ತಮಿಳುನಾಡಿನಲ್ಲಿಂದು 2710 ಕೇಸ್, ಮಧುರೈ ಸಂಪೂರ್ಣ ಲಾಕ್‌ಡೌನ್
ಮಧುರೈ, ಜೂನ್ 22: ತಮಿಳುನಾಡಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಮತ್ತಷ್ಟು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವ ಸಾಧ್ಯತೆ ಇದೆ.
Recommended Video
ಇಂದು ಮಧುರೈ ಜಿಲ್ಲೆಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಿ ಎಂದು ಸರ್ಕಾರ ಆದೇಶ ಮಾಡಿದೆ. ಜೂನ್ 24 ರಿಂದ ಜೂನ್ 30ರವರೆಗೂ ಮಧುರೈ ಜಿಲ್ಲೆ ಕಂಪ್ಲೀಟ್ ಲಾಕ್‌ಡೌನ್. ಅಗತ್ಯ ಸೇವೆಗಳಿಗೆ ಮಾತ್ರ ಜಿಲ್ಲೆಯಲ್ಲಿ ಅವಕಾಶ ಇರುತ್ತದೆ ಎಂದು ಜಿಲ್ಲಾಡಳಿತ ಸೋಮವಾರ ಮಾರ್ಗಸೂಚಿ ಹೊರಡಿಸಿದೆ.
ಮಧುರೈ ಕಾರ್ಪೊರೇಶನ್ ವ್ಯಾಪ್ತಿಯ, ಪಟ್ಟಣ ಪಂಚಾಯತ್ ಮತ್ತು ಮಧುರೈ ಪೂರ್ವ, ಮಧುರೈ ಪಶ್ಚಿಮ ಮತ್ತು ತಿರುಪಾರಂಕುಂಡ್ರಂನ ಗ್ರಾಮೀಣ ಬ್ಲಾಕ್‌ಗಳ ವ್ಯಾಪ್ತಿ ಪ್ರದೇಶವನ್ನು ಲಾಕ್‌ಡೌನ್ ಮಾಡಲು ತೀರ್ಮಾನಿಸಿದೆ.

-ಆಸ್ಪತ್ರೆ, ಮೆಡಿಕಲ್, ಆಂಬುಲೆನ್ಸ್ ಹಾಗೂ ಇನ್ನಿತರ ವೈದ್ಯಕೀಯ ವಾಹನಗಳಿಗೆ ಮಾತ್ರ ಅವಕಾಶ
-ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ಇಲ್ಲ. (ವೈದ್ಯಕೀಯ ತುರ್ತು ಸೇವೆ ಇದ್ದರೆ ಮಾತ್ರ ಅವಕಾಶ)
-ಸರ್ಕಾರಿ ಕಚೇರಿಗಳು ಶೇಕಡಾ 33 ರಷ್ಟು ಮಾತ್ರ ಕಾರ್ಯನಿರ್ವಹಿಸಬೇಕು
-ಕಂಟೈನ್‌ಮೆಂಟ್ ಜೋನ್ ಪ್ರದೇಶ ಜನರು ಕಚೇರಿಗಳಿಗೆ ತೆರಳುವಂತಿಲ್ಲ.
-ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳು ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ತಮಿಳುನಾಡಿನಲ್ಲಿ ಇಂದು 2710 ಜನರಿಗೆ ಕೊರೊನಾ ವೈರಸ್ ತಗುಲಿದೆ. 37 ಜನರು ಸಾವು ಸಂಭವಿಸಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 62,087ಕ್ಕೆ ಏರಿಕೆಯಾಗಿದೆ. ಇದುವರೆಗೂ 794 ಜನರು ಮೃತಪಟ್ಟಿದ್ದಾರೆ.
ಈಗಾಗಲೇ ಚೆನ್ನೈ, ತಿರುವಳ್ಳೂರು, ಕಾಂಚಿಪುರಂ ಮತ್ತು ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.












Click it and Unblock the Notifications