ತಮಿಳುನಾಡಿನ ಜನಪ್ರಿಯ ರಾಜಕಾರಣಿ ವೈಕೋಗೆ ಮಲೇಷ್ಯಾದಲ್ಲಿ ಅವಮಾನ
ಕೌಲಾಲಂಪುರ್, ಜೂನ್ 9: ತಮಿಳುನಾಡಿನ ಜನಪ್ರಿಯ ರಾಜಕಾರಣಿ, ಭಾರತೀಯ ಸಂಸತ್ತಿನ ಹುಲಿ ವೈಕೋಗೆ ಕೌಲಾಲಂಪುರ್ ವಿಮಾನ ನಿಲ್ದಾಣದಲ್ಲಿ ಅವಮಾನಿಸಲಾಗಿದೆ. ಮಲೇಷ್ಯಾ ಪ್ರವೇಶಿಸದಂತೆ ತಡೆದು ಅವರನ್ನು ವಿಮಾನ ನಿಲ್ದಾಣದಲ್ಲೇ ವಿಚಾರಣೆ ನಡೆಸಲಾಗಿದೆ.
'ಮರುಮಲರ್ಚಿ ದ್ರಾವಿಡ್ ಮುನ್ನೇತ್ರ ಕಳಗಂ' (ಎಂಡಿಎಂಕೆ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ವೈಕೋರನ್ನು ಶ್ರೀಲಂಕಾದ ಬಂಡುಕೋರ ಸಂಘಟನೆ ಎಲ್.ಟಿ.ಟಿ.ಇ ಜತೆಗಿನ ಸಂಬಂಧದ ಹಿನ್ನಲೆಯಲ್ಲಿ ವಿಚಾರಣೆ ನಡೆಸಲಾಗಿದೆ.

ಕೌಲಾಲಂಪುರ್ ವಿಮಾನ ನಿಲ್ದಾಣದಲ್ಲೇ ಗಂಟೆಗಳ ಕಾಲ ವೈಕೋರನ್ನು ಭದ್ರತಾ ಸಿಬ್ಬಂದಿಗಳು ವಿಚಾರಣೆ ನಡೆಸಿದ್ದಾರೆ.












Click it and Unblock the Notifications