ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಜತೆ ಕೈಜೋಡಿಸಲಿದೆಯೇ ಎಐಎಡಿಎಂಕೆ?: ಸುಳಿವು ನೀಡಿದ ಉಪಮುಖ್ಯಮಂತ್ರಿ

|
Google Oneindia Kannada News

ಚೆನ್ನೈ, ಫೆಬ್ರವರಿ 14: ತಮಿಳುನಾಡಿನಲ್ಲಿ ಮಹಾಮೈತ್ರಿಕೂಟ ಮುಂಬರುವ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆಯುವ ಸೂಚನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ, ಬಿಜೆಪಿಯೊಂದಿಗೆ ಚುನಾವಣಾಪೂರ್ವ ಮೈತ್ರಿಗೆ ಮುಂದಾಗಿದೆ.

ಬಿಜೆಪಿಯೊಂದಿಗೆ ಪಕ್ಷವು ಚುನಾವಣೆಗೂ ಮುನ್ನವೇ ಮೈತ್ರಿ ಮಾಡಿಕೊಳ್ಳುವ ಬಗ್ಗೆ ತಮಿಳುನಾಡು ಉಪಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಸುಳಿವು ನೀಡಿದ್ದಾರೆ.

'ಮೋದಿ ಏನೂ ವಾಜಪೇಯಿ ಅಲ್ಲ, ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ' 'ಮೋದಿ ಏನೂ ವಾಜಪೇಯಿ ಅಲ್ಲ, ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ'

ವಿಧಾನಸಭೆ ಕಲಾಪದ ವೇಳೆ ಕಾಂಗ್ರೆಸ್ ಮತ್ತು ಎಐಎಡಿಎಂಕೆ ನಡುವೆ ಕಾವೇರಿದ ಮಾತಿನ ಚಕಮಕಿ ವೇಳೆ ಪನ್ನೀರ್ ಸೆಲ್ವಂ, 'ಕಾಂಗ್ರೆಸ್-ಡಿಎಂಕೆ ಮೈತ್ರಿ ನಡೆದು ಅದರ ಬಗ್ಗೆ ಮಾತನಾಡಲಾಗುತ್ತಿದೆ. ಎಐಎಡಿಎಂಕೆ ಮುಂಬರುವ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವ ಸಾಧ್ಯತೆಯ ಯೋಚನೆಗಳಿಲ್ಲ' ಎಂದು ತಿಳಿಸಿದ್ದಾರೆ.

o pannerselvam hints bjp aiadmk alliance in lok sabha elections 2019

ಕಲಾಪದ ವೇಳೆ ಕಾಂಗ್ರೆಸ್ ಮುಖಂಡ ಕೆ.ಆರ್. ರಾಮಸ್ವಾಮಿ ಅವರು, ಎಐಎಡಿಎಂಕೆ ಸರ್ಕಾರ ಮೈತ್ರಿ ಮಾಡಿಕೊಳ್ಳದೆ ಚುನಾವಣೆ ಎದುರಿಸಲು ಸಿದ್ಧವಿದೆಯೇ ಎಂದು ಪ್ರಶ್ನಿಸಿದರು. ಆಗ, ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಪನ್ನೀರ್‌ಸೆಲ್ವಂ, 'ಇಲ್ಲಿ ಎಲ್ಲ ಪಕ್ಷಗಳೂ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧವಿದ್ದರೆ ಎಐಎಡಿಎಂಕೆ ಕೂಡ ಏಕಾಂಗಿಯಾಗಿ ಚುನಾವನೆ ಎದುರಿಸಲಿದೆ' ಎಂದರು.

'ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ನಂತರವಷ್ಟೇ ಮೈತ್ರಿ ತೀರ್ಮಾನ' 'ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ನಂತರವಷ್ಟೇ ಮೈತ್ರಿ ತೀರ್ಮಾನ'

ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರಿಗೆ ಆಪ್ತರಾಗಿರುವ ಸಚಿವರಾದ ಎಸ್‌ಪಿ ವೇಲುಮಣಿ ಮತ್ತು ಪಿ ತಂಗಮಣಿ ಅವರು ಮೈತ್ರಿ ಸಂಬಂಧ ಬಿಜೆಪಿಯ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

English summary
Tamil Nadu Deputy Cheif Minister O Panneerselvam hints the pre poll alliance of AIADMK with BJP in Lok Sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X