ಡಿಎಂಕೆ ಮುಖ್ಯಸ್ಥ ಕರುಣಾ ನಿಧಿ ಮತ್ತೆ ಆಸ್ಪತ್ರೆಗೆ ದಾಖಲು

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಡಿಸೆಂಬರ್ 16: ದ್ರಾವಿಡ ಮುನ್ನೇತ್ರ ಕಳಗಂನ (ಡಿಎಂಕೆ) ಮುಖ್ಯಸ್ಥ, ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಗುರುವಾರ ತಡರಾತ್ರಿ ಮತ್ತೆ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಸಂಬಂಧ ಆಸ್ಪತ್ರೆಯು ಪ್ರಕಟಣೆಯನ್ನು ಹೊರಡಿಸಿದ್ದು, ಅವರಿಗೆ ಗಂಟಲಿನ ಸೊಂಕು ಮತ್ತು ಕರುಳಿನ ಸಮಸ್ಯೆಯಿದೆ ಎಂದು ತಿಳಿಸಿದೆ. ಅಲ್ಲದೆ ಅವರು ಕೇವಲ ಎಂಟು ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

Karuna nidhi

92 ವರ್ಷದ ಕರುಣಾನಿಧಿಯವರಿಗೆ ಅಜೀರ್ಣ ಮತ್ತು ಮೂತ್ರನಾಳದ ಸೋಂಕಿದೆ ಹೀಗಾಗಿ ಕಾವೇರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.[ಡಿಎಂಕೆ ಅಧ್ಯಕ್ಷ ಕರುಣಾನಿಧಿ ಆಸ್ಪತ್ರೆಗೆ ದಾಖಲು]

kaveri hospital

ಸೋಂಕಿನ ಕಾರಣದಿಂದಾಗಿ ಕರುಣಾನಿಧಿಯವರನ್ನು ಈ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು. ಅಲ್ಲದೆ ಡಿಸೆಂಬರ್ 1ರಂದು ಅವರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ ಎಂದು ಬಿಡುಗಡೆ ಗೊಳಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief of Dravida Munnetra Kazhagam (DMK), Dr M Karuanidhi has been hospitalised yet again. He was discharged after spending a week in the hospital just eight days ago.
Please Wait while comments are loading...