ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೀರಿಟ್ಟು ಪ್ರಮಾಣ ವಚನ ಸ್ವೀಕರಿಸಿದ ಪನ್ನೀರ್

By Mahesh
|
Google Oneindia Kannada News

ಚೆನ್ನೈ, ಸೆ.29: ತಮಿಳುನಾಡಿನ 'ಅಮ್ಮ' ಜಯಲಲಿತಾ ಅವರು ಜೈಲುಪಾಲಾದ ಹಿನ್ನೆಲೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶ ಮತ್ತೆ ಓ ಪನ್ನೀರ್ ಸೆಲ್ವಂ ಅವರಿಗೆ ಸಿಕ್ಕಿದೆ. ಸೆಲ್ವಂ ಅವರು ಸೋಮವಾರ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚಹಾ ಅಂಗಡಿಯವ ಎರಡನೇ ಬಾರಿ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ 'ಪುರುಚ್ಚಿ ತಲೈವಿ' ಅನುಪಸ್ಥಿತಿಯಿಂದ ನೊಂದು ಪನ್ನೀರ್ ಕಣ್ಣೀರಿಟ್ಟರಂತೆ.

ಓಪಿಎಸ್ ಎಂದು ಕರೆಯಲ್ಪಡುವ ಸೆಲ್ವಂ ಅವರು ಮುಖ್ಯಮಂತ್ರಿ ಅಲ್ಲದೆ ಲೋಕೋಪಯೋಗಿ ಸಚಿವ, ವಿತ್ತ ಸಚಿವ, ಶಾಸಕಾಂಗ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.ಇಂದಿಗೂ ಊರಿಗೆ ತೆರಳಿದಾಗ ರಾಜಕೀಯ ಮರೆಯುವ ಸೆಲ್ವಂ ಕೃಷಿಕರಾಗಿ, ಚಹಾ ಅಂಗಡಿ ಮಾಲೀಕರಾಗಿ ನಿಮಗೆ ಕಾಣ ಸಿಗುತ್ತಾರೆ. [ಹೈಕೋರ್ಟ್‌ ಮೊರೆ ಹೋದ ಜಯಲಲಿತಾ]

Jayalalithaa loyalist O Panneerselvam Sworn In as new Tamil Nadu CM

ಸೆಲ್ವಂ ಅವರಿಗೆ ರಾಜ್ಯಪಾಲ ರೋಸಯ್ಯ ಪ್ರಮಾಣ ಪ್ರತಿಜ್ಞಾ ವಿಧಿ ಬೋಧಿಸುವುದನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟಿವಿ ಮೂಲಕ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ವೀಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಅದರೆ, ತಮಿಳುನಾಡಿನ ಬಹುತೇಕ ಚಾನೆಲ್ ಗಳು ಚೆನ್ನೈನ ರಾಜಭವನದ ದರ್ಬಾರ್ ಹಾಲ್ ನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದ ನೇರ ಪ್ರಸಾರ ಮಾಡಿಲ್ಲ ಎಂಬ ಸುದ್ದಿ ತಡವಾಗಿ ಬಂದಿದೆ.

ಒಕ್ಕೊರಲ ಆಯ್ಕೆ ಪನ್ನೀರ್ : ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಸೇರಿರುವ ಜಯಲಲಿತಾ ಅವರು ಸಿಎಂ ಪಟ್ಟ ಹಾಗೂ ಶಾಸಕ ಸ್ಥಾನ ಎರಡನ್ನು ಕಳೆದುಕೊಂಡಿದ್ದಾರೆ.

ಎಐಎಡಿಎಂಕೆ ಶಾಸಕಾಂಗ ಸಭೆಯಲ್ಲಿ ಒಮ್ಮತದಿಂದ ಪೆರಿಯಕುಲಂ ಕ್ಷೇತ್ರದ ಶಾಸಕ ಪನ್ನೀರ್ ಸೆಲ್ವಂ ಅವರನ್ನು ನೂತನ ನಾಯಕರಾಗಿ ಆಯ್ಕೆ ಮಾಡಲಾಗಿ, ರಾಜ್ಯಪಾಲರು ಹೊಸ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದು, ಇಂದು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ 'ಅಮ್ಮ' ಇಲ್ಲದೇ ಸಮಾರಂಭ ನಡೆಯುವುದು ಹೇಗೆ ಎಂದು ಪನ್ನೀರ್ ಸೆಲ್ವಂ ಪ್ರತಿಭಟನೆ ನಡೆಸಿದ್ದು ಎಲ್ಲವೂ ನಡೆದು ಹೋಗಿದೆ. ['ಅಮ್ಮಾ'ನಿಗಾಗಿ ಪ್ರಾಣಬಿಟ್ಟ 15 ಮಂದಿ ]

2001ರಲ್ಲಿ ತಾನ್ಸಿ ಭೂ ಹಗರಣ ಪ್ರಕರಣದಲ್ಲಿ ಸೆ.21, 20೦1ರಂದು ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಕಾಯ್ದೆ ಆನ್ವಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2003ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಜಯಲಲಿತಾ ಆರೋಪ ಮುಕ್ತಗೊಂಡು ಖುಲಾಸೆ ಹೊಂದಿದ್ದರು. ಅಂದು ತಮ್ಮ ಅಧಿಕಾರ ಉಳಿಸಿಕೊಳ್ಳಲು ಹಿರಿತನದ ಆಧಾರವನ್ನು ಲೆಕ್ಕಿಸದೆ ಥೇವರ್ ಸಮುದಾಯಕ್ಕೆ ಸೇರಿದ ತನ್ನ ನಿಷ್ಠಾವಂತ ಸೇವಕ ಪನ್ನೀರ್ ಸೆಲ್ವಂರನ್ನು ಸಿಎಂ ಸ್ಥಾನದಲ್ಲಿ ಜಯಾ ಕೂರಿಸಿ ರಿಮೋಟ್ ಕಂಟ್ರೋಲ್ ಸಿಎಂ ಆಗಿ ವರ್ತಿಸಿದ್ದರು.

English summary
Jayalalithaa loyalist and Tamil Nadu Finance Minister O Panneerselvam on Monday sworn in as new chief minister after the AIADMK supremo was convicted and sent to jail for four years in a corruption case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X