೊಂದಿಗೆ ಅಪ್ರಾಪ್ತ ಯುವತಿ ವಾಸವಿದ್ದಳು, ಆಕೆಯ ಮೇಲೆ ಪಕ್ಕದ ಮನೆಯವನೇ ಆಗಿದ್ದ ಅಮಾನುಲ್ಲಾ ಸತತ ಲೈಂಗಿಕ ದೌರ್ಜನ್ಯ ಎಸಗಿದ್ದನು.

ಕೆಲವು ದಿನಗಳ ಹಿಂದೆಯಷ್ಟೆ ಇದೇ ಪೊಲ್ಲಾಚಿಯಲ್ಲಿ ಭಾರಿ ಲೈಂಗಿಕ ಹಗರಣವೊಂದು ಬಹಿರಂಗವಾಗಿತ್ತು, ಕೆಲವು ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಪರಿಚಯ ಮಾಡಿಕೊಂಡು ಅವರ ನಗ್ನ ವಿಡಿಯೋ ತೆಗೆದು ಅಪ್‌ಲೋಡ್ ಮಾಡುವುದಾಗಿ ಬೆದರಿಸಿ ಅತ್ಯಾಚಾರ ನಡೆಸುತ್ತಿದ್ದ ಗುಂಪೊಂದನ್ನು ಕೆಲವು ದಿನಗಳ ಹಿಂದಷ್ಟೆ ಪೊಲೀಸರು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+