ಅಕ್ರಮ ಜಮೀನು ಮಾರಾಟದ ವರದಿ ಮಾಡಿದ್ದಕ್ಕೆ ಪತ್ರಕರ್ತನ ಬರ್ಬರ ಹತ್ಯೆ

ಚೆನ್ನೈ, ನವೆಂಬರ್ 9: ಸರ್ಕಾರಿ ಭೂಮಿಯ ಅಕ್ರಮ ಮಾರಾಟ ಮತ್ತು ಗಾಂಜಾ ಮಾರಾಟದ ಕುರಿತು ವರದಿ ಮಾಡುತ್ತಿದ್ದ ತಮಿಳನ್ ಟಿವಿ ಸುದ್ದಿವಾಹಿನಿಯ 29 ವರ್ಷದ ವರದಿಗಾರನನ್ನು ಭಾನುವಾರ ರಾತ್ರಿ ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಕುಂದ್ರತ್ತೂರ್‌ನಲ್ಲಿ ನಡೆದಿದೆ.

ಚೆನ್ನೈನ ಹೊರವಲಯದಲ್ಲಿರುವ ಕುಂದ್ರತ್ತೂರ್ ಉಪ ನಗರವು ಕಾಂಚೀಪುರಂ ಜಿಲ್ಲೆಯಲ್ಲಿದೆ. ಪುತ್ತು ನೆಲ್ಲೋರ್ ಗ್ರಾಮದಲ್ಲಿ ವಾಸಿಸುತ್ತಿದ್ದ ವರದಿಗಾರ ಮೋಸೆಸ್, ಸ್ಥಳೀಯ ಸಮಸ್ಯೆಗಳ ಬಗ್ಗೆ ವರದಿಗಾರಿಕೆಯಲ್ಲಿ ಗಮನಹರಿಸಿದ್ದರು. ಈ ಸಂಬಂಧ ಮೋಸೆಸ್‌ಗೆ ಹಲವು ಬಾರಿ ಬೆದರಿಕೆಗಳು ಬಂದಿದ್ದವು.

ಭಾನುವಾರ ರಾತ್ರಿ ಮೋಸೆಸ್ ಅವರನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಕುಡುಗೋಲಿನಿಂದ ದಾಳಿ ನಡೆಸಿದ್ದಾರೆ. ಅವು ಸಾಯುವವರೆಗೂ ಕತ್ತಿಯಿಂದ ಕೊಚ್ಚಿದ್ದಾರೆ. ರಕ್ತಮಡುವಿನಲ್ಲಿ ಬಿದ್ದ ಮೋಸೆಸ್ ಮೃತಪಟ್ಟಿದ್ದಾರೆ. ಅಕ್ರಮ ಜಮೀನು ಮಾರಾಟ ಮತ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.

Reporter Of Tamilan TV Covering Illegal Land Sale And Ganja Hacked To Death

ತಮಿಳನ್ ಸುದ್ದಿವಾಹಿನಿಯಲ್ಲಿನ ಸ್ಪೆಷಲ್ ಫೋಕಸ್ ಕಾರ್ಯಕ್ರಮಕ್ಕಾಗಿ ಸ್ಥಳೀಯ ಭಾಗದ ಸಮಾಜವಿರೋಧಿ ಚಟುವಟಿಕೆಗಳ ಕುರಿತು ಅವರು ಸುದ್ದಿ ನೀಡುತ್ತಿದ್ದರು. ಕಳೆದ ವಾರ ಅವರು ಇಲ್ಲಿನ ಗಾಂಜಾ ಮಾರಾಟ ಗುಂಪಿನ ಬಗ್ಗೆ ವರದಿ ಮಾಡಿದ್ದರು. ಅದರ ಬಳಿಕ ಅವರಿಗೆ ಆ ಗುಂಪಿನಿಂದ ಬೆದರಿಕೆಗಳು ಬಂದಿದ್ದವು.

'ಭಾನುವಾರ ರಾತ್ರಿ ಮನೆಯಿಂದ ಹೊರಗೆ ಬರುತ್ತಿದ್ದ ಮೋಸೆಸ್ ಅವರನ್ನು ಅಡ್ಡಗಟ್ಟಿದ್ದ ಇಬ್ಬರು ದುಷ್ಕರ್ಮಿಗಳು ಅವರಿಂದ ಯಾವುದೇ ದಾರಿ ಕೇಳಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಮೋಸೆಸ್ ಅವರ ಕಿರುಚಾಟ ಕೇಳಿದಾಗ ಅವರ ತಂದೆ ಮನೆಯಿಂದ ಹೊರಬಂದು ಏನಾಯಿತೆಂದು ನೋಡಿದರು. ದುಷ್ಕರ್ಮಿಗಳು ಕತ್ತಿಯಿಂದ ಮೋಸೆಸ್ ಅವರನ್ನು ಕೊಚ್ಚುತ್ತಿದ್ದರು. ಅವರ ತಂದೆಯನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ' ಎಂದು ತಮಿಳನ್ ಟಿವಿಯ ಮುಖ್ಯ ವರದಿಗಾರ ಸಗಾಯ್ ರಾಜ್ ಹೇಳಿದ್ದಾರೆ.

ತಲೆ ಮತ್ತು ಕೈಗೆ ತೀವ್ರವಾಗಿ ಗಾಯಗೊಂಡಿದ್ದ ಮೋಸೆಸ್ ಅವರನ್ನು ಕ್ರೋಮೆಪೇಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+