ಜಯಾ ಕೊನೆಯ ದಿನಗಳ ವಿಡಿಯೋ ಹಾಕ್ತೀನಿ ಎಂದ ಶಶಿಕಲಾ ಸಂಬಂಧಿ

Posted By:
Subscribe to Oneindia Kannada

ಚೆನ್ನೈ, ಏಪ್ರಿಲ್ 21: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆಯಾದ ಶಶಿಕಲಾ ನಟರಾಜನ್ (ವಿ.ಕೆ. ಶಶಿಕಲಾ) ಅವರೊಂದಿಗೆ ಜಯಲಲಿತಾ ಅವರು ತಮ್ಮ ಕೊನೆಯ ದಿನಗಳಲ್ಲಿ ಹೇಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ತಮ್ಮಲ್ಲಿ ಕೆಲವಾರು ವೀಡಿಯೋ ತುಣುಕುಗಳಿದ್ದು, ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಶಶಿಕಲಾ ಸೋದರ ಸಂಬಂಧಿ ಜಯನಾಥ್ ದಿವಾಕರನ್ ಎಂಬಾತ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾನೆ.

ಫೇಸ್ ಬುಕ್ ನಲ್ಲಿ ಈತ ನೀಡಿರುವ ಈ ಹೇಳಿಕೆಯು, ಶಶಿಕಲಾ ವಿರುದ್ಧ ಸಡ್ಡು ಹೊಡೆದಿರುವ ಮಾಜಿ ಮುಖ್ಯಮಂತ್ರಿ ಪನ್ನಿರ್ ಸೆಲ್ವಂ ಅವರ ಗುಂಪಿನ ಟೀಕೆಗಳಿಗೆ ಉತ್ತರ ಎಂಬಂತಿದೆ.[ಇಂಗ್ಲಿಷ್ ಕಲಿಯಬೇಕು ಅಂತಿದ್ದಾರೆ ಜೈಲಿನಲ್ಲಿರುವ ಶಶಿಕಲಾ]

Sasikala's relative threatens to release videos of Jayalalitha's last days

ಜಯಲಲಿತಾ ಅವರ ಸಾವಿನ ನಂತರ ನಡೆದಿದ್ದ ರಾಜಕೀಯ ವಿದ್ಯಮಾನಗಳಲ್ಲಿ ಪನ್ನೀರ್ ಸೆಲ್ವಂ ಬಣವು, ಶಶಿಕಲಾ ಹಾಗೂ ಅವರ ಆಪ್ತರು ಸೇರಿಕೊಂಡು ಜಯಲಲಿತಾ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿತ್ತು.

ಇದನ್ನು ತಮ್ಮ ಫೇಸ್ ಬುಕ್ ಹೇಳಿಕೆಯಲ್ಲಿ ಉಲ್ಲೇಖಿಸಿರುವ ದಿವಾಕರನ್, ''ಜಯಲಲಿತಾ ಹಾಗೂ ಶಶಿಕಲಾ ನಡುವಿನ ಅನ್ಯೋನ್ಯತೆ ಎಷ್ಟಿತ್ತು ಎಂಬುದನ್ನು ನಾನು ಬಲ್ಲೆ. ಅದಕ್ಕೆ ಸಾಕ್ಷಿಯೆಂಬಂತೆ ಜಯಲಲಿತಾ ಅವರ ಕೊನೆಯ ದಿನಗಳಲ್ಲಿ ಅವರ ಹಾಗೂ ಶಶಿಕಲಾ ನಡುವಿನ ಬಾಂಧವ್ಯವನ್ನು ಬಿಂಬಿಸುವ ವೀಡಿಯೋಗಳು ನನ್ನಲ್ಲಿವೆ. ಜಯಲಲಿತಾ ಅವರು ತಮ್ಮ ಕೊನೆಯ ದಿನಗಳನ್ನು ಕಳೆದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅವುಗಳನ್ನು ಚಿತ್ರೀಕರಿಸಲಾಗಿದೆ'' ಎಂದಿದ್ದಾರೆ.

''ನಾನು ಆ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದರೆ ಹೇಗಿರುತ್ತೆ? ಜಯಲಲಿತಾ ಅವರದ್ದು ಸಹಜ ಸಾವಲ್ಲ ಎಂದು ದನಿಯೆತ್ತಿದ್ದ ಪನ್ನೀರ್ ಸೆಲ್ವಂ ಬಣದ ಪಿಎಚ್ ಪಾಂಡಿಯನ್ ಹಾಗೂ ಮನೋಜ್ ಕೆ. ಪಾಂಡಿಯನ್ ಅವರ ಪರಿಸ್ಥಿತಿ ಹೇಗಿರುತ್ತೆ?'' ಎಂದು ದಿವಾಕರನ್ ಹೇಳಿಕೊಂಡಿರುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an explosive post on Facebook, Sasikala Natarajan's nephew Jeyanandh Dhivakaran has threatened to reveal clips from the last days of J Jayalalithaa in a Chennai hospital to show the kind of relationship Amma and Chinnamma (Jayalalithaa and Sasikala respectively as they are popularly known within the AIADMK) shared.
Please Wait while comments are loading...