ತಮಿಳುನಾಡಿನ ಶೇ.33 ಶಾಸಕರ ಮೇಲಿದೆ ಕ್ರಿಮಿನಲ್ ಪ್ರಕರಣ

ಚೆನ್ನೈ, ಮಾರ್ಚ್ 11: ತಮಿಳುನಾಡು ವಿಧಾನಸಭೆಯ ಶೇ.33ಕ್ಕೂ ಅಧಿಕ ಶಾಸಕರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಶಾಸಕರು ಖುದ್ದಾಗಿ, ಘೋಷಿಸಿಕೊಂಡಿರುವ ದಾಖಲೆಗಳನ್ನು ಆಧರಿಸಿ ಅಸೋಸಿಯೇಷನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್ಸ್(ಎಡಿಆರ್) ಈ ವರದಿಯನ್ನು ನೀಡಿದೆ.

ವಿಧಾನಸಭೆಯ 204 ಶಾಸಕರ ಪೈಕಿ 68 ಶಾಸಕರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದರಲ್ಲಿ 38 ಶಾಸಕರು ಗಂಭೀರವಾದ ಅಪರಾಧಗಳನ್ನು ಎದುರಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ 12ನೇ ಮಾರ್ಚ್‌ರಂದು ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 20 ಮಾರ್ಚ್ ನಾಮಪತ್ರ ಪರಿಶೀಲನೆ ನಡೆಯಲಿದೆ.

ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನವಾಗಿದೆ. ಏಪ್ರಿಲ್ 6ರಂದು ತಮಿಳುನಾಡಿನ ಎಲ್ಲ 234 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ತಮಿಳುನಾಡು ವಿಧಾನಸಭೆಯ ಅವಧಿಯು ಮೇ 24ರಂದು ಅಂತ್ಯಗೊಳ್ಳಲಿದೆ.

ಅಪರಾಧ ಸಾಬೀತಾದರೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ

ಅಪರಾಧ ಸಾಬೀತಾದರೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ

ಅಂದರೆ, ಈ ಪ್ರಕರಣಗಳು ಜಾಮೀನು ರಹಿತವಾಗಿದ್ದು,ಅಪರಾಧ ಸಾಬೀತಾದರೆ ಕನಿಷ್ಠ 5 ವರ್ಷಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ. ತಮಿಳುನಾಡು ವಿಧಾನಸಭೆಯಲ್ಲಿ ಕೇವಲ 78 ಶಾಸಕರ ವಯಸ್ಸು 25 ರಿಂದ 50ರ ಒಳಗಿದೆ ಅಂದರೆ, ಶೇ.38 ಶಾಸಕರು ಮಾತ್ರ 50ರ ವಯೋಮಿತಿ ಒಳಗಿದ್ದವರಾಗಿದ್ದಾರೆ. 125 ಶಾಸಕರ ವಯಸ್ಸು 51 ರಿಂದ 70 ರ ಒಳಗಿದೆ, ಓರ್ವ ಶಾಸಕ 77 ವರ್ಷದವರಾಗಿದ್ದಾರೆ. ಒಟ್ಟು 204 ಶಾಸಕರಲ್ಲಿ ಕೇವಲ 17 ಮಂದಿ ಮಾತ್ರ ಮಹಿಳೆಯರಿದ್ದಾರೆ.

ಯಾವ ಪಕ್ಷದ ಎಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ

ಯಾವ ಪಕ್ಷದ ಎಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ

ಪಕ್ಷವಾರು ಮಾಹಿತಿಯನ್ನು ನೋಡಿದರೆ 86 ಶಾಸಕರ ಪೈಕಿ ಡಿಎಂಕೆಯ 40 ಶಾಸಕರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 149 ಶಾಸಕರ ಪೈಕಿ ಎಐಡಿಎಂಕೆಯ 23 ಶಾಸಕರು ಹಾಗೂ ಕಾಂಗ್ರೆಸ್‌ನ ನಾಲ್ವರು ಶಾಸಕರು ಕ್ರಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಇವರಲ್ಲಿ ಡಿಎಂಕೆಯ 22, ಎಐಡಿಎಂಕೆಯ 13, ಕಾಂಗ್ರೆಸ್‌ನ ಇಬ್ಬರು ಶಾಸಕರು ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಎಂಟು ಶಾಸಕರ ಮೇಲೆ ಕೊಲೆ ಪ್ರಕರಣವಿದ್ದರೆ, ಇಬ್ಬರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣಗಳಿವೆ. ಅಂದರೆ, ಈ ಪ್ರಕರಣಗಳು ಜಾಮೀನು ರಹಿತವಾಗಿದ್ದು,ಅಪರಾಧ ಸಾಬೀತಾದರೆ ಕನಿಷ್ಠ 5 ವರ್ಷಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ.

157 ಶಾಸಕರು ಕೋಟ್ಯಧಿಪತಿಗಳು

157 ಶಾಸಕರು ಕೋಟ್ಯಧಿಪತಿಗಳು

ಎಡಿಆರ್ ವರದಿ ಪ್ರಕಾರ 204 ಶಾಸಕರಲ್ಲಿ 157 ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ, ಅಂದರೆ ವಿಧಾನಸಭೆಯಲ್ಲಿನ 77 ಶಾಸಕರು ಒಂದು ಕೋಟಿ ರೂ.ಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ.

ಶಾಸಕರ ವಿದ್ಯಾರ್ಹತೆ ಹೇಗಿದೆ?

ಶಾಸಕರ ವಿದ್ಯಾರ್ಹತೆ ಹೇಗಿದೆ?

ವಿಧಾನಸಭೆಯಲ್ಲಿನ ಶೇ.44 ಶಾಸಕರು ದ್ವಿತೀಯ ಪಿಯುಸಿಯಲ್ಲಿ ಕೂಡ ಉತ್ತೀರ್ಣರಾಗಿಲ್ಲ, ಅಂದರೆ 89 ಶಾಸಕರ ವಿದ್ಯಾಭ್ಯಾಸವು ಐದರಿಂದ 12ನೇ ತರಗತಿ ಒಳಗಿದೆ. 110 ಶಾಸಕರು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣವನ್ನು ಮುಗಿಸಿದ್ದಾರೆ, ಮೂವರು ಶಾಸಕರು ಡಿಪ್ಲೊಮೊ ಪದವೀಧರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+