ಮತ್ತೆ ಜೈಲು ಸೇರಿದ ಗಣಿ ಕುಳ ಶೇಖರ್ ರೆಡ್ಡಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಮಾರ್ಚ್ 21: ಜಾರಿ ನಿರ್ದೇಶನಾಲಯ ಗಣಿ ಕುಳ ಶೇಖರ್ ರೆಡ್ಡಿಯನ್ನು ಬಂಧಿಸಿದೆ. ಅವರನ್ನು ಮಾರ್ಚ್ 28ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕೆಲವು ದಿನಗಳ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿಗೆ ಜಾಮೀನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಹಿಂದೆ ಅಪನಗದೀಕರಣದ ನಂತರ ತಮಿಳುನಾಡು ಮೂಲದ ಉದ್ಯಮಿ ಶೇಖರ್ ರೆಡ್ಡಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 127 ಕೆಜಿ ಚಿನ್ನ, 170 ಕೋಟಿಗೂ ಹೆಚ್ಚು ನಗದು ಹಣ ಹಾಗೂ 34 ಕೋಟಿ 2000 ಮುಖಬೆಲೆಯ ಹೊಸ ನೋಟುಗಳು ಪತ್ತೆಯಾಗಿತ್ತು.[ಹೈದರಾಬಾದ್: 1.35 ಕೋಟಿ ರು ಹಳೆ ನೋಟು ವಶ, ಮೂವರ ಬಂಧನ]

Mining baron Sekhar Reddy arrested, remainded in judicial custody

ಪ್ರಕರಣದ ಪ್ರಾಥಮಿಕ ತನಿಖೆಯನ್ನು ಸಿಬಿಐ ನಡೆಸಿದ್ದು ಇದೀಗ ಹೆಚ್ಚಿನ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸಲಿದೆ.[ತೆರಿಗೆ ಸಂಗ್ರಹ: ವಾರ್ಷಿಕ ಗುರಿ ಮುಟ್ಟಿದ ಕರ್ನಾಟಕ ತೆರಿಗೆ ಇಲಾಖೆ]

ಜಾರಿ ನಿರ್ದೇಶನಾಲಯ ಶೇಖರ್ ರೆಡ್ಡಿ ಹಾಗೂ ಆತನ ಸಹ ಉದ್ಯಮಿ ಶ್ರೀನಿವಾಸುಲು ವಿರುದ್ಧ ಲೇವಾದೇವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. 34 ಕೋಟಿಗೂ ಹೆಚ್ಚಿನ ಹಣ ಹೊಸ ನೋಟುಗಳ ರೂಪದಲ್ಲಿ ಶೇಖರ್ ರೆಡ್ಡಿ ಕೈ ಸೇರಿದ್ದು ಹೇಗೆ ಎಂಬ ವಿಚಾರದಲ್ಲಿ ಜಾರಿ ನಿರ್ದೇಶನಾಯ ತನಿಖೆ ನಡೆಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Enforcement Directorate has arrested mining baron Sekhar Reddy. He has been sent remanded in judiciary custody till March 28. Reddy was arrested just a few days after a CBI court had granted him bail.
Please Wait while comments are loading...