ಜಯಾ ಹಾಗೂ ಕರುಣಾನಿಧಿ ನಡುವಿನ ಗೆಳೆತನ ಹಾಗೂ ಹಗೆತನ

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಡಿಸೆಂಬರ್ 06: ತಮಿಳುನಾಡಿನಲ್ಲಿ ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಹೆಸರುಗಳು ಎಂಜಿ ರಾಮಚಂದ್ರನ್, ಜೆ ಜಯಲಲಿತಾ ಹಾಗೂ ಕರುಣಾನಿಧಿ.

ಈ ಮೂವರು ದಿಗ್ಗಜರ ಕುರಿತಂತೆ ಮಣಿರತ್ನಂ ಅವರು 'ಇರುವರ್' ಚಿತ್ರದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಆದರೆ, ಕರುಣಾ ಹಾಗೂ ಜಯಾ ನಡುವೆ ಇದ್ದ ಬದ್ಧ ವೈರತ್ವ ಈಗ ಜಯಾ ಅವರ ಸಾವಿನೊಂದಿಗೆ ಅಂತ್ಯ ಕಂಡಿದೆ. [ಜಯಲಲಿತಾ ಸೀರೆಯನ್ನು ಡಿಎಂಕೆ ಸದಸ್ಯ ಎಳೆದಾಗ]

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಆಪ್ತ ಗೆಳೆತನ ದಿಂದ ರಾಜಕೀಯ ವೈರಿಗಳಾಗಿ ಇಬ್ಬರು ನಡೆದುಕೊಂಡ ರೀತಿ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದು ಬಿಟ್ಟಿದೆ. ಆದರೆ, ರಾಜಾಜಿ ಹಾಲ್ ನಲ್ಲಿ ಪಾರ್ಥೀವ ಶರೀರವಾಗಿ ಮಲಗಿರುವ ಪುರಚ್ಚಿ ತಲೈವಿ ಅವರಿಗೆ ಅಂತಿಮ ನಮನ, ಸಂತಾಪ ಸೂಚಿಸಿದವರ ಪೈಕಿ ಹಿರಿಯ ರಾಜಕಾರಣಿ ಎಂ ಕರುಣಾನಿಧಿ ಅವರು 'fame will last forever' ಎಂದು ನೀಡಿದ ಸಂದೇಶ ಹಲವರ ಹುಬ್ಬೇರಿಸಿರಬಹುದು. ಆದರೆ, ಒಂದು ಕಾಲದ ಗೆಳೆತನ ನಂತರ ಹಗೆತನವಾಗಿ ಬೆಳೆದಿದ್ದು ಈಗ ಇತಿಹಾಸ.['ಅಮ್ಮ' ಜೆ ಜಯಲಲಿತಾ ವಿಧಿವಶ]

ದ್ವೇಷ ಬೆಳೆದಿದ್ದು ಹೇಗೆ? ಏಕೆ?

ದ್ವೇಷ ಬೆಳೆದಿದ್ದು ಹೇಗೆ? ಏಕೆ?

ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸ್ಥಾಪಕ ಅಣ್ಣಾ ದುರೈ ಅವರಿದ್ದ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು. ನಂತರ ಅಣ್ಣಾ ಅವರ ಅಕಾಲಿಕ ನಿಧನ, ಎಂಜಿಆರ್ ಸಿಎಂ ಆಗಿದ್ದು, ಜಯಾ ರಾಜ್ಯಸಭೆ ಸದಸ್ಯಯಾಗಿ ನಂತರ ಎಂಜಿಆರ್ ರಿಂದ ರಾಜಕೀಯ ಪಾಠ ಕಲಿತಿದ್ದು, ಕರುಣಾನಿಧಿಯನ್ನು ಬದಿಗೊತ್ತಿ ಎಐಎಂಡಿಎಂಕೆ ಸ್ಥಾಪಿಸಿ ಅಧಿಕಾರಕ್ಕೆ ತಂದಿತ್ತು ಒಂದು ಹಂತದ ಗೆಲುವಾಗಿತ್ತು.

ಎಂಜಿಆರ್ ನಿಧನ ನಂತರದ ದಿನಗಳು

ಎಂಜಿಆರ್ ನಿಧನ ನಂತರದ ದಿನಗಳು

ಆದರೆ, ಎಂಜಿಆರ್ ನಿಧನ ನಂತರ ಅವರ ಪತ್ನಿ ಜಾನಕಿ ಅವರು ಸಿಎಂ ಆಗಿದ್ದು, ಜೆ ಜಯಲಲಿತಾ ಅವರಿಗೆ ಇರುಸು ಮುರುಸು ಉಂಟಾಗಿ, ಪಕ್ಷ ಒಡೆದಿದ್ದು, ಇದರ ಲಾಭ ಪಡೆದ ಕರುಣಾನಿಧಿ ಅಧಿಕಾರಕ್ಕೆ ಬಂದಿದ್ದು ಮತ್ತೊಂದು ಮಜಲು. ಇದಾದ ಬಳಿಕ ಜಯಾ ರಾಜಕೀಯವಾಗಿ ಅತ್ಯಂತ ಚಾಣಕ್ಷ ನಡೆ ಇಡುತ್ತಾ, ಕರುಣಾ ಪ್ರತಿ ನಡೆಯನ್ನು ಧಿಕ್ಕರಿಸಿ ಮುನ್ನಡೆದರು.

