ಎಐಎಡಿಎಂಕೆ ವಿಲೀನಕ್ಕೆ ಇನ್ನೂ ಸಿಕ್ಕಿಲ್ಲ ಅಧಿಕೃತ ಮುದ್ರೆ, ಮುಂದುವರಿದ ಗೊಂದಲ

By: ಅನುಶಾ ರವಿ
Subscribe to Oneindia Kannada

ಚೆನ್ನೈ, ಆಗಸ್ಟ್ 18: ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ಬಣಗಳ ವಿಲೀನದಲ್ಲಿ ಇನ್ನೂ ಗೊಂದಲ ಮುಂದುವರಿದಿದೆ.

ಇವತ್ತು ಎರಡೂ ಬಣಗಳ ವಿಲೀನಕ್ಕೆ ಸಂಬಂಧಿಸಿದಂತೆ ಅಧಿಕೃತ ತೀರ್ಮಾನ ಹೊರ ಬೀಳಲಿದೆ ಎನ್ನಲಾಗಿತ್ತು. ಆದರೆ ಇನ್ನೂ ತೀರ್ಮಾನವನ್ನು ಬಹಿರಂಗಗೊಳಿಸಿಲ್ಲ.

No announcement on AIADMK merger, EPS-OPS stalemate continues

ಪನ್ನೀರ್ ಸೆಲ್ವಂ ಬಣದ ನಾಯಕರು 'ಇನ್ನೂ ಚರ್ಚೆ ನಡೆಯುತ್ತಿದೆ' ಎಂದು ಮಾಧ್ಯಮಗಳಿಗೆ ತಿಳಿಸಿದ್ದು ವಿಲೀನದ ಘೋಷಣೆಯ ನಿರೀಕ್ಷೆಯಲ್ಲಿದ್ದ ಎಐಎಡಿಎಂಕೆ ಅಭಿಮಾನಿಗಳನ್ನು ನಿರಾಸೆಗೆ ತಳ್ಳಿದೆ. ಇಂದು ಮಳೆಯ ನಡುವೆಯೂ ಜಯಲಲಿತಾ ಸಮಾಧಿ ಸುತ್ತ ಮತ್ತು ಎಐಎಡಿಎಂಕೆಯ ಕೇಂದ್ರ ಕಚೇರಿ ಸುತ್ತ ಭಾರಿ ಜನ ಸೇರಿದ್ದರು. ಆದರೆ ವಿಲೀನ ಪ್ರಕ್ರಿಯೆ ಇಂದು ಘೋಷಣೆಯಾಗಲ್ಲ ಎಂದು ತಿಳಿಯುತ್ತಿದ್ದಂತೆ ನಿರಾಸೆಯಿಂದ ತೆರಳಿದರು.

ಮೂಲಗಳ ಪ್ರಕಾರ ಪನ್ನೀರ್ ಸೆಲ್ವಂ ಬಣದ ಹಿರಿಯ ನಾಯಕರು ಸಂಪುಟಕ್ಕೆ ಸೇರ ಬಯಸಿದ್ದಾರೆ. ಆದರೆ ಇದಕ್ಕೆ ಎಡಪ್ಪಾಡಿ ಪಳನಿಸ್ವಾಮಿ ಬಣ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ವಿಲೀನ ಪ್ರಕ್ರಿಯೆ ಮುಂದಕ್ಕೆ ಹೋಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The merger between Edappadi Palanisamy and O Panneerselvam camps of the AIADMK now hangs in the air with uncertainty looming large. No consensus has been arrived at to take the merger forward delaying the announcement. Panneerselvam camp told the media that it was still holding discussions.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