ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬಾಲಿ ಬಿಡುಗಡೆಗೆ ಎದುರಾಗಿದ್ದ ವಿಘ್ನ ದೂರ

By Madhusoodhan
|
Google Oneindia Kannada News

ಚೆನ್ನೈ, ಜುಲೈ, 21: 'ಕಬಾಲಿ' ಬಿಡುಗಡೆಗೆ ಎದುರಾಗಿದ್ದ ಆತಂಕ ದೂರವಾಗಿದೆ. ಕಬಾಲಿ ಚಿತ್ರ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈ ಕೋರ್ಟ್ ಗುರುವಾರ ಹೇಳಿದ್ದು ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

'ಲಿಂಗಾ' ಚಿತ್ರದ ವಿತರಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ ಎಂ ಸುಂದರೇಶ್, "ಲಿಂಗಾ ಬೇರೆ , ಕಬಾಲಿ ಬೇರೆ, ಒಂದಕ್ಕೊಂದು ಸಂಬಂಧವೇ ಇಲ್ಲ. ಲಿಂಗಾ ಚಿತ್ರಕ್ಕೆ ಸಂಬಂಧಿಸಿ ನಷ್ಟವಾಗಿದೆ. ಅದನ್ನು ರಜನಿಕಾಂತ್ ಭರಿಸಿಕೊಡುತ್ತಾರೆ ಎಂದು ಹೇಳಿದ್ದರು ಎಂಬ ಆಧಾರದಲ್ಲಿ ತಡೆ ನೀಡಲು ಸಾಧ್ಯವಿಲ್ಲ' ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದ್ದಾರೆ.[ದಾಖಲೆಯ ಕಬಾಲಿ ಬಿಡುಗಡೆಗೆ 'ಲಿಂಗಾ' ಕಂಟಕ]

kabali

ಲಿಂಗಾ ಚಿತ್ರವನ್ನು 2014 ರಲ್ಲಿ ನಿರ್ಮಿಸಿದ್ದ ಶಿವಾ ಫಿಲ್ಮ್ಸ್ ಗೆ ನಷ್ಟ ಭರಿಸುತ್ತೇನೆ ಎಂದು ರಜನಿಕಾಂತ್ ಹೇಳಿದ್ದರು. 89 ಲಕ್ಷ ರು. ನೀಡುತ್ತೇನೆ ಎಂದು ಹೇಳಿದ್ದರು.

ಇದೇ ಆಧಾರ ಮುಂದಿಟ್ಟುಕೊಂಡು ಹಣ ಪಾವತಿಯಾಗುವವರೆಗೆ ಕಬಾಲಿ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ವಿತರಕರು ಕೋರ್ಟ್ ಮೆಟ್ಟಿಲು ಏರಿದ್ದರು.[ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!]

ನಿಗದಿಯಂತೆ ಕಬಾಲಿ ಚಿತ್ರ ಜುಲೈ 22 ಕ್ಕೆ ಬಿಡುಗಡೆಯಾಗಲಿದೆ. ರಜನಿಕಾಂತ್ ಚಿತ್ರ ಪ್ರಪಂಚದಾದ್ಯಂತ ಏಕಕಾಲಕ್ಕೆ ತೆರೆ ಮೇಲೆ ಬರಲಿದ್ದು ಅಭಿಮಾನಿಗಳು ನಿರೀಕ್ಷೆ ಮುಗಿಲು ಮುಟ್ಟಿದೆ.

English summary
The Madras(Chennai) high court on Thursday declined to stay the release of "Kabali.A writ petition had been filed by Coimbatore district-based Sukra Films, seeking to recover Rs 89 lakh unpaid, but promised, dues to distributors and theatre-owners who had suffered financial losses in releasing Rajinikanth's last film "Lingaa."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X