ಕೆಟ್ಟ ತಿರುವು ಪಡೆದ ಹಗೆತನ

ಕೆಟ್ಟ ತಿರುವು ಪಡೆದ ಹಗೆತನ

ಒಂದು ಕಾಲದ ಗೆಳೆಯರನ್ನು ರಾಜಕೀಯ ದ್ವೇಷಿಗಳನ್ನಾಗಿ ಪರಿವರ್ತಿಸಿ ಬಹುಕಾಲವಾಗಿತ್ತು. ಹಗೆತನಕ್ಕಾಗಿ ಅಧಿಕಾರ ಸ್ಥಾಪನೆ ಉದ್ದೇಶ ಇಟ್ಟುಕೊಂಡ ಇಬ್ಬರು, ದ್ವೇಷದಿಂದಲೇ ಸಾರ್ಜಜನಿಕರಿಗೆ ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಾ ಬಂದರು. ಪ್ರತಿ ಬಾರಿ ಎರಡು ಪಕ್ಷಗಳು ಅಧಿಕಾರಕ್ಕೆ ಬರುವ ಜನಬಲ, ದ್ವೇಷ ರಾಜಕಾರಣ ಕಾರಣವಾಯಿತು. ಪಕ್ಷದ ಕಾರ್ಯಕರ್ತರ ನಡುವೆ ರಾಜಕೀಯ ಸಂಘರ್ಷ ಮುಂದುವರೆಯ ತೊಡಗಿತು.

ಸೇಡಿನ ರಾಜಕೀಯ

ಸೇಡಿನ ರಾಜಕೀಯ

1989ರಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಕರುಣಾ ಹಾಗೂ ಜಯಾ ನಡುವಿನ ಕಿತ್ತಾಟ, ಅಸಭ್ಯ ಮಟ್ಟದ ಪದ ಬಳಕೆ, ಜಯಾ ಮೇಲೆ ಹಲ್ಲೆ, ಜಯಾ ಸೀರೆ ಎಳೆಯಲು ಯತ್ನ ಎಲ್ಲವೂ ಕರುಣಾ ಅವರನ್ನು ಬಹುವಾಗಿ ಕಾಡಿದ್ದಿರಬಹುದು. ಜಯಾ ಕೂಡಾ ಕರುಣಾನಿಧಿ ಅವರನ್ನು ರಾತ್ರೋರಾತ್ರಿ ಅರೆಸ್ಟ್ ಮಾಡಿಸಿ ಸೇಡು ತೀರಿಸಿಕೊಂಡರು. ಸೇಡಿನಿಂದಲೇ ಇಬ್ಬರು ರಾಜಕೀಯ ನಡೆ ಇಡುತ್ತಾ ರಾಜ್ಯವನ್ನು ತಮ್ಮದೇ ಆದ ರೀತಿಯಲ್ಲಿ ಬೆಳೆಸಿದರು.

ದೇಶದ ಪ್ರಭಾವಿ ರಾಜಕಾರಣಿಗಳು

ದೇಶದ ಪ್ರಭಾವಿ ರಾಜಕಾರಣಿಗಳು

ಕರುಣಾ ಅವರಿಗೆ ಬಹುಪತ್ನಿತ್ವದ ಸಂಸಾರ ಮಕ್ಕಳ ಬಲವಿದ್ದರೆ, ಜಯಾ ಅವರಿಗೆ ಅಭಿಮಾನಿಗಳು, ನಿಷ್ಠಾವಂತರ ಬೆಂಬಲ ರಾಜಕೀಯ ಶ್ರೀರಕ್ಷೆಯಾಯಿತು. ಆದರೆ, ವಿವಾದಗಳು, ಭ್ರಷ್ಟಾಚಾರದ ನಡುವೆ ದೇಶದ ಪ್ರಭಾವಿ ರಾಜಕಾರಣಿಗಳಾಗಿ ಉಳಿಯುವಲ್ಲಿ ಇಬ್ಬರೂ ಕೂಡಾ ಯಶಸ್ವಿಯಾದರು. ಕರುಣಾ ಅವರ ಸಿನಿಮಾ ಸಾಹಿತ್ಯ ಎಂಜಿಆರ್ ಹಾಗೂ ಜಯಾ ಅವರ ನಟನೆಯ ಈಗಲೂ ಜನ ಮಾನಸದಿಂದ ಮರೆಯಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
For those in Tamil Nadu who follow politics and films closely, Manirathnam's political drama Iruvar, is easily identifiable as a representation of political and personal lives of two prominent faces of Tamil Nadu.
Please Wait while comments are loading...