ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಹತ್ಯೆ ಮಾಡಲಾಗಿದೆ: ಪಾಂಡ್ಯನ್ ಆರೋಪ

|
Google Oneindia Kannada News

ಚೆನ್ನೈ, ಫೆಬ್ರವರಿ 7: ಜಯಲಲಿತಾ ಅವರ ಸಾವು ಸಹಜವಲ್ಲ. ಅಮ್ಮನನ್ನು ಹತ್ಯೆ ಮಾಡಲಾಗಿದೆ. ಆ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು ಎಂದು ಎಐಎಡಿಎಂಕೆ ರಾಜ್ಯಸಭಾ ಮಾಜಿ ಸದಸ್ಯ ಮನೋಜ್ ಪಾಂಡಿಯನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪೋಯೆಸ್ ಗಾರ್ಡನ್ ನ ಮನೆಯಲ್ಲಿ ಅಮ್ಮ ಕೆಳಗೆ ಬಿದ್ದಿದ್ದರು. ಆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಚಿಕಿತ್ಸೆ ಬಗ್ಗೆ ಯಾವುದೇ ಮಾಹಿತಿ ನೀಡದೆ ಗೋಪ್ಯವಾಗಿಡಲಾಯಿತು ಎಂದು ಪಾಂಡ್ಯನ್ ಆರೋಪಿಸಿದ್ದಾರೆ

ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಆಗೋದು ತಮಗಿಷ್ಟವಿಲ್ಲ ಎಂದು ಜಯಲಲಿತಾ ಅವರು ನನ್ನ ಬಳಿ ಹೇಳಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಶಶಿಕಲಾ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವ ಮತ್ತು ತಮಿಳುನಾಡು ಮುಖ್ಯಮಂತ್ರಿ ಆಗುವ ಅರ್ಹತೆ ಇಲ್ಲ ಎಂದಿದ್ದಾರೆ.[ಜಯಾ ಚಿಕಿತ್ಸೆಗೆ 5.5 ಕೋಟಿ ಖರ್ಚು ಮತ್ತು ಇತರ 9 ಸಂಗತಿ]

'Jayalalithaa didn't want Sasikala to be TN CM'

ಜಯಲಲಿತಾ ಆವರ ಸಾವಿನ ನಂತರ ನಾನೆಲ್ಲೂ ಆಚೆ ಬರಲಿಲ್ಲ. ಆದರೆ ಎಂಜಿಆರ್ ಹಾಗೂ ಜಯಲಲಿತಾ ಅವರ ಆಶೀರ್ವಾದ ಇರುವುದರಿಂದ ಶಶಿಕಲಾ ಪ್ರಮಾಣವಚನ ಸಾಧ್ಯವಾಗಲಿಲ್ಲ. ಶಶಿಕಲಾ ಅವರು ಮುಂಚೂಣಿಗೆ ಬರುವುದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದು ಪಾಡಿಯನ್ ಹೇಳಿದ್ದಾರೆ.

ತಮಿಳುನಾಡು ಸರಕಾರ ಹೇಗೆ ಪತ್ರಿಕಾಗೋಷ್ಠಿ ನಡೆಸುವುದಕ್ಕೆ ಸಾಧ್ಯ? ವಿಚಾರ ಕೋರ್ಟ್ ನಲ್ಲಿದೆ ಎಂದು ಅವರು ಪ್ರಶ್ನಿಸಿದರು.

English summary
Jayalalithaa told me once that she didn't want SasikalaNatarajan to be TN CM, said by AIADMK ex MLA Manoj Pandian in Chennai Press meet on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X