ಚಿತ್ರಗಳು : ಹಳಿತಪ್ಪಿದ ಕನ್ಯಾಕುಮಾರಿ-ಬೆಂಗಳೂರು ರೈಲು

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 05 : ತಮಿಳುನಾಡಿನ ವೆಲ್ಲೂರು ಬಳಿ ಶುಕ್ರವಾರ ಕನ್ಯಾಕುಮಾರಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಹಳಿತಪ್ಪಿದ್ದು, 13 ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ಅಪಘಾತದಿಂದಾಗಿ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಸಾಗುವ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಶುಕ್ರವಾರ ಮುಂಜಾನೆ 4.30ರ ಸುಮಾರಿಗೆ ತಮಿಳುನಾಡಿನ ಸೋಮನಾಯಕನ್‌ಪಟ್ಟಿ ಮತ್ತು ಪಟ್ಚೂರ್‌ ನಡುವಿನ ನಾಂತ್ರಪಲ್ಲಿ ಎಂಬಲ್ಲಿ ಕನ್ಯಾಕುಮಾರಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿತ್ತು. ಅಪಘಾತದಲ್ಲಿ 13 ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಹಳಿತಪ್ಪಿದ ಕನ್ಯಾಕುಮಾರಿ-ಬೆಂಗಳೂರು ರೈಲು]

ಅಪಘಾತ ನಡೆದ ಸ್ಥಳಕ್ಕೆ ತೆರಳಿದ ರೈಲ್ವೆ ರಕ್ಷಣಾದಳದ ಸಿಬ್ಬಂದಿಗಳು ಪ್ರಯಾಣಿಕರನ್ನು ರಕ್ಷಿಸಿದವು. ಈ ಅಪಘಾತದ ಕಾರಣದಿಂದಾಗಿ ಬೆಂಗಳೂರು-ಚೆನ್ನೈ ಮಾರ್ಗದ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಯಿತು. ರೈಲಿನಲ್ಲಿದ್ದ ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರಲು ಇಲಾಖೆಯೇ ವ್ಯವಸ್ಥೆ ಕಲ್ಪಿಸಿತು. [ಮೈಸೂರು-ಚೆನ್ನೈ ನಡುವೆ ಸೆಮಿ ಸ್ಪೀಡ್ ರೈಲು ಸಂಚಾರ]

ರೈಲು ಹಳಿಗಳಲ್ಲಿ ಬಿರುಕು ಉಂಟಾಗಿರುವುದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ರೈಲ್ವೆ ಇಲಾಖೆ ಘಟನೆ ಕುರಿತು ತನಿಖೆಗೆ ಆದೇಶ ನೀಡಿದ್ದು, ಅಂತಿಮ ವರದಿ ಬಂದ ಬಳಿಕ ಸ್ಪಷ್ಟಚಿತ್ರಣ ಲಭ್ಯವಾಗಲಿದೆ. ರೈಲ್ವೆ ಅಪಘಾತದ ಚಿತ್ರಗಳು ಇಲ್ಲಿವೆ....

ಹಳಿ ತಪ್ಪಿದ ರೈಲಿನ 4 ಬೋಗಿಗಳು

ಹಳಿ ತಪ್ಪಿದ ರೈಲಿನ 4 ಬೋಗಿಗಳು

ಶುಕ್ರವಾರ ಬೆಳಗ್ಗೆ ತಮಿಳುನಾಡಿನ ವೆಲ್ಲೂರು ಬಳಿ ಕನ್ಯಾಕುಮಾರಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ 4 ಬೋಗಿಗಳು ಹಳಿತಪ್ಪಿದ್ದು, 13 ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಹಲವು ರೈಲುಗಳ ಸಂಚಾರ ರದ್ದು

ಹಲವು ರೈಲುಗಳ ಸಂಚಾರ ರದ್ದು

ಈ ಅಪಘಾತದಿಂದಾಗಿ ಬೆಂಗಳೂರು-ಚೈನ್ನೈ ಮಾರ್ಗದಲ್ಲಿನ ರೈಲುಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಈ ಮಾರ್ಗದಲ್ಲಿ ಸಾಗುವ ಬೃಂದಾವನ ಎಕ್ಸ್‌ಪ್ರೆಸ್ ಮತ್ತು ಚೆನ್ನೈ-ಬೆಂಗಳೂರು ನಡುವಿನ ಡಬ್ಬಲ್ ಡೆಕ್ಕರ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಎಲ್ಲಿ ನಡೆಯಿತು ಅಪಘಾತ

ಎಲ್ಲಿ ನಡೆಯಿತು ಅಪಘಾತ

ಶುಕ್ರವಾರ ಮುಂಜಾನೆ 4.30ರ ಸುಮಾರಿಗೆ ತಮಿಳುನಾಡಿನ ಸೋಮನಾಯಕನ್‌ಪಟ್ಟಿ ಮತ್ತು ಪಟ್ಚೂರ್‌ ನಡುವಿನ ನಾಂತ್ರಪಲ್ಲಿ ಎಂಬಲ್ಲಿ ಕನ್ಯಾಕುಮಾರಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿತ್ತು.

ಸಹಾಯವಾಣಿ ಸಂಖ್ಯೆಗಳು

ಸಹಾಯವಾಣಿ ಸಂಖ್ಯೆಗಳು

ರೈಲು ಅಪಘಾತದ ಬಗ್ಗೆ ಮಾಹಿತಿ ನೀಡಲು ರೈಲ್ವೆ ಇಲಾಖೆ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳು 080- 2215 6553/2215 6554/22873103/23339162/25650308

ಹಳಿಗಳಲ್ಲಿನ ಬಿರುಕು ಕಾರಣ

ಹಳಿಗಳಲ್ಲಿನ ಬಿರುಕು ಕಾರಣ

ರೈಲು ಹಳಿಗಳಲ್ಲಿ ಬಿರುಕು ಉಂಟಾಗಿರುವುದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ರೈಲ್ವೆ ಇಲಾಖೆ ಘಟನೆ ಕುರಿತು ತನಿಖೆಗೆ ಆದೇಶ ನೀಡಿದ್ದು, ಅಂತಿಮ ವರದಿ ಬಂದ ಬಳಿಕ ಸ್ಪಷ್ಟಚಿತ್ರಣ ಲಭ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
5 coaches of a Kanyakumari-Bengaluru Island Express train derailed near Jolarpet, Tamil Nadu on Friday morning. Here is pictures.
Please Wait while comments are loading...