ವಿದ್ಯಾರ್ಥಿಗಳೇ ಯುಎಸ್ ಗೆ ಹೊರಡುವ ಮುನ್ನ ಒಮ್ಮೆ ಓದಿ

ಚೆನ್ನೈ, ಜೂ.18: ಅಮೆರಿಕದ ವಿವಿಧ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿ ತೆರಳಲು ಸಿದ್ದವಾಗಿರುವ ವಿದ್ಯಾರ್ಥಿಗಳಿಗೆ ಪೂರ್ವಭಾವಿ ಕಾರ್ಯಾಗಾರವನ್ನು ಜೂ.10ರಂದು ಹಮ್ಮಿಕೊಳ್ಳಲಾಗಿದೆ. ಎಜುಕೇಷನ್ ಯುಎಸ್ಎ ಸೆಂಟರ್ ಹಾಗೂ ಇಂಡಿಯಾ ಎಜುಕೇಷನ್ ಫೌಂಡೇಷನ್ ಚೆನ್ನೈನಲ್ಲಿ ಈ ಕಾರ್ಯಾಗಾರ ನಡೆಸುತ್ತಿದೆ/

ಜು.10ರಂದು ಬೆಳಗ್ಗೆ 9.30 ರಿಂದ 3 ಗಂಟೆ ತನಕ ಈ ಕಾರ್ಯಾಗಾರ ನಡೆಯಲಿದ್ದು, ಪ್ರಯಾಣ, ಎಫ್ 1 ವೀಸಾ ನಿಯಮದ ಬಗ್ಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಮೂಹದಿಂದ ಮಾಹಿತಿ ಸಿಗಲಿದೆ. ಯುಎಸ್ ನ ಶೈಕ್ಷಣಿಕ ವಾತಾವರಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನಕ್ಕೆ ಒಗ್ಗಿಕೊಂಡು ನಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬಹುದು.

EducationUSA

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಮುಂಚಿತವಾಗಿ ತಮ್ಮ ಸ್ಥಳವನ್ನು ಕಾಯ್ದಿರಿಸಬೇಕಾಗುತ್ತದೆ. ನೊಂದಣಿಗಾಗಿ ಕ್ಲಿಕ್ ಮಾಡಿ
ಹೆಚ್ಚಿನ ವಿವರಗಳಿಗೆ
ಇಮೇಲ್: [email protected]
ಕರೆ : 044-28574134
ಫೇಸ್ ಬುಕ್ ಪುಟ: ಎಜುಕೇಷನ್ ಯುಎಸ್ ಚೆನ್ನೈ ಕ್ಲಿಕ್ ಮಾಡಿ

ಎಜುಕೇಷನ್ ಯುಎಸ್ಎ:
ಸುಮಾರು 170 ದೇಶಗಳಲ್ಲಿ ಸಲಹಾ ಕೇಂದ್ರಗಳನ್ನು ಹೊಂದಿರುವ ಎಜುಕೇಷನ್ ಯುಎಸ್ಎಗೆ ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ಸ್ ಬ್ಯೂರೋ ಆಫ್ ಎಜುಕೇಷನ್ ಅಂಡ್ ಕಲ್ಚರಲ್ ಅಫೇರ್ಸ್ (ಇಸಿಎ) ಮಾನ್ಯತೆ ಇದೆ. ಯುಎಸ್ ನ ಶಿಕ್ಷಣ ಸಂಸ್ಥೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸಲಹೆಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ನೋಡಿ

ಇಂಡಿಯಾ ಎಜುಕೇಷನ್ ಫೌಂಡೇಷನ್ (ಯುಎಸ್ ಐಇಎಫ್): 1950ರಲ್ಲಿ ಸ್ಥಾಪಿತವಾದ ಯುಎಸ್ ಐಇಎಫ್, ಉಭಯ ದೇಶಗಳ ನಡುವೆ ಶೈಕ್ಷಣಿಕ ವಿನಿಯಮಕ್ಕಾಗಿ ಇರುವ ಸಂಸ್ಥೆ. ವಿದ್ಯಾರ್ಥಿಗಳಲ್ಲದೆ, ಪ್ರೊಫೆಸರ್, ವಿದ್ವಾಂಸರ ವಿನಿಮಯ ಕಾರ್ಯಕ್ರಮವೂ ನಡೆಯುತ್ತದೆ. ಫುಲ್ ಬ್ರೈಟ್-ನೆಹರೂ ಸ್ಕಾಲರ್ ಶಿಪ್ ಕೂಡಾ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ನೋಡಿ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+