ತಮಿಳಿನಿ ಬಿಗ್ ಬಾಸ್ ನಡೆಸಿಕೊಡಲು ರೆಡಿ ಎಂದ ಕಮಲ್ ಹಾಸನ್
ಚೆನ್ನೈ, ಏಪ್ರಿಲ್ 24 : ತಮಿಳು ಆವೃತ್ತಿಯ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡಲು ನಟ ಕಮಲ್ ಹಾಸನ್ ಉತ್ಸುಕರಾಗಿದ್ದಾರೆ.
ಈ ಬಗ್ಗೆ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಮತ್ತೊಂದೆಡೆ ಮಾಹಾಭಾರತ ವಿವಾದ ಕಮಲ್ ಅವರನ್ನು ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಇದೀಗ ಬಿಗ್ ಬಾಸ್ ನಡೆಸಿಕೊಡಲು ಸಿದ್ಧರಾಗಿರುವ ಕಮಲ್ ಬಗ್ಗೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

'ಈವರೆಗೆ ನಾನು ಕಲಾವಿದನಾಗಿ ಜನರನ್ನು ರಂಜಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ಟಿ.ವಿ. ರಿಯಾಲಿಟಿ ಷೋ ನಡೆಸಿಕೊಟ್ಟಿಲ್ಲ. ರಿಯಾಲಿಟಿ ಶೋದ ಅನುಭವ ಹೇಗಿರುತ್ತದೆ ಎಂದು ತಿಳಿಯಲು ಷೋ ಒಪ್ಪಿಕೊಂಡಿದ್ದೇನೆ' ಎಂದು ಕಮಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಸಲ್ಮಾನ್ ಖಾನ್ ಬಿಗ್ ಬಾಸ್ ಶೋವನ್ನು ಚೆನ್ನಾಗಿ ನಡೆಸಿಕೊಡುತ್ತಿದ್ದಾರೆ. ಶೋನಲ್ಲಿ ಸ್ಪರ್ಧಾಳುಗಳನ್ನು ಅವರು ಬೆಸೆಯುವ ರೀತಿ ಅದ್ಭುತ'ಎಂದು 'ದಿ ಕ್ವಿಂಟ್' ಸುದ್ದಿವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications