ಜಿಎಸ್ ಟಿ ಜಾರಿಯಾದ್ರೆ ಚಿತ್ರರಂಗಕ್ಕೆ ವಿದಾಯ: ಕಮಲ್ ಹಾಸನ್
ಚೆನ್ನೈ, ಜೂನ್ 02 : ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆಗೆ ನಟ ಕಮಲ್ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಎಸ್ ಟಿ ಜಾರಿಗೆ ಸಂಬಂಧಿಸಿದಂತೆ ಶುಕ್ರವಾರ ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿನಿಮಾ ಟಿಕೆಟ್ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲಾಗಿದೆ. ಹಾಲಿವುಡ್ ನವರು ಒಪ್ಪಿದರು ನಾವು ಒಪ್ಪಲ್ಲ. ಈ ತೆರಿಗೆಯನ್ನ ಕಡಿಮೆ ಮಾಡಿ ಅಥವಾ ತೆಗೆದುಹಾಕಿ. ಒಂದು ವೇಳೆ ಜಿಎಸ್ ಟಿ ಜಾರಿಯಾದರೆ ಚಿತ್ರರಂಗ ಬಿಡುತ್ತೇನೆ'' ಎಂದು ನಟ ಕಮಲ್ ಹಾಸನ್ ಹೇಳಿದರು.[ತಮಿಳಿನಿ ಬಿಗ್ ಬಾಸ್ ನಡೆಸಿಕೊಡಲು ರೆಡಿ ಎಂದ ಕಮಲ್ ಹಾಸನ್]

ಸಿನಿಮಾ ಟಿಕೆಟ್ ಮೇಲೆ ವಿಧಿಸಿರುವ ಶೇ 28ರಷ್ಟು ತೆರಿಗೆಯನ್ನು ಶೇ 12 ರಿಂದ 15ಕ್ಕೆ ಇಳಿಸಬೇಕು ಎಂದು ಕಮಲ್ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಒತ್ತಾಯಿಸಿದರು.
ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜುಲೈ 1 ರಿಂದ ಜಾರಿಯಾಗಲಿದೆ.












Click it and Unblock the Notifications