ಜಯಾ ಸಾವು ನ್ಯಾಯಾಂಗ ತನಿಖೆಗೆ: ಓ ಪನ್ನೀರ್ ಸೆಲ್ವಂ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 08: ತಮಿಳರ ಪಾಲಿನ 'ಅಮ್ಮ' ಪುರಚ್ಚಿ ತಲೈವಿ ಜೆ ಜಯಲಲಿತಾ ಅವರ ಸಾವಿನ ನಿಗೂಢತೆ ಬಹಿರಂಗವಾಗಲಿ, ಜನತೆಗೆ ಸತ್ಯಾಂಶ ತಿಳಿಯಲಿ ಎಂಬ ದೃಷ್ಟಿಯಿಂದ ನಾನು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದೇನೆ ಎಂದು ತಮಿಳನಾಡಿನ ಹಂಗಾಮಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಘೋಷಿಸಿದ್ದಾರೆ.[ಸ್ವಾಮಿನಿಷ್ಠೆಯ ಪ್ರತೀಕ ಪನ್ನೀರ್ ಸೆಲ್ವಂ ವ್ಯಕ್ತಿಚಿತ್ರ]

ಚೆನ್ನೈನಲ್ಲಿ ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಪನ್ನೀರ್ ಅವರು, ' ನನ್ನ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆದುಕೊಂಡರು. ಜನತೆಯ ಬಯಸಿದರೆ ನಾನು ರಾಜೀನಾಮೆ ಹಿಂಪಡೆಯುತ್ತೇನೆ ಎಂದು ಎಐಎಡಿಎಂಕೆ ಅಧಿನಾಯಕಿ, ನಿಯೋಜಿತ ಸಿಎಂ ಶಶಿಕಲಾ ನಟರಾಜನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.[ರಾತ್ರೋರಾತ್ರಿ ಪನ್ನೀರ್ ಮಾಡಿದ್ದು ಧ್ಯಾನವೋ, ಬಂಡಾಯದ ತೀರ್ಮಾನವೋ?]

OPS to set up inquiry commission to probe into Jayalalithaa's death

ದೀಪಾ ಬಗ್ಗೆ: ದೀಪಾ ಜಯಕುಮಾರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ನಿರ್ಧಾರಕ್ಕೆ ಅವರು ಬೆಂಬಲ ನೀಡುತ್ತಾರೆ ಎಂಬ ಭರವಸೆ ಇದೆ ಎಂದರು.[ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?]

* ಪಕ್ಷದ ಶಾಸಕರಿಗೆ ನಾನು ಕರೆ ನೀಡುವುದೇನೆಂದರೆ, ನಿಮ್ಮ ನಿಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಆಶಯಕ್ಕೆ ಬದ್ಧರಾಗಿರಿ
* ಬಹುಮತ ಸಾಬೀತು ಪಡಿಸುವುದು ದೊಡ್ಡ ವಿಷಯವಲ್ಲ. ಜನರ ವಿಶ್ವಾಸ ಮುಖ್ಯ
* ಅಪೊಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾಗ, ನನಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡದಿರುವುದು ಇನ್ನೂ ಕಾಡುತ್ತಿದೆ.

ಈ ನಡುವೆ ಕಳೆದ ರಾತ್ರಿ ದಿಢೀರ್ ಆಗಿ ಶಾಸಕಾಂಗ ಸಭೆ ಕರೆದ ನಿಯೋಜಿತ ಸಿಎಂ ಶಶಿಕಲಾ ಅವರು ಓ ಪನ್ನೀರ್ ಸೆಲ್ವಂರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಲಾಯಿತು. ಅವರ ಸ್ಥಾನಕ್ಕೆ ದಿಂಡಿಗಲ್ ಶ್ರೀನಿವಾಸನ್ ಅವರನ್ನು ನೇಮಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
TN interim CM Panneerselvam says a judicial inquiry will be instituted into Jayalalithaa's death.
Please Wait while comments are loading...