ಮಳೆ ಆರ್ಭಟಕ್ಕೆ 15ಕ್ಕೂ ಅಧಿಕ ರೈಲು ಸಂಚಾರ ರದ್ದು
ಚೆನ್ನೈ, ನ.18: ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಸುಮಾರು 15ಕ್ಕೂ ಅಧಿಕ ಮಾರ್ಗಗಳ ರೈಲು ಸಂಚಾರವನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ.
ಚೆನ್ನೈ ಸೆಂಟ್ರಲ್ ನಿಂದ ಹೊರ ಹೊರಡಬೇಕಿದ್ದ ಎಲ್ಲಾ ರೈಲುಗಳನ್ನು ಮಂಗಳವಾರವೇ ರದ್ದುಪಡಿಸಲಾಗಿದೆ. ಚೆನ್ನೈ ಹಾಗೂ ಪುದುಚೇರಿ ಮಾರ್ಗ, ಆಂಧ್ರಪ್ರದೇಶಕ್ಕೆ ತೆರಳುವ ಸುಮಾರು 15 ರೈಲುಗಳು ರದ್ದಾಗಿವೆ ಎಂದು ದಕ್ಷಿಣ ರೈಲ್ವೆ ಪ್ರಕಟಿಸಿದೆ.
ರದ್ದಾಗಿರುವರೈಲ್ವೆ ಸಂಚಾರ ಮಾರ್ಗಗಳು:
* ತಿರುನಲ್ವೇಲಿ-ಹೌರಾ ಏಕ್ಸ್ ಪ್ರೆಸ್
* ತಿರುವನಂತಪುರಂ-ಗುವಾಹಟಿ ಎಕ್ಸ್ ಪ್ರೆಸ್
* ಎರ್ನಾಕುಲಂ ಪಾಟ್ನ ಎಕ್ಸ್ ಪ್ರೆಸ್.
* ಚೆನ್ನೈ ಸೆಂಟ್ರಲ್ -ನವದೆಹಲಿ ತಮಿಳುನಾಡು ಎಕ್ಸ್ ಪ್ರೆಸ್
* ಚೆನ್ನೈ ಸೆಂಟ್ರಲ್ -ನವದೆಹಲಿ ಗ್ರ್ಯಾಂಟ್ ಟ್ರಂಕ್ ಎಕ್ಸ್ ಪ್ರೆಸ್
* ಚೆನ್ನೈ ಸೆಂಟ್ರಲ್-ಹೌರಾ ಮೇಲ್.
* ಚೆನ್ನೈ ಸೆಂಟ್ರಲ್-ಹೈದರಾಬಾದ್ ಎಕ್ಸ್ ಪ್ರೆಸ್.
*ಚೆನ್ನೈ ಸೆಂಟ್ರಲ್ ಜೈಪುರ ಎಕ್ಸ್ ಪ್ರೆಸ್
* ಚೆನ್ನೈ ಎಗ್ಮೋರ್- ಕಾಚಿಗುಡ ಎಕ್ಸ್ ಪ್ರೆಸ್
* ಚೆನ್ನೈ ಎಗ್ಮೋರ್-ಕಾಕಿನಾಡ ಪೋರ್ಟ್ ಸಿರ್ಕಾರ್ ಎಕ್ಸ್ ಪ್ರೆಸ್.
* ಚೆನ್ನೈ ಸೆಂಟ್ರಲ್-ಲೋಕಮಾನ್ಯ ತಿಲಕ್ ಟರ್ಮಿನಸ್ ವೀಕ್ಲಿ ಎಕ್ಸ್ ಪ್ರೆಸ್
* ಚೆನ್ನೈ ಸೆಂಟ್ರಲ್ -ಹುಬ್ಳಿ ಎಕ್ಸ್ ಪ್ರೆಸ್
* ಚೆನ್ನೈ ಸೆಂಟ್ರಲ್ - ವಿಶಾಖಪಟ್ಟಣಂ ವೀಕ್ಲಿ ಎಕ್ಸ್ ಪ್ರೆಸ್
* ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ವೀಕ್ಲಿ ಎಕ್ಸ್ ಪ್ರೆಸ್
*ಪುದುಚೇರಿ- ನವದೆಹಲಿ ವೀಕ್ಲಿ ಎಕ್ಸ್ ಪ್ರೆಸ್
(ಪಿಟಿಐ)












Click it and Unblock the Notifications