ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿವೃದ್ಧಿಯ ಪುಸ್ತಕ ಅರ್ಧ ಬರೆದು ಹೊರಟ ಅಬ್ದುಲ್ ಕಲಾಂ

|
Google Oneindia Kannada News

ಚೆನ್ನೈ, ಜು. 28: ತಮಿಳುನಾಡಿನ ಅಭಿವೃದ್ಧಿ ಕನಸನ್ನು ಹೊತ್ತಿದ್ದ ಅಬ್ದುಲ್ ಕಲಾಂ ಆ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದರು. ಈಗಾಗಲೇ ಏಳು ಚಾಪ್ಟರ್ ಗಳನ್ನು ಪೂರ್ಣ ಮಾಡಿದ್ದ ಕಲಾಂ ಪುಸ್ತಕದ ಮುಂದಿನ ಭಾಗದ ಚಿಂತನೆಯಲ್ಲಿದ್ದರು.

ತಮ್ಮ ಕನಸಿನ ವಿಷನ್ 2020 ಆಧಾರದಲ್ಲಿಯೇ ಪುಸ್ತಕವನ್ನು ಬರೆಯುತ್ತಿದ್ದರು. ಭಾರತದ ಅಭಿವೃದ್ಧಿಯನ್ನು ಇದರ ಒಳಗೆ ಅಳವಡಿಸಿಕೊಂಡಿದ್ದರು. ಆದರೆ ಪುಸ್ತಕ ಅಂತ್ಯ ಮಾಡುವುದರೊಳಗೆ ತಮ್ಮ ದೇಹ ತ್ಯಾಗ ಮಾಡಿದರು.[ಕನಸು-ನನಸು, ಗುರಿಗಳ ಪಯಣದಲ್ಲಿ ಬತ್ತದ ಸ್ಪೂರ್ತಿ ಕಲಾಂ]

kalam

'ಎನಾಥಿಲ್ ನಲಮಿರುಂಥಲ್ ಕನವು ತಮಿಲಗಮ್ ಉರುವಗಮ್, ಪುಯ್ಯಾಲಿ ಥಂಡಿನಲ್ ಥೆಂಡರಲ್' ಎಂಬ ಹೆಸರಿನಲ್ಲಿ ಪುಸ್ತಕ ಬರೆಯುತ್ತಿದ್ದರು ಎಂದು ಪುಸ್ತಕದ ಸಹ ಲೇಖಕ, ಕಲಾಂ ಅವರ ವೈಜ್ಞಾನಿಕ ಸಲಹೆಗಾರ ವಿ ಪೊನ್ನರಾಜ್ ತಿಳಿಸಿದ್ದಾರೆ.[ಅಗಲಿದ ಮಹಾನ್ ಚೇತನಕ್ಕೆ ದೇಶಾದ್ಯಂತ ಅಶ್ರುತರ್ಪಣ]

ಜುಲೈ 23 ರಂದು ಕಲಾಂ ಪುಸ್ತಕದ ಬಗ್ಗೆ ನನ್ನೊಂದಿಗೆ ಕೊನೆಯದಾಗಿ ಮಾತನಾಡಿದ್ದರು. ತಮಿಳುನಾಡಿನ ಸರ್ವತೋಮುಖ ಅಭಿವೃದ್ಧಿಯನ್ನು ಮಾನದಂಡವಾಗಿರಿಸಿಕೊಂಡು ಪುಸ್ತಕ ಸಿದ್ಧ ಮಾಡಲಾಗುತ್ತಿತ್ತು ಎಂದು ತಮಿಳು ವಾಹಿನಿವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಪೊನ್ನರಾಜ್ ತಿಳಿಸಿದ್ದಾರೆ.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

English summary
Former President A P J Abdul Kalam completed seven chapters of a book in Tamil with a vision for the growth of Tamil Nadu and almost till his end he had discussed about the initiative, his aide said tonight. Similar to Kalam's Vision 2020, which aimed at transforming India into a developed nation, he was in the process of writing a similar book for Tamil Nadu in particular.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X