ಸಮುದ್ರ ತೀರಕ್ಕೆ ಬಂದು ಬಿದ್ದ ನೂರಾರು ತಿಮಿಂಗಿಲ
ಚೆನ್ನೈ, ಜನವರಿ, 12: ತಮಿಳುನಾಡಿನ ಟುಟಿಕೊರಿನ್ ಪ್ರದೇಶದ ಸಮುದ್ರ ತೀರದಲ್ಲಿ ನೂರಾರು ತಿಮಿಂಗಿಲಗಳು ದಡಕ್ಕೆ ಬಂದು ಪ್ರಾಣ ಬಿಟ್ಟಿವೆ. ಸುಮಾರು 45 ತಿಮಿಂಗಿಲಗಳು ದಡದಲ್ಲೇ ಸಾವನ್ನಪ್ಪಿದ್ದರೆ 35 ಮೀನುಗಳನ್ನು ರಕ್ಷಣೆ ಮಾಡಲಾಗಿದೆ,
ಹಿಂಡು, ಹಿಂಡಾಗಿ ಕಡಲಿನಿಂದ ಬಂದ ತಿಮಿಂಗಿಲಗಳು ದಡದಲ್ಲಿ ಬಂದು ಸೇರಿದ್ದು, ಅವುಗಳನ್ನು ಮತ್ತೆ ಕಡಲಿಳಿಗೆ ಬಿಡಲು ಮೀನುಗಾರರು ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಅವುಗಳು ಮತ್ತೆ ದಡಕ್ಕೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಈ ಮೊದಲು ಮಾಧ್ಯಮದ ವರದಿಯಲ್ಲಿ ಹೇಳಲಾಗಿತ್ತು.[ತಮಿಳುನಾಡಿನ ದೇಗುಲಗಳಲ್ಲಿ ಹೊಸ ವರ್ಷದಿಂದ ವಸ್ತ್ರ ಸಂಹಿತೆ]

1973 ರ ನಂತರ ಈ ಬಗೆಯ ಪ್ರಕರಣ ನಡೆದಿದೆ. ದಡಕ್ಕೆ ಬಂದು ಸಾವಿಗೀಡಾದವು ಸಣ್ಣ ಜಾತಿಗೆ ಸೇರಿದ ತಿಮಿಂಗಿಲಗಳು. ಇಷ್ಟೊಂದು ಪ್ರಮಾಣದಲ್ಲಿ ಸಮುದ್ರದ ದಡಕ್ಕೆ ತಿಮಿಂಗಿಲಗಳು ಬಂದಿರುವುದು ಮೊದಲ ಬಾರಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಚೆನ್ನೈಗೆ ಮಹಾ ಪ್ರವಾಹ ಬಂದು ಹೋದ ಮೇಲೆ...]

ಸುದ್ದಿ ತಿಳಿದ ಅಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು ಮೀನುಗಳ ರಕ್ಷಣೆಗೆ ಧಾವಿಸಿದರು. ದಡಕ್ಕೆ ಬಂದು ಬಿದ್ದಿದ್ದರಲ್ಲಿ ಜೀವಂತವಾಗಿದ್ದ ಮೀನುಗಳನ್ನು ಪುನಃ ಸಮುದ್ರಕ್ಕೆ ಬಿಡುವ ಯತ್ನ ಮಾಡಲಾಯಿತು. ಯಾವ ಕಾರಣಕ್ಕೆ ಮೀನುಗಳು ಸಮುದ್ರ ದಂಡೆಗೆ ಬಂದು ಪ್ರಾಣ ಬಿಟ್ಟವು ಎಂಬುದು ತಿಳಿದಿಲ್ಲ.
WATCH: Around 50 Small Fin Whales beached in Tuticorin in Tamil Nadu since last evening, number of them deadhttps://t.co/lyC7aMDZxv
— ANI (@ANI_news) January 12, 2016 











Click it and Unblock the Notifications